24 ಗಂಟೆಯಲ್ಲಿ 2.5 ಕಿ.ಮೀ. ಉದ್ದದ ಚತುಷ್ಪಥ ರಸ್ತೆ ನಿರ್ಮಾಣ; ವಿಶ್ವದಾಖಲೆ ಎಂದ ಸಚಿವ ನಿತಿನ್ ಗಡ್ಕರಿ

ಲಖನೌ, ಏ. 03: 2.5 ಕಿಮೀ ಉದ್ದದ ಚತುಷ್ಪಥ ಕಾಂಕ್ರೀಟ್​ ರಸ್ತೆಯನ್ನು ಕೇವಲ 24 ಗಂಟೆಯಲ್ಲಿ ನಿರ್ಮಿಸಿ ವಿಶ್ವ ದಾಖಲೆ ನಿರ್ಮಿಸಿದ್ದೇವೆ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್​ ಗಡ್ಕರಿ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಸೋಲಾಪುರ- ಬಿಜಾಪುರ ಮಧ್ಯ 25 ಕಿಮೀ ದೂರದ ಡಾಂಬರು ರಸ್ತೆಯನ್ನು ಸಹ 24 ಗಂಟೆಯಲ್ಲಿ ನಿರ್ಮಿಸಲಾಗಿದ್ದು, ಇದೂ ಕೂಡ ವಿಶ್ವದಾಖಲೆ ಹೌದು ಎಂದು ಹೇಳಿದ್ದಾರೆ.

ಲಖನೌನ ಖುರಾಮ್ ನಗರ ಮೇಲ್ಸೇತುವೆ ನಿರ್ಮಾಣಕ್ಕೆ ಅಡಿಗಲ್ಲು ಸ್ಥಾಪನೆ ಮಾಡಿ, ತೆಧಿ ಪುಲಿಯಾ ಫ್ಲೈಓವರ್ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ನಿತಿನ್​ ಗಡ್ಕರಿ, ರಸ್ತೆ ನಿರ್ಮಾಣದಲ್ಲಿ ಭಾರತ ಇದೀಗ ವಿಶ್ವದಾಖಲೆ ಬರೆದಿದೆ. 24 ಗಂಟೆಯಲ್ಲಿ 2.5 ಕಿಮೀ ದೂರದ ಚತುಷ್ಪಥ ರಸ್ತೆ ಹಾಗೂ 25 ಕಿಮೀ ದೂರದ ಏಕಪಥ ರಸ್ತೆ ನಿರ್ಮಿಸಿ ಗಿನ್ನೀಸ್ ದಾಖಲೆ ಸೃಷ್ಟಿಸಿದೆ ಎಂದು ತಿಳಿಸಿದ್ದಾರೆ.

21ನೇ ಶತಮಾನದ ರಾಜಕೀಯ ಅಭಿವೃದ್ಧಿ ಪರ ರಾಜಕೀಯ. ಪ್ರಧಾನಿ ನರೇಂದ್ರ ಮೋದಿಯವರು ಆತ್ಮನಿರ್ಭರ ಭಾರತದ ನಿರ್ಣಯ ಕೈಗೊಂಡಿದ್ದಾರೆ. ಭಾರತ 5 ಟ್ರಿಲಿಯನ್​ ಆರ್ಥಿಕತೆಯ ಗುರು ತಲುಪುವ ಮಹದೋದ್ದೇಶವನ್ನು ಹೊಂದಲಾಗಿದೆ. ಮುಂದಿನ 5 ವರ್ಷಗಳಲ್ಲಿ 111 ಲಕ್ಷ ಕೋಟಿ ರೂ. ವೆಚ್ಚದ ಮೂಲಸೌಕರ್ಯಗಳನ್ನು ನಿರ್ಮಿಸಬೇಕಾಗಿದ್ದು, ಅದರಲ್ಲಿ ರಸ್ತೆ ವಲಯದ ಜವಾಬ್ದಾರಿ ನನ್ನದು ಎಂದು ಹೇಳಿದರು.

Exit mobile version