Kolar : ದೇವರ ಮೂರ್ತಿಯನ್ನು ಮುಟ್ಟಿದ ದಲಿತ ಬಾಲಕನ ಕುಟುಂಬಕ್ಕೆ 60 ಸಾವಿರ ರೂ. ದಂಡ!

Kolar : ಕರ್ನಾಟಕದ(Karnataka) ಕೋಲಾರ(Kolar) ಜಿಲ್ಲೆಯ ದಲಿತ ಕುಟುಂಬವೊಂದು ದಕ್ಷಿಣ ಭಾರತದ ಪ್ರಮುಖ ಗ್ರಾಮ ದೇವತೆಯಾದ ಸಿಡಿರಣ್ಣನ ವಿಗ್ರಹಕ್ಕೆ ಜೋಡಿಸಲಾದ ಕಂಬವನ್ನು ಸ್ಪರ್ಶಿಸಿದ ಕಾರಣಕ್ಕೆ, ಕಂಬವನ್ನು ಸ್ಪರ್ಶಿಸಿದ ಬಾಲಕನ ಕುಟುಂಬಕ್ಕೆ ಬರೋಬ್ಬರಿ 60,000 ರೂಪಾಯಿ ದಂಡವನ್ನು(15 year old boy fined) ವಿಧಿಸಲಾಗಿದೆ.

ಇದನ್ನೂ ಓದಿ : https://vijayatimes.com/anti-hijab-protests/

ಕರ್ನಾಟಕದ ಕೋಲಾರ ಜಿಲ್ಲೆಯ, ಉಳ್ಳೇರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸೆಪ್ಟೆಂಬರ್ 8 ರಂದು ಗ್ರಾಮಸ್ಥರು ಭೂತಾಯಮ್ಮನ ಜಾತ್ರೆ ನಡೆಸಿದ್ದಾರೆ. ದಲಿತರಿಗೆ ಗ್ರಾಮ ದೇವತೆಯ ದೇವಸ್ಥಾನಕ್ಕೆ ಪ್ರವೇಶ ನೀಡಿರಲಿಲ್ಲ.

ಈ ವೇಳೆ ಶೋಭಾ ಮತ್ತು ರಮೇಶ್ ಅವರ 15 ವರ್ಷದ ಮಗ ಗ್ರಾಮದ ಪ್ರಮುಖ ದೇವರಾದ ಸಿಡಿರಣ್ಣನ ವಿಗ್ರಹಕ್ಕೆ ಅಳವಡಿಸಿದ್ದ ಕಂಬವನ್ನು ಸ್ಪರ್ಶಿಸಿದ್ದಾನೆ.

ಇದನ್ನು ಗಮನಿಸಿದ ಗ್ರಾಮಸ್ಥ ವೆಂಕಟೇಶಪ್ಪ, ಗ್ರಾಮದ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ತದನಂತರ ಅವರು ಮರುದಿನ ಗ್ರಾಮದ ಹಿರಿಯರ ಮುಂದೆ ಹಾಜರಾಗುವಂತೆ ಹುಡುಗನ ಕುಟುಂಬವನ್ನು ಕರೆದಿದ್ದಾರೆ. ಈ ಸಂಗತಿಯಿಂದ ಗ್ರಾಮಸ್ಥರು ಮನನೊಂದಿದ್ದರು.

ದಲಿತರು ಕಂಬವನ್ನು ಮುಟ್ಟಿದ್ದು, ಈಗ ಅದು ಅಶುದ್ಧವಾಗಿದ್ದು, ಎಲ್ಲದಕ್ಕೂ ಪುನಃ ಬಣ್ಣ ಬಳಿಯಬೇಕು ಎಂದು ಆರೋಪಿಸಿದರು. ಕಂಬಕ್ಕೆ ಪುನಃ ಬಣ್ಣ ಬಳಿಯಲು ಅಕ್ಟೋಬರ್ 1ರೊಳಗೆ 60 ಸಾವಿರ ರೂ.ಗಳನ್ನು ಪಾವತಿಸುವಂತೆ ಗ್ರಾಮದ ಹಿರಿಯ ನಾರಾಯಣಸ್ವಾಮಿ ದಂಡ ಕುಟುಂಬಕ್ಕೆ ವಿಧಿಸಿದ್ದಾರೆ ಎನ್ನಲಾಗಿದೆ.

https://youtu.be/Ttl6Gcp-9qs ಡೆಡ್ಲಿ ಸಾಸ್ !

ಅಕ್ಟೋಬರ್ 1 ರೊಳಗೆ ದಂಡವನ್ನು ಪಾವತಿಸಲು ವಿಫಲವಾದರೆ, ಇಡೀ ಕುಟುಂಬವನ್ನು ಗ್ರಾಮದಿಂದ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ನಡುವೆ ಶೋಭಾ ಮಾಸ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಪೊಲೀಸರು 8 ಮಂದಿಯನ್ನು ಬಂಧಿಸಿದ್ದಾರೆ. ತಮ್ಮ ಕುಟುಂಬಕ್ಕೆ ಮೇಲ್ಜಾತಿಯವರಿಂದ ಬೆದರಿಕೆ ಇದೆ ಎಂದು ಆರೋಪಿಸಿ ದೂರನ್ನು ನೀಡಿದ್ದಾರೆ ಎನ್ನಲಾಗಿದೆ.
Exit mobile version