Bengaluru: ಬೆಂಗಳೂರು ವಿಶ್ವ ವಿದ್ಯಾಲಯದ ವಿಭಜನೆಯ ನಂತರ 269 ಕಾಲೇಜುಗಳು ಜ್ಞಾನಭಾರತಿ (13 colleges added for bu) ವಿಶ್ವ ವಿದ್ಯಾಲಯ ಪಾಲಾಗಿದೆ.
ಹೊಸದಾಗಿ 16 ಕಾಲೇಜುಗಳ ಆರಂಭಕ್ಕೆ ಅನುಮತಿ ಕೋರಿ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಇದರಲ್ಲಿ 13 ಕಾಲೇಜುಗಳಿಗೆ (College) ಮಾನ್ಯತೆಯನ್ನು ನೀಡಿದೆ. ಅಗತ್ಯ ಮೂಲ ಸೌಕರ್ಯವನ್ನು
ಹೊಂದಿರದ ಉಳಿದ ಮೂರು ಕಾಲೇಜುಗಳಿಗೆ (13 colleges added for bu) ಮಾನ್ಯತೆಯನ್ನು ನೀಡಿಲ್ಲ.

ಬೆಂಗಳೂರು (Bengaluru) ವಿಶ್ವ ವಿದ್ಯಾಲಯದ ಜ್ಞಾನಭಾರತಿ ವ್ಯಾಪ್ತಿಗೆ ಹೊಸದಾಗಿ 13 ಕಾಲೇಜುಗಳು ಸೇರ್ಪಡೆಯಾಗಿದ್ದು, ಈಗ ಇದು ಬಹು ಬೇಡಿಕೆ ಇರುವ ಕೋರ್ಸ್‌ಗಳನ್ನು ಆಫರ್ ಮಾಡುತ್ತಿದೆ.
ಸ್ಥಳೀಯ ವಿಚಾರಣಾ ಸಮಿತಿಯು ಸಿಂಡಿಕೇಟ್ (Candidate) ಸಭೆಯಲ್ಲಿಈ 13 ಕಾಲೇಜುಗಳಿಗೆ ಭೇಟಿ ನೀಡಿ ಮಾನ್ಯತೆ ಶಿಫಾರಸು ಮಾಡಿದ್ದು,ಅವುಗಳನ್ನು ಅಂಗೀಕರಿಸಿದೆ. ಅಂದರೆ ಒಟ್ಟು ವಿವಿಯ ವ್ಯಾಪ್ತಿಗೆ
285 ಕಾಲೇಜುಗಳು ಒಳಪಡಲಿದೆ.
ಬೇಡಿಕೆ ಇರುವ ಕೋರ್ಸ್‌ಗಳು
ವಾಣಿಜ್ಯ ಉದ್ಯೋಗಾಧಾರಿತ ವಿಷಯಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಈ ಹಿನ್ನೆಲೆಯಲ್ಲಿಈ 13 ಕಾಲೇಜುಗಳು ಪ್ರಮುಖವಾಗಿ ಬಿಬಿಎ (BBA), ಬಿಸಿಎ, ಬಿ.ಕಾಂ (B.com), ಬಿ.ಎಸ್ಸಿ- ಫ್ಯಾಷನ್ ಅಪೇರಲ್ ಡಿಸೈನ್,
ಎಂಸಿಎ (MCA), ಎಂಬಿಎ (MBA), ಕೋರ್ಸ್‌ಗಳನ್ನು ಪ್ರಮುಖವಾಗಿ ಪರಿಚಯಿಸುತ್ತಿದ್ದು, ಪ್ರತಿ ಕೋರ್ಸ್‌ಗೆ 30 ರಿಂದ 60 ಹಾಗೂ ಎಂಬಿಎ-ಎಂಸಿಎಗೆ 120 ಸೀಟುಗಳ ಭರ್ತಿಗೆ ಅವಕಾಶ ಕಲ್ಪಿಸಿದೆ.
ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಅನುಮೋದನೆಯಾನುಸಾರ ಎಂಬಿಎ , ಎಂಸಿಎ (MCA) ಕೋರ್ಸ್‌ಗಳ ಸಂಯೋಜನೆ, ವಿದ್ಯಾರ್ಥಿಗಳ ಪ್ರಮಾಣ ಹೆಚ್ಚಳಕ್ಕೆ ಸಂಬಂಧಪಟ್ಟಂತೆ
ಸ್ಥಳೀಯ ವಿಚಾರಣಾ ಸಮಿತಿಗಳ ಶಿಫಾರಸುಗಳನ್ನು ಅನುಮೋದಿಸಲು ಸಿಂಡಿಕೇಟ್ ನಿರ್ಣಯಿಸಿದೆ.

