ಸೆ.30ರಂದು ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಪ್ರಕಟ

ಹೊಸದಿಲ್ಲಿ: ದೇಶದ ರಾಜಕೀಯ ಹಾಗೂ ಸಾಮಾಜಿಕ ಚಿತ್ರಣವನ್ನೇ ಬದಲಿಸಿದ, 28 ವರ್ಷಗಳಿಂದಲೂ ಇತ್ಯರ್ಥವಾಗದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಇದೇ ಸೆಪ್ಟೆಂಬರ್ 30 ರಂದು ಹೊರಬೀಳಲಿದೆ.

ಪ್ರಕರಣದ ಪ್ರಮುಖ ಆರೋಪಿಗಳಾದ ಬಿಜೆಪಿಯ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಹಿರಿಯ ನಾಯಕರಾದ ಉಮಾ ಭಾರತಿ ಅವರನ್ನು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಸುಮಾರು 15ನೇ ಶತಮಾನದಷ್ಟು ಹಳೆಯದಾದ ಬ್ರಾಬರಿ ಮಸೀದಿಯನ್ನು 199೨ರಲ್ಲಿ ಧ್ವಂಸಗೊಳಿಸಿದ ಪ್ರಕರಣದಲ್ಲಿ ಈ ಮೂವರು ಪ್ರಮುಖ ಆರೋಪಿಗಳಾಗಿದ್ದಾರೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ ವಿಶೇಷ ನ್ಯಾಯಾಲಯವು ಜುಲೈ 24ರಂದು ನಡೆಸಿದ ವಿಡಿಯೊ ಕಾನ್ಫರೆನ್ಸ್ನಲ್ಲಿ ಎಲ್.ಕೆ.ಅಡ್ವಾಣಿ (92) ಅವರು ತಮ್ಮ ಹೇಳಿಕೆ ನೀಡಿದ್ದರು. ಅದಕ್ಕೂ ಮುನ್ನ ಜೋಶಿ (86) ಅವರು ಕೂಡ ತಮ್ಮ ಹೇಳಿಕೆ ನೀಡಿದ್ದರು. ಇಬ್ಬರೂ ಸಹ ತಮ್ಮ ಮೇಲಿನ ಎಲ್ಲ ಆರೋಪಗಳನ್ನು ನಿರಾಕರಿಸಿದ್ದರು.

ಜುಲೈನಲ್ಲಿ ಉಮಾ ಭಾರತಿ ಎನ್ಡಿಟಿವಿಗೆ ಪ್ರತಿಕ್ರಿಯಿಸಿ, ʻಇದು ಅಪ್ರಸ್ತುತವಾಗಿದೆʼ. ನನ್ನನ್ನು ಗಲ್ಲಿಗೇರಿಸಿದರೆ, ಆಶೀರ್ವಾದ ಎಂದುಕೊಳ್ಳುತ್ತೇನೆ. ನಾನು ಜನಿಸಿದ ಸ್ಥಳದಲ್ಲಿ ಸಂತೋಷ ನೆಲೆಸಿರುತ್ತದೆʼ ಎಂದು ಹೇಳಿದ್ದರು.

Exit mobile version