೨೪ಗಂಟೆಯಲ್ಲಿ 1.20 ಲಕ್ಷ ಹೊಸ ಪ್ರಕರಣ ದಾಖಲು: 3,380 ಸಾವು

ನವದೆಹಲಿ, ಜೂ. 05: ಕಳೆದ 24 ಗಂಟೆ ಅವಧಿಯಲ್ಲಿ ದೇಶದಲ್ಲಿ 1,20,529 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 3,380 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ ೫೮ ದಿನಗಳಲ್ಲಿ ಒಂದು ದಿನದಲ್ಲಿ ದಾಖಲಾದ ಅತೀ ಕಡಿಮೆ ಪ್ರಕರಣಗಳು ಇದಾಗಿದೆ.

ಇದರೊಂದಿಗೆ ದೇಶದಲ್ಲಿ ಈವರೆಗೆ ಸೋಂಕಿತರಾದವರ ಸಂಖ್ಯೆ 2,86,94,879 ಆಗಿದ್ದು, 3,44,082 ಮಂದಿ ಮೃತಪಟ್ಟಿದ್ದಾರೆ. 2,67,95,549 ಮಂದಿ ಗುಣಮುಖರಾಗಿದ್ದಾರೆ. ಸದ್ಯ 15,55,248 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 22,78,60,317 ಡೋಸ್ ಲಸಿಕೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

Exit mobile version