vijaya times advertisements
Visit Channel

ಕೊರೊನಾ ಎಫೆಕ್ಟ್‌ ನಡುವೆ ನಗರ ಪಾಲಿಕೆ ಅಧಿಕಾರಿಗಳ ದರ್ಪ |Video|

ಗಾಡಿ-ತೆಗಿ-ಇಲ್ಲದಿದ್ದರೆ-ನೂರು-ರೂಪಾಯಿ-ಲಂಚ-ಎಂದ-ಪೊಲೀಸ್‌

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ನೂರು ರೂ. ಲಂಚ ಕೊಡಲಿಲ್ಲ ಎಂದು ಮೊಟ್ಟೆ ಮಾರುತ್ತಿದ್ದ ಹುಡುಗನೊಬ್ಬನ ತಳ್ಳು ಗಾಡಿಯನ್ನು ದೂಡಿ ಅದರಲ್ಲಿದ್ದ ಮೊಟ್ಟೆಯಲ್ಲಾ ಒಡೆದು ಹಾಕಿರುವ ಘಟನೆ ಮಧ್ಯಪ್ರದೇಶದ ಇಂಧೋರ್ ನಲ್ಲಿ ನಡೆದಿದೆ.

ವೈರಲ್ ವಿಡಿಯೋದಲ್ಲಿ ಸೆರೆಯಾಗಿರುವಂತೆ, ತಳ್ಳು ಗಾಡಿಯಲ್ಲಿ ಮೊಟ್ಟೆ ಮಾರುತ್ತಿದ್ದ 14 ವರ್ಷದ ಹುಡುಗನಿಗೆ ಬೆಳಗ್ಗೆ ಪುರಸಭೆ ಅಧಿಕಾರಿಗಳು ಬಂದು ಗಾಡಿಯನ್ನು ತೆಗೆಯುವಂತೆ ಎಚ್ಚರಿಕೆ ನೀಡಿದ್ದರು. ಇಲ್ಲದಿದ್ದರೆ ನೂರು ರೂಪಾಯಿ ಲಂಚ ಕೊಡಬೇಕೆಂದು ಬೇಡಿಕೆ ಇಟ್ಟಿದ್ದರು. ಆದರೆ ಹುಡುಗ ಅದಕ್ಕೆ ಒಪ್ಪದಿದ್ದಾಗ ಅಧಿಕಾರಿಗಳು ಗಾಡಿಯನ್ನು ಬುಡಮೇಲು ಮಾಡಿ, ಎಲ್ಲಾ ಮೊಟ್ಟೆಗಳು ಒಡೆದು ಹಾಕಿದರು ಎಂದು ವೀಡಿಯೋದಲ್ಲಿರುವ ಹುಡುಗ ಅಧಿಕಾರಿಗಳ ಮೇಲೆ ಆರೋಪಿಸಿದ್ದಾನೆ.

ಅಲ್ಲದೆ ಕೋವಿಡ್ 19 ವೈರಸ್ ನಿಂದಾಗಿ ದಿನಂಪ್ರತಿ ಮೊಟ್ಟೆ ವ್ಯಾಪಾರವೂ ಕಡಿಮೆಯಾಗಿದೆ. ಇದೀಗ ಪುರಸಭೆ ಅಧಿಕಾರಿಗಳು ಮೊಟ್ಟೆ ಒಡೆದು ಹಾಕಿದ್ದರಿಂದ ಮತ್ತಷ್ಟು ಆರ್ಥಿಕ ಹೊರೆ ಬಿದ್ದಂತಾಗಿದೆ ಎಂದು ಹುಡುಗ ಅಳಲು ತೋಡಿಕೊಂಡಿರುವುದಾಗಿ ವರದಿ ಹೇಳಿದೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗಳೆ ಎಂಜಲುಕಾಸಿಗಾಗಿ ಮೊಟ್ಟೆ ಗಾಡಿಯನ್ನು ಬುಡಮೇಲು ಮಾಡಿ ಮೊಟ್ಟೆಯನ್ನು ಒಡೆದು ಹಾಕಿರುವ ಈ ವಿಡಿಯೋ ಎಲ್ಲೆಡೆ ಹರಿದಾಡಿದ್ದು, ಈ ಬಗೆಗೆ ಸ್ಥಳೀಯರು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

Latest News

ರಾಜಕೀಯ

“ಸಂಸತ್ತಿನಲ್ಲಿ ನನಗೆ ಕಹಿ ಅನುಭವಗಳಾಗಿವೆ” :  ಎಚ್.ಡಿ.ದೇವೇಗೌಡರ

ಆಯಾ ಸದನಗಳನ್ನು ಉದ್ದೇಶಿಸಿ ಮಾತನಾಡಲು ಸಂಸದರಿಗೆ ನೀಡಿದ ಸಮಯವನ್ನು ಮರುಪರಿಶೀಲಿಸಬೇಕು” ಎಂದು ರಾಜ್ಯಸಭೆ ಮತ್ತು ಲೋಕಸಭೆಯ ಸ್ಪೀಕರ್‌ಗಳನ್ನು ದೇವೇಗೌಡರು  ಒತ್ತಾಯಿಸಿದರು.

ದೇಶ-ವಿದೇಶ

BJP ಹಾರ್ದಿಕ್‌ಪಟೇಲ್‌ಗೆ ಜಯ, ಕಾಂಗ್ರೆಸ್‌ನ  ಜಿಗ್ನೇಶ್‌ಮೆವಾನಿಗೆ ಸೋಲು ; BJP ಪ್ರಚಂಡ ಗೆಲುವಿಗೆ ಕಾರಣ?

ಬಾರಿಯ ವಿಧಾನಸಭಾ ಚುನಾವಣೆಯಲ್ಲಿ  ಒಟ್ಟಾರೆಯಾಗಿ ಕಾಂಗ್ರೆಸ್‌ ಪಕ್ಷ ಹೀನಾಯ ಸೋಲು ಕಂಡಿದೆ. ಬಿಜೆಪಿಯ ಪ್ರಚಂಡ ಗೆಲುವಿಗೆ ಪ್ರಮುಖ ಕಾರಣ

ದೇಶ-ವಿದೇಶ

ಗುಜರಾತ್‌ನಲ್ಲಿ ದಾಖಲೆಯತ್ತ ಬಿಜೆಪಿ, ಹಿಮಾಚಲದಲ್ಲಿ ಬಿಜೆಪಿ – ಕಾಂಗ್ರೆಸ್‌ ನಡುವೆ ನೇರ ಹಣಾಹಣಿ

ಆಡಳಿತಾರೂಢ ಪಕ್ಷವಾಗಿದ್ದ ಬಿಜೆಪಿಯು ಕೇವಲ 25 ಸ್ಥಾನಗಳಿಸಿ 2ನೇ ಸ್ಥಾನಕ್ಕೆ ಕುಸಿದಿದೆ. ಆದರು ಅಧಿಕಾರದ ಗದ್ದಿಗೇರಲು ಆಡಳಿತಾರೂಢ ಬಿಜೆಪಿ ಆಪರೇಷನ್ ಕಮಲಕ್ಕೆ ಭರದಸಿದ್ಧತೆ ನಡೆಸುತಿದೆ.