ವಿದ್ಯುನ್ಮಾನ ಮತಯಂತ್ರಗಳು ಹಾಗೂ ಮತದಾನ ದೃಢೀಕರಣ ರಸೀತಿ ಯಂತ್ರಗಳ ವಿವಿಧ ಘಟಕಗಳ (EVM-VVPat Trade Secret) ತಯಾರಕರು, ಪೂರೈಕೆದಾರರ ಹೆಸರುಗಳು ಮತ್ತು ಸಂಪರ್ಕ
ವಿವರಗಳನ್ನು ಬಹಿರಂಗಪಡಿಸಲು ಎಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (Electronics Corporation of India Limited) ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್
(Bharat Electronics Limited) ನಿರಾಕರಿಸಿದೆ.
ಇವಿಎಂ ಹಾಗೂ ವಿವಿ ಪ್ಯಾಟ್ (EVM-VVPAT) ವಿಶ್ವಾಸಾರ್ಹತೆ ವಿಚಾರವಾಗಿ ಮಾಹಿತಿ ಹಕ್ಕು ಆಯ್ದೆ ಅಡಿಯಲ್ಲಿ ಕೇಳಿದ್ದ ಪ್ರಶ್ನೆಗೆ ಉತ್ತರ ನೀಡದ ಕೇಂದ್ರ ಚುನಾವಣೆ ಆಯೋಗ ನಡೆ ಬಗ್ಗೆ ಕೇಂದ್ರ ಮಾಹಿತಿ
ಆಯೋಗವು ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ ಇದೀಗ ಬಿಇಎಲ್ ಮತ್ತು (EVM-VVPat Trade Secret) ಇಸಿಐಎಲ್ ನೀಡಿರುವ ಉತ್ತರವು ಮುನ್ನೆಲೆಗೆ ಬಂದಿದೆ.
ವಿದ್ಯುನ್ಮಾನ ಮತಯಂತ್ರ ಮತ್ತು ಮತದಾರರ ಪರಿಶೀಲಿಸಬಹುದಾದ ಪೇಪರ್ ಆಡಿಟ್ ಟ್ರಯಲ್ (Paper Audit Trial) ಜೋಡಣೆಯಲ್ಲಿ ಬಳಸುವ ವಿವಿಧ ಘಟಕಗಳ ತಯಾರಕರು ಮತ್ತು ಪೂರೈಕೆದಾರರ
ವಿವರಗಳನ್ನು ಕೋರಿ ಮಾಹಿತಿ ಹಕ್ಕು ಕಾರ್ಯಕರ್ತ ವೆಂಕಟೇಶ್ ನಾಯಕ್ (Venkatesh Nayak) ಅವರು ಇಸಿಐಎಲ್ ಮತ್ತು ಬಿಇಎಲ್ಗೆ ಪ್ರತ್ಯೇಕವಾಗಿ ಒಂದೇ ರೀತಿಯ ಮಾಹಿತಿ ಹಕ್ಕು ಅರ್ಜಿಗಳನ್ನು ಸಲ್ಲಿಸಿದ್ದರು.
ಈ ಅರ್ಜಿಗೆ ಉತ್ತರಿಸಿರುವ ಬಿಇಎಲ್ (BEL), ವಾಣಿಜ್ಯ ವ್ಯಾಪಾರ ರಹಸ್ಯ ಮತ್ತು ಬೌದ್ಧಿಕ ಆಸ್ತಿ ಹಕ್ಕು ಹಾಗೂ ಮಾಹಿತಿ ಬಹಿರಂಗಪಡಿಸುವಿಕೆಯಿಂದ ಮೂರನೇ ವ್ಯಕ್ತಿಯ ಸ್ಪರ್ಧಾತ್ಮಕ ಸ್ಥಾನಕ್ಕೆ ಹಾನಿಯನ್ನುಂಟು
ಮಾಡುತ್ತದೆ. ಎಂಬ ಕಾರಣವನ್ನು ನೀಡಿದೆ. ಕೋರಿರುವ ಮಾಹಿತಿಯು ವಾಣಿಜ್ಯ ರಹಸ್ಯಕ್ಕೆ ಸಂಬಂಧಿಸಿದೆ. ಆದ್ದರಿಂದ ಆರ್ಟಿಐ ಕಾಯಿದೆಯ (RTI Act) ಸೆಕ್ಷನ್ 8(1)(ಡಿ) ಅಡಿಯಲ್ಲಿ ವಿವರಗಳನ್ನು
ಒದಗಿಸಲಾಗುವುದಿಲ್ಲ ಎಂದು ಬಿಇಎಲ್ ಉತ್ತರಿಸಿರುವುದು ಗೊತ್ತಾಗಿದೆ.
ವಿವಿಪ್ಯಾಟ್ ಯಂತ್ರಗಳು ಬಂಡ ಮೇಲೆ ಮತದಾನದ ವ್ಯವಸ್ಥೆ ಮತ್ತಷ್ಟು ಪಾರದರ್ಶಕವಾಗಿದೆ. ಮತದಾನದ ವಿವರಗಳು ಕರಾರುವಕ್ಕಾಗಿ ತೋರಿಸುತ್ತದೆ ಹಾಗೂ ವಿವರಗಳ ಮುದ್ರಣ ಸಹ ಹೊರಬರುತ್ತದೆ. ಆದರೆ
ರಾಜಕೀಯ ಪಕ್ಷಗಳು ತಮ್ಮ ಸೋಲಿಗೆ ಮತಯಂತ್ರಗಳೇ (Voting Machines) ಕಾರಣ ಎಂದು ಆರೋಪಿಸಿದ್ದವು. ಯಂತ್ರಗಳನ್ನು ಟಾಂಪಾರ್ ಮಾಡುವಂತೆ ಪಂಥಾಹ್ವಾನ ನೀಡಿದಾಗ ಕೇವಲ ಎರಡು
ರಾಜಕೀಯ ಪಕ್ಷಗಳು ಮಾತ್ರ ಪರಿಶೀಲನೆ ನಡೆಸಿದ್ದವು. ಆದರೆ ಅವರಿಂದ ಟಾಂಪಾರ್ ಮಾಡಲು ಸಾಧ್ಯವಾಗಲಿಲ್ಲ ಎಂದು ಗೌತಮ ವಿವರಿಸಿದ್ದನ್ನು ಸ್ಮರಿಸಬಸಹುದು.
ಇದನ್ನು ಓದಿ: ಯೋಗ್ಯತೆಯಿಲ್ಲದ ನಾಲಾಯಕ್ ಚುನಾವಣಾ ಆಯೋಗ: ಮೋದಿ ಆಯ್ತು ಈಗ ಆಯೋಗದ ವಿರುದ್ದ ನಟ ಕಿಶೋರ್ ಕಿಡಿ