ಹಾಕಿ ‘ಬೇಸಿಕ್’ ಕೋರ್ಸ್‌ ಆನ್‌ಲೈನ್‌ನಲ್ಲೂ ಲಭ್ಯ

ನವದೆಹಲಿ, ಅ. 16:  ಕೋಚಿಂಗ್ ಎಜುಕೇಶನ್ ಪಾತ್‌ವೇ ಲೆವೆಲ್ ‘ಬೇಸಿಕ್’ ಕೋರ್ಸ್ ಆನ್‌ಲೈನ್‌ನಲ್ಲಿ ಆರಂಭಿಸುವುದಾಗಿ ಹಾಕಿ ಇಂಡಿಯಾ ಇಂದು ಮಾಧ್ಯಮಗಳಿಗೆ ಪ್ರಕಟಣೆ ನೀಡಿದೆ.

ಹಾಕಿ ಇಂಡಿಯಾವು ಇದೇ ಮೊದಲ ಬಾರಿಗೆ ಮುಕ್ತ ವೇದಿಕೆಯ ಮೂಲಕ ಅರ್ಜಿ ಆಹ್ವಾನಿಸಿದ್ದು, ಆಸಕ್ತ ತರಬೇತುದಾರರು ಅರ್ಜಿ ಸಲ್ಲಿಸಬಹುದಾಗಿ ತಿಳಿಸಿದೆ. ಆನ್‌ಲೈನ್ ಕೋರ್ಸ್‌ಗೆ ಕೇವಲ 60 ಸೀಟ್‌ಗಳು ಮಾತ್ರ ಲಭ್ಯವಿದ್ದು, ಮೊದಲು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದೆ.

ಅರ್ಜಿ ಸಲ್ಲಿಸಲು, ಆಸಕ್ತ ಅರ್ಜಿದಾರರಿಗೆ ಕನಿಷ್ಠ 3 ವರ್ಷಗಳ ಕಾಲ ರಾಷ್ಟ್ರೀಯ ಮಟ್ಟದಲ್ಲಿ ಆಡಿರಬೇಕು ಇಲ್ಲವೇ ಜಿಲ್ಲೆ, ಶಾಲೆ ಅಥವಾ ವಿಶ್ವವಿದ್ಯಾಲಯದ ಮಟ್ಟದಲ್ಲಿ ಹಾಕಿ ತಂಡವನ್ನು ತರಬೇತುಗೊಳಿಸಿರಬೇಕು ಅಥವಾ ಅಖಿಲ ಭಾರತ ವಿಶ್ವವಿದ್ಯಾಲಯ ಮಟ್ಟದಲ್ಲಿ ಕನಿಷ್ಠ 3 ವರ್ಷಗಳವರೆಗೆ ಆಡಿರಬೇಕು ಎಂದು ಮಾಧ್ಯಮ ಪ್ರಕಟಣೆ ತಿಳಿಸಿದೆ.

Exit mobile version