ಹೊಸ ಕೈಗಾರಿಕಾ ನೀತಿ ಜಾರಿಗೆ ಮುಂದಾಗಿದ್ಯಾ ರಾಜ್ಯ ಸರ್ಕಾರ..?

ಬೆಂಗಳೂರು ಸೆ.3: ಹೊಸ ಕೈಗಾರಿಕಾ ನೀತಿ ಜಾರಿಗೆ ಮುಂದಾಗಿದ್ದೇವೆ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ. ಕೈಗಾರಿಕೆ ಅಂದ್ರೆ ಬೆಂಗಳೂರು ಕೇಂದ್ರಿತ ಅನ್ನುವ ಹಾಗಾಗಿದೆ. ಕೈಗಾರಿಕಾ ಅಭಿವೃದ್ಧಿ ಟು ಟೈರ್ ನಗರಗಳಿಗೂ ವಿಸ್ತರಣೆ ಆಗಬೇಕಿದೆ. ಬೇರೆ ರಾಜ್ಯಗಳ ಕೈಗಾರಿಕಾ ನೀತಿಗಳನ್ನೂ ಅಧ್ಯಯನ ಮಾಡ್ತಿದೀವಿ. ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕೈಗಾರಿಕಾ ನೀತಿ ಜಾರಿ ಮಾಡ್ತೇವೆ ಅವರು ತಿಳಿಸಿದ್ದಾರೆ.

ಹಿಂದಿನ ಸರ್ಕಾರ ಜಾಗತಿಕ ಬಂಡವಾಳ ಹೂಡಿಕೆದಾರರ ಸಮ್ಮೇಳನಕ್ಕೆ ತೀರ್ಮಾನಿಸಿತ್ತು. ಸಿಎಂ‌ ಜೊತೆ ಚರ್ಚಿಸಿ ಬಂಡವಾಳ ಹೂಡಿಕೆದಾರ ಸಮ್ಮೇಳನ ಬಗ್ಗೆ ನಿರ್ಧಾರ ಕೈಗೊಳ್ತೇವೆ. ಮುಂದಿನ ಜನವರಿಗೆ ಬಂಡವಾಳ ಹೂಡಿಕೆದಾರ ಸಮ್ಮೇಳನ ನಡೆಸುವ ಪ್ರಸ್ತಾಪ ಇದೆ

ಆರ್ಥಿಕ‌ ಹಿಂಜರಿತ ಸಧ್ಯಕ್ಕೆ ರಾಷ್ಟ್ರೀಯ ಮಟ್ಟದಲ್ಲಿದೆ. ರಾಜ್ಯದ ಮಟ್ಟಿಗೆ ಆರ್ಥಿಕ ಹಿಂಜರಿತದ ಬಿಸಿ ತಟ್ಟಿಲ್ಲ. ಇದು ತಾತ್ಕಾಲಿಕ ಆರ್ಥಿಕ ಹಿಂಜರಿತ ಅಷ್ಟೇ. ಹಿಂಜರಿತ ಸಧ್ಯದಲ್ಲೇ ಅಂತ್ಯವಾಗುವ ನಿರೀಕ್ಷೆ ಇದೆ. ನಾನು ಸಹ ಇಲಾಖಾರು ಪರಿಣಾಮಗಳ ಬಗ್ಗೆ ಅಧಿಕಾರಿಗಳಿಂದ ವರದಿ ಕೇಳಿದ್ದೇನೆ

ಸಿಬಿಐ, ಇಡಿ ದುರುಪಯೋಗ ಎಂಬ ಡಿಕೆಶಿ ಆರೋಪ ಪ್ರತಿಕ್ರಿಯೆ ನೀಡಿರುವ ಶೆಟ್ಟರ್ ಡಿಕೆಶಿಯವ್ರಿಗೆ ಹಾಗೆ ಅನಿಸ್ತಿದೆ. ಅವರ ವಿರುದ್ಧ ತನಿಖೆ ನಡೀತಿದೆ.ಹಾಗಾಗಿ ಅವರಿಗೆ ಹಾಗನಿಸ್ತಿರಬಹುದು. ಅವರ ಈ ಭಾವನೆಗೆ ನಾವು ಏನೂ ಮಾಡಕ್ಕಾಗಲ್ಲ.ಇಡಿ, ಸಿಬಿಐ, ಐಟಿ ಸ್ವಾಯತ್ತ ಸಂಸ್ಥೆಗಳು. ಕೇಂದ್ರದಿಂದ ಈ ಸಂಸ್ಥೆಗಳ ದುರುಪಯೋಗ ಆಗಿಲ್ಲ

ಜಿಂದಾಲ್ ಗೆ ಭೂಮಿ ಕೊಟ್ಟ ವಿಚಾರ ಮಾತನಾಡಿದ ಸಚಿವರು ಅದನ್ನು ವಾಪಸ್ ಪಡೆಯುವ ಬಗ್ಗೆ ಹಿಂದಿನ ಸರ್ಕಾರ ಸಂಪುಟ ಉಪಸಮಿತಿ ರಚಿಸಿತ್ತು. ಅದರ ವರದಿ ಏನು ಅಂತ ನೋಡಬೇಕು. ಪರಿಸ್ಥಿತಿ ಏನಿದೆ ಅಂತ ಸಮಗ್ರವಾಗಿ ಪರಿಶೀಲಿಸಿ ನಿರ್ಧಾರ ಕೈಗೊಳ್ತೀವಿ. ಸರ್ಕಾರ ರಚನೆಯಾಗಿ ಒಂದು ತಿಂಗಳಾಗದೆಯಷ್ಟೇ. ನಾನು ಇಲಾಖೆ ವಹಿಸಿಕೊಂಡು ಒಂದು ವಾರ ಆಗಿದೆ. ಜಿಂದಾಲ್ ವಿಚಾರದಲ್ಲಿ ಪರಿಶೀಲಿಸಿ ನಿರ್ಧಾರ ತಗೋತೀವಿ. ಇದರಲ್ಲಿ ಯಾವುದೇ ವಿಳಂಬ ಆಗಿಲ್ಲ ಎಂದಿದ್ದಾರೆ.

ಡಿಕೆ ಶಿವಕುಮಾರ್ ವಿಚಾರ ಮಾತನಾಡಿದ ಶೆಟ್ಟರ್ ಸಿಬಿಐ, ಇಡಿ ಸ್ವಾಯತ್ತ ಸಂಸ್ಥೆ. ಈ ಸಂಸ್ಥೆಗಳನ್ನ ಬಿಜೆಪಿ ಎಂದೂ ದುರುಪಯೋಗ ಮಾಡುವ ಕೆಲಸ ಮಾಡಿಲ್ಲ . ಅವರಿಗೆ ಆ ಥರ ಫೀಲ್ ಆದ್ರೆ ನಾವ್ ಏನೂ ಮಾಡೋಕೆ ಆಗಲ್ಲ.ಇಡಿ, ಸಿಬಿಐ ಕೇಸ್ ಇಂದು ನಿನ್ನೆಯದಲ್ಲ.ಮೊದಲಿನಿಂದಲೂ ಕೇಸ್ ನಡೆಯುತ್ತಿದೆ ಎಂಬುದಾಗಿ ತಿಳಿಸಿದ್ದಾರೆ.

Exit mobile version