ಫೋನ್‌ ಜಾಸ್ತಿ ನೋಡ್ಬೇಡ ಅಂದಿದ್ದೇ ತಪ್ಪಾಯ್ತಾ? ಅಮ್ಮ ಬೈದಿದ್ದಾರೆ ಎಂದು ಆತ್ಮಹತ್ಯೆ ಮಾಡಿಕೊಂಡ 13 ವರ್ಷದ ಬಾಲಕಿ

Gujarat : ತಂತ್ರಜ್ಞಾನ (Technology) ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನವನ್ನು ತ್ವರಿತವಾಗಿ ಮಕ್ಕಳು ಕೂಡ ಅಳವಡಿಸಿಕೊಳ್ಳುತ್ತಿದ್ದಾರೆ. ಅನೇಕ ಮಕ್ಕಳು ಇದರಿಂದ (13year old girl commits suicide) ಮೊಬೈಲ್‌ಗೆ ಅಂಟಿಕೊಂಡಿದ್ದಾರೆ. ಸ್ಮಾರ್ಟ್ ಫೋನ್ (Smart phone) ಅಭ್ಯಾಸವನ್ನು ಮಕ್ಕಳಿಂದ ಹೋಗಲಾಡಿಸಲು ಪಾಲಕರು ಹರಸಾಹಸ ಪಡುತ್ತಿದ್ದಾರೆ.

ಓದಲು ಅಥವಾ ಊಟ ಮಾಡಲು ಫೋನ್ ಬೇಕು ಎಂದು ಮಕ್ಕಳು ಹಠ ಮಾಡುತ್ತಿದ್ದರೆ ಈ ಅಭ್ಯಾಸದಿಂದ ಅವರನ್ನು ಹೇಗೆ ದೂರವಿಡುವುದು ಎಂದು ತಿಳಿಯದೆ ಇತ್ತೀಚೆಗೆ ಅನೇಕ ಪೋಷಕರು ಚಿಂತಿತರಾಗಿದ್ದಾರೆ.

ಮಕ್ಕಳ ಮಾನಸಿಕ ಆರೋಗ್ಯ, ಅಧ್ಯಯನ, ಸಾಮಾಜಿಕ ಸಂಬಂಧಗಳು, ನಿದ್ದೆ ಇತ್ಯಾದಿಗಳ ಮೇಲೆ ಸ್ಮಾರ್ಟ್ ಫೋನ್ ಗೆ ಒಗ್ಗಿಕೊಳ್ಳುವುದರಿಂದ (13year old girl commits suicide) ನಕಾರಾತ್ಮಕ ಪರಿಣಾಮ ಬೀರುತ್ತದೆ.

ಗುಜರಾತ್‌ನ ಜಾಮ್‌ನಗರದಲ್ಲಿ ಹದಿಹರೆಯದ ಹುಡುಗಿಯೊಬ್ಬಳಿಗೆ ಅತಿಯಾದ ಮೊಬೈಲ್ ಫೋನ್ ಚಟ ಮಾರಕವಾಗಿದೆ.

13 ವರ್ಷದ ಬಾಲಕಿಯೊಬ್ಬಳು ಫೋನ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಳೆಂದು ತನ್ನ ತಾಯಿ ನಿಂದಿಸಿದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೃತ ಬಾಲಕಿಯನ್ನು ಸೂರತ್ ಮೂಲದ ಜೆನಿಶಾ ಅಭಂಗಿ (Jenisha Abhangi) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ : https://vijayatimes.com/mango-mela-in-lalbagh/

ಜಾಮ್‌ನಗರದ ಧ್ರೋಲ್ ತಾಲೂಕಿನ ಪಿಪರ್ತೋಡ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಬಾಲಕಿ ತನ್ನ ಚಿಕ್ಕಪ್ಪನ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ.

