Visit Channel

ಕಾಬೂಲ್‌ನಲ್ಲಿ ಉಗ್ರರ ದಾಳಿಗೆ 13ಸೈನಿಕರು ಸೇರಿ 60 ಬಲಿ

1afghlate

ಕಾಬೂಲ್ ಆ 27 : ಅಫ್ಘಾನಿಸ್ತಾನದಲ್ಲಿ ಈಗಾಗಲೇ ತಾಲಿಬಾನ್‌ ಉಗ್ರ ಸಂಘಟನೆ ತಮ್ಮ ಸರ್ಕಾರವನ್ನು ರಚಿಸುವ ಸನಿಹದಲ್ಲಿದ್ದರೆ ಅತ್ತ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಉಗ್ರರ ಅಟ್ಟಹಾಸ ಮುಗಿಲು ಮುಟ್ಟುತ್ತಿದೆ.

ಕಾಬೂಲ್‌ನ ವಿಮಾನ ನಿಲ್ದಾಣದ ಹೊರವಲಯದಲ್ಲಿ ಅತ್ಮಾಹುತಿ ಬಾಂಬ್ ದಾಳಿ ನಡೆದಿದ್ದು. ಎರಡು ಆತ್ಮಾಹುತಿ ದಾಳಿ ಮೂಲಕ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಅಬ್ದುಲ್ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಬ್ಬೇ ಗೇಟ್ ಬಳಿ ಮೊದಲ ಬಾಂಬ್ ದಾಳಿ ನಡೆದಿದೆ. ಎರಡನೇ ಆತ್ಮಾಹುತಿ ಬಾಂಬ್ ದಾಳಿ ಬ್ಯಾರೊನ್ ಹೊಟೆಲ್ ಬಳಿ ನಡೆದಿದೆ. ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಗುರುವಾರ ನಡೆದ ಅವಳಿ ಆತ್ಮಹತ್ಯಾ ಬಾಂಬ್‌ ದಾಳಿ ಮತ್ತು ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 13 ಅಮೆರಿಕಾ ಸೈನಿಕರು ಸೇರಿದಂತೆ 60 ಜನರು ಸಾವನ್ನಪ್ಪಿದ್ದಾರೆ. ತಾಲಿಬಾನ್ ನಿಯಂತ್ರಿತ ಅಘ್ಘಾನ್‌ನಿಂದ ಜನರನ್ನು ಸ್ಥಳಾಂತರ ಮಾಡುತ್ತಿದ್ದ ವೇಳೆ ಘಟನೆ ಸಂಭವಿಸಿದೆ.

ಈ ದುರಂತದಲ್ಲಿ 60 ಅಘ್ಘಾನ್‌ ನಾಗರಿಕರು, 13 ಅಮೆರಿಕಾದ ಸೈನಿಕರು ಸಾವನ್ನಪ್ಪಿದ್ದು ಮೃತಪಟ್ಟವರ ಸಂಖ್ಯೆ 73 ದಾಟಿದೆ. ಘಟನೆಯಲ್ಲಿ 18 ಯೋಧರು, 143ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ ಎಂದು ಅಘ್ಘಾನ್ ಮತ್ತು ಅಮೆರಿಕಾ ಸೆಂಟ್ರಲ್ ಕಮಾಂಡ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಫ್ಘಾನಿಸ್ತಾನದ ಜನತೆ ದೇಶ ತೊರಯಲು ಕಾಬೂಲ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಈಗಾಗಲೇ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಕಾಬೂಲ್ ವಿಮಾನ ನಿಲ್ದಾಣದ ಸುತ್ತ ನೆರೆದಿದ್ದಾರೆ. ಹಲವು ವಿದೇಶಿ ವಿಮಾನಗಳು ಆಯಾ ದೇಶದವರನ್ನು ಸ್ಥಳಾಂತರ ಮಾಡಲು ಕಾಬೂಲ್‌ನಲ್ಲಿ ಕಾರ್ಯಚರಣೆ ನಡೆಸುತ್ತಿದೆ. ಇದೇ ವೇಳೆ  ಈ ದಾಳಿ ನಡೆದಿದೆ. ಪೋಲ್ಯಾಂಡ್. ಡೆನ್ಮಾರ್ಕ್ ಹಾಗೂ ಬೆಲ್ಜಿಯಂ ದೇಶ ತಮ್ಮವರನ್ನು ಸ್ಥಳಾಂತರ ಮಾಡುತ್ತಿದೆ ಎಂದು ಅಫ್ಘಾನ್‌ ಸುದ್ದಿವಾಹಿನಿಗಳು ಸ್ಪಷ್ಟಪಡಿಸಿವೆ.

 

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.