2 ಸಭೆಗಳು:
ಒಂದು ಶೈಕ್ಷಣಿಕ ವರ್ಷದ ಅವಧಿಯಲ್ಲಿ ಹೊಸ ಕಾಲೇಜು (College) ಸೇರಿದಂತೆ ಹಳೆಯ ಖಾಸಗಿ ಕಾಲೇಜುಗಳು ವಿಶ್ವವಿದ್ಯಾಲಯ ನಾಮನಿರ್ದೇಶಿತ ಸದಸ್ಯರನ್ನು ಆಹ್ವಾನಿಸಿ ಕಡ್ಡಾಯವಾಗಿ ಕನಿಷ್ಠ 2
‘ಗವರ್ನಿಂಗ್ ಕೌನ್ಸೆಲ್’ (Governing Council) ಸಭೆಗಳನ್ನು ನಡೆಸಬೇಕೆಂದು ಸುತ್ತೋಲೆ ಹೊರಡಿಸುವಂತೆ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ.
2 ಸೆಕ್ಷನ್ಗಳು:
ಹಲವು ಕಾಲೇಜುಗಳು ಅಗತ್ಯಕ್ಕಿಂತ ಹೆಚ್ಚಿನ ಇನ್‌ಟೇಕ್ (Intake) ಪಡೆದು ತದನಂತರ ಆ ಕೋರ್ಸ್‌ಗಳಿಗೆ (Course) ಬೇಡಿಕೆ ಇಲ್ಲವೆಂದು ಕೋರ್ಸ್ ರದ್ದು ಮಾಡುವಂತೆ ಮನವಿ ಸಲ್ಲಿಸುವ ಪದ್ಧತಿ ಕೂಡ
ಇರುವುದರಿಂದ ಅನುಮತಿಯನ್ನು ಎರಡು ಸೆಕ್ಷನ್‌ಗೆ (Section) ಮಾತ್ರ ಸೀಮಿತಗೊಳಿಸಲಾಗಿದ್ದು, ಇನ್ನು ಎರಡಕ್ಕಿಂತ ಹೆಚ್ಚಿನ ಸೆಕ್ಷನ್‌ಗಳಿಗೆ ಅನುಮತಿ ನೀಡುವುದಿಲ್ಲವೆಂದು ಸ್ಪಷ್ಟಪಡಿಸಿದೆ.
ಲಾಭಗಳು:
ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಖಾಸಗಿ ಕಾಲೇಜುಗಳು ಹೆಚ್ಚಿನ ಸಂಖ್ಯೆಯಲ್ಲಿಅನುಮತಿ ಪಡೆದರೆ ವಿವಿಗೂ ಆರ್ಥಿಕವಾಗಿ ಲಾಭ ಸಿಗಲಿದೆ. ಯಾಕೆಂದರೆ ಮಾನ್ಯತೆ ಮತ್ತು ಪ್ರತಿ ವರ್ಷ ಮಾನ್ಯತಾ
“ಹಾರಿಹೊಯ್ತಾ ಸಮಾಜವಾದ ?”ಸದ್ದಿಲ್ಲದೇ ಮಗನಿಗೆ ಸಾಂವಿಧಾನಿಕ ಹುದ್ದೆ ನೀಡಿದ ಸಿದ್ದರಾಮಯ್ಯ
ನವೀಕರಣಕ್ಕಾಗಿ ವಿವಿಯು ಲಕ್ಷಾಂತರ ರೂ. ಶುಲ್ಕ ವಿಧಿಸುತ್ತಿದ್ದು, ಇದು ವಿವಿಗೆ ಆರ್ಥಿಕವಾಗಿ ಲಾಭವಾಗಲಿದೆ. ಮತ್ತು ಒಂದು ಕೋರ್ಸ್‌ಗೆ 22 ಸಾವಿರ ರೂ.ಗಳಿಂದ 1.54ಲಕ್ಷ ರೂ.ಗಳವರೆಗೆ ಶುಲ್ಕ ಪಡೆಯುತ್ತದೆ.
ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿ ಹೊಸ ಕಾಲೇಜುಗಳು ಸೇರ್ಪಡೆಯಾಗಿದ್ದು, ಇನ್ನು ಅನುಮತಿ ನೀಡುವ ಮುನ್ನ ಬೇಡಿಕೆಯ ಕೋರ್ಸ್‌ಗಳನ್ನು ಪರಿಶೀಲಿಸಿ ಆನಂತರ ನೀಡಿದ್ದೇವೆ. ಇದರಿಂದ ಹೆಚ್ಚಿನ
ವಿದ್ಯಾರ್ಥಿಗಳಿಗೆ ಕೋರ್ಸ್‌ನ (Course) ಆಯ್ಕೆಗೆ ಅವಕಾಶ ನೀಡಿದಂತಾಗುತ್ತದೆ ಎಂದು ಎಸ್.ಎಂ.ಜಯಕರ ಕುಲಪತಿ (S.M Jayakara Kulapati), ಬೆಂಗಳೂರು ವಿವಿ ಅವರು ಹೇಳಿದ್ದಾರೆ.
ಭವ್ಯಶ್ರೀ ಆರ್.ಜೆ