2 ತಿಂಗಳ ಮಗುವನ್ನು ಹೊತ್ತು ನಟಿ ಸಮೀರಾ ರೆಡ್ಡಿ ಈ ಸಾಹಸ ಮಾಡಿದ್ಯಾಕೆ..?

ಬಹುಭಾಷಾ ನಟಿ ಸಮೀರಾ ರೆಡ್ಡಿ 2ನೇ ಬಾರಿಗೆ ತಾಯಿಯಾಗಿ ಪುಟಾಣಿ ಕಂದನಿಗಿನ್ನೂ 2 ತಿಂಗಳು ತುಂಬಿದೆಯಷ್ಟೇ..ಅದಾಗಲೇ ಫುಲ್ ಆಕ್ಷೀವ್ ಆಗಿರುವ ಸಮೀರ ಪುಟ್ಟ ಮಗುವನ್ನು ಹೊತ್ತುಕೊಂಡು ಕರ್ನಾಟಕ ರೌಂಡ್ಸ್ ಶುರುಮಾಡಿಕೊಂಡಿದ್ದಾರೆ..

ತಾಯಿಯಾಗುವ ಮಹಿಳೆಯರಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಸಮೀರಾ ಅವರು ಕರ್ನಾಟಕದ ಎತ್ತದ ಬೆಟ್ಟವೆಂದೇ ಖ್ಯಾತಿ ಪಡೆದಿರುವ ಮುಳ್ಳಯ್ಯನಗಿರಿಯನ್ನು ಹತ್ತಿದ್ದಾರೆ..ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ವಿಡಿಯೋದಲ್ಲಿ ಮುಳ್ಳಯ್ಯಗಿರಿ ಬೆಟ್ಟಕ್ಕೆ ಭೇಟಿ ನೀಡಿದ್ದು, ಬೆಟ್ಟದ ಕೆಲ ಮೆಟ್ಟಿಲುಗಳನ್ನು ಏರಲು ಪ್ರಯತ್ನ ಮಾಡಿದೆ. ಆದರೆ ಮುಂದೆ 500ಕ್ಕೂ ಹೆಚ್ಚು ಮೆಟ್ಟಿಲು ಇದ್ದು, ಮಗುವಿನೊಂದಿಗೆ ಬೆಟ್ಟ ಏರಲು ಆಗುತ್ತಿಲ್ಲ. ಇಲ್ಲಿಗೆ ನಿಲ್ಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

Exit mobile version