ಜೆನ್ಶಿಯಾ ಮತ್ತು ಆಕೆಯ ಪೋಷಕರು ಬೇಸಿಗೆ ರಜೆಗಾಗಿ ಹುಡುಗಿಯ ತಾಯಿಯ ಸಹೋದರನ ಮನೆಗೆ ಬಂದಿದ್ದಾರೆ,

ಬಾಲಕಿ ಏಳನೇ ತರಗತಿ ಪರೀಕ್ಷೆ ಮುಗಿಸಿ ಸಂಬಂಧಿಕರ ಮನೆಗೆ ಬಂದಿದ್ದಾಳೆ ಎಂದು ತಿಳಿದುಬಂದಿದೆ.

ಮೃತ ಬಾಲಕಿ ಗೆನ್ಶಿಯಾಳ ತಾಯಿ ಊರ್ಮಿಳಾ ಶುಕ್ರವಾರ ಫೋನ್‌ನಲ್ಲಿ ಹೆಚ್ಚು ಸಮಯ ಕಳೆದಿದ್ದಕ್ಕಾಗಿ ಆಕೆ ಮತ್ತು ಆಕೆಯ ಸಹೋದರನನ್ನು ನಿಂದಿಸಿದ್ದಾರೆ.

ನಂತರ, ಬಾಲಕಿ ಆಕೆಯ ಕೋಣೆಗೆ ಹೋಗಿದ್ದಳು ಆದರೆ, ಮನೆಯವರು ಆಕೆ ಹೊರಗೆ ಆಟವಾಡುತ್ತಿದ್ದಾಳೆ ಎಂದು ಭಾವಿಸಿದ್ದರು, ಅವಳು ಹಿಂತಿರುಗದಿದ್ದಾಗ, ಮನೆಯವರು ಹುಡುಕಲಾರಂಭಿಸಿದರು.

ಇದನ್ನೂ ಓದಿ : https://vijayatimes.com/post-office-new-scheme/

ಸ್ವಲ್ಪ ಸಮಯದ ನಂತರ, ಕೋಣೆಯ ಬಾಗಿಲು ತೆರೆದಾಗ, ಮನೆಯವರು ಆಕೆಯ ದುಪಟ್ಟಾ ಸೀಲಿಂಗ್ ಫ್ಯಾನ್‌ಗೆ ನೇತಾಡುತ್ತಿರುವುದು ಕಂಡು ಬಂದಿದೆ ಎಂದು ಹುಡುಗಿಯ ಕುಟುಂಬ ತಿಳಿಸಿದೆ.

ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ನಂತರ ತಿಳಿದುಬಂದಿದೆ, ಆದರೆ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು.

ಅಲ್ಲದೆ, ಘಟನೆಯ ಬಗ್ಗೆ ಮಾತನಾಡಿದ ಲಾಲ್‌ಪುರ ಪೊಲೀಸ್ ಠಾಣೆಯ (Lalpura Police Station) ಪೊಲೀಸ್ ಅಧಿಕಾರಿಯೊಬ್ಬರು:

“ನಾವು ಕುಟುಂಬದ ಹೇಳಿಕೆಯನ್ನು ದಾಖಲಿಸಿಕೊಂಡಿದ್ದೇವೆ, ಹುಡುಗಿ ದಿನವಿಡೀ ತನ್ನ ಮೊಬೈಲ್ ಫೋನ್‌ನೊಂದಿಗೆ ಆಟವಾಡುತ್ತಿದ್ದಳು,

ಈ ಸಂದರ್ಭದಲ್ಲಿ, ಆಕೆಯ ಪೋಷಕರು ಮತ್ತು ಸಂಬಂಧಿಕರು ಚಟಕ್ಕೆ ಒಳಗಾಗಿದ್ದಕ್ಕಾಗಿ ಅವಳನ್ನು ಗದರಿಸಿದ್ದರು ಎಂದು ಅಧಿಕಾರಿ ಮಾಧ್ಯಮಕ್ಕೆ ತಿಳಿಸಿದರು. ಜತೆಗೆ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Exit mobile version