12 ದೇಶಗಳ ಪ್ರವಾಸಿಗರಿಗೆ ಸ್ಥಗಿತಗೊಳಿಸಿದ ಯುಎಇ

ಇಸ್ಲಾಮಾಬಾದ್: ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಪಾಕಿಸ್ತಾನ ಸೇರಿದಂತೆ 12 ದೇಶಗಳ ಪ್ರವಾಸಿಗರಿಗೆ ಹೊಸ ಭೇಟಿ ವೀಸಾ ವಿತರಣೆಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಿದೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ತಿಳಿಸಿದೆ.

ಪಾಕಿಸ್ತಾನ ಸೇರಿದಂತೆ ಪ್ರಮುಖವಾಗಿ ಟರ್ಕಿ, ಇರಾನ್, ಯೆಮೆನ್, ಸಿರಿಯಾ, ಇರಾಕ್, ಸೊಮಾಲಿಯಾ, ಲಿಬಿಯಾ, ಕೀನ್ಯಾ ಮತ್ತು ಅಫ್ಘಾನಿಸ್ತಾನದ ಪ್ರವಾಸಿಗರಿಗೆ ಭೇಟಿ ವಿಸಾವನ್ನು ಮುಂದಿನ ಪ್ರಕಟಣೆ ಬರುವವರೆಗೂ ಯುಎಇ ಸರ್ಕಾರ ತಾತ್ಕಾಲಿಕವಾಗಿ ನಿರ್ಬಂಧಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪಾಕಿಸ್ತಾನ ವಿದೇಶಾಂಗ ಕಚೇರಿ ವಕ್ತಾರ ಜಾಹಿದ್‌ ಹಫೀಜ್‌‌ ಚೌಧರಿ, ಕೊರೊನಾದ 2ನೇ ಅಲೆಯ ಭೀತಿಯ ಹಿನ್ನೆಲೆ ಯುಎಇ ಈ ತೀರ್ಮಾನ ಕೈಗೊಂಡಿದೆ ಎಂದು ನಾವು ಭಾವಿಸಿದ್ದೇವೆ. ಈ ಕುರಿತು ಯುಎಇ ಅಧಿಕಾರಿಗಳಿಂದ ಪಾಕ್‌ ಸರ್ಕಾರ ಅಧಿಕೃತ ದೃಢೀಕರಣವನ್ನು ಕೇಳುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಆದರೆ ಈಗಾಗಲೇ ನೀಡಲಾಗಿರುವ ವೀಸಾಗಳಿಗೆ ಈ ತೀರ್ಮಾನ ಅನ್ವಯಿಸುವುದಿಲ್ಲಎಂದು ವಿದೇಶಾಂಗ ಕಚೇರಿ ತಿಳಿಸಿದೆ.

Exit mobile version