2020 ರ ಮೊದಲ ಭಾರತ್ ಬಂದ್ ಗೆ ದೇಶ ನಿಶಬ್ದವಾಗುತ್ತಾ?

ಜನವರಿ 8 ರ ಬುಧವಾರದಂದು ಭಾರತ ಸ್ತಬ್ದಗೊಳ್ಳಲಿದೆ. ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಎಡಪಕ್ಷಗಳು ಭಾರತ್ ಬಂದ್‍ಗೆ ಕರೆ ನೀಡಿದ್ದು, ನಾಳೆ ಬಂದ್ ಯಾವ ರೂಪವನ್ನು ಪಡೆಯಲಿದೆ ಎಂಬುವುದನ್ನು ಕಾದುನೋಡಬೇಕಿದೆ . ಇನ್ನು ನಾಳೆ ಭಾರತ್ ಬಂದ್ ಹಿನ್ನಲೆ ಘಟನೆಯಲ್ಲಿ ಹಲವು ಕಾರ್ಮಿಕ ಸಂಘಟನೆಗಳು, ಬ್ಯಾಂಕಿಗ್ ಸಂಘಟನೆಗಳು, ವ್ಯಾಪಾರ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಬಂದ್‍ನಲ್ಲಿ ಭಾಗಿಯಾಗೋ ಸಾಧ್ಯತೆಗಳಿವೆ.


ಇನ್ನು ಬೇಡಿಕೆಗಳ ಬಗ್ಗೆ ಗಮನ ಹರಿಸೋದಾದ್ರೆ; ಕೇಂದ್ರ ಸರ್ಕಾರದ ಆರ್ಥಿಕ ನೀತಿ ವಿರೋಧ, ಬ್ಯಾಂಕಿಂಗ್ ವ್ಯವಸ್ಥೆ ಸುಧಾರಣಾ ಕ್ರಮಗಳಿಗೆ ವಿರೋಧ , ಕನಿಷ್ಠ ವೇತನ 21 ಸಾವಿರ ದಿಂದ 24 ಸಾವಿರದವರೆಗೆ ಏರಿಕೆ ಮಾಡಲು ಆಗ್ರಹ , ಸಾರ್ವಜನಿಕ ವಲಯದ ಉದ್ದಿಮೆಗಳ ಖಾಸಗೀಕರಣಕ್ಕೆ ವಿರೋಧ, ಸಿಎಎ, ಎನ್‍ಆರ್‍ಸಿ ಹಿಂತೆಗೆದುಕೊಳ್ಳು ಆಗ್ರಹ ಸೇರಿದಂತೆ ಬೇಡಿಕೆಗಳನ್ನು ನಾಳೆಯ ಬಂದ್ ಹೈಲೆಟ್ ಆಗಿದೆ.

ಅಂದಹಾಗೆ ಬಂದ್ ಪ್ರಯುಕ್ತ ಸರ್ಕಾರಿ ಕಛೇರಿಗಳು ತೆರೆಯುವುದಿಲ್ಲ. ಸರ್ಕಾರಿ ಬಸ್ ವ್ಯವಸ್ಥೆ ಎಂದಿನಂತೆ ಇರುತ್ತೆ , ಆಸ್ಪತ್ರೆ , ಮೆಡಿಕಲ್ ಹೊಟೇಲ್‍ಗಳು ತೆರೆದಿರುತ್ತದೆ. ಶಾಲಾ-ಕಾಲೇಜುಗಳು ಇರುವ ಸಾಧ್ಯತೆ ಇದೆ.

Exit mobile version