2020-2021ರ ಶೈಕ್ಷಣಿಕ ವರ್ಷದ ಮಾರ್ಗಸೂಚಿ ಬಿಡುಗಡೆ

 

ಕೋವಿಡ್-19 ಸಾಂಕ್ರಾಮಿಕ ರೋಗದಿಂದ ದೇಶದ ಜನಜೀವನವೇ ಬದಲಾಗಿದೆ. ಇದರ ಜತೆಗೆ ಶಿಕ್ಷಣದ ವ್ಯವಸ್ಥೆ ಕೂಡ ಬದಲಾಗಿದೆ. ಒಟ್ಟಾರೆ ಕರೋನಾ ಬಿಕ್ಕಟ್ಟಿನಿಂದ ಎಲ್ಲ ಸನ್ನಿವೇಶಗಳು ಬದಲಾಗುತ್ತಿವೆ.
ಈ ಹಿನ್ನೆಲೆಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ವಿಬಾಗವು 2020-2021ರ ಶೈಕ್ಷಣಿಕ ಅಧಿವೇಶನಕ್ಕಾಗಿ ಎನ್‍ಸಿಇಆರ್‍ಟಿ(ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿಯ ರಾಷ್ಟ್ರೀಯ ಮಂಡಳಿ) ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಈ ಮಾರ್ಗಸೂಚಿಯಲ್ಲಿ ಸ್ವಾವಲಂಬಿ ಭಾರತದ ಅಡಿಯಲ್ಲಿ ಮೂಲಭೂತ ಸಾಕ್ಷರತೆ ಮತ್ತಯ ಸಂಖ್ಯಾ ಮಿಷನ್ ಸ್ಥಾಪನೆ ಮತ್ತು ಫಲಿತಾಂಶ ಆಧಾರಿತ ಸಮಗ್ರ ಶಿಕ್ಷಣಕ್ಕಾಗಿ ಸಂಪನ್ಮೂಲಗಳನ್ನು ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಪ್ರಕಾರ ಹೊಸ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು, ಪಠ್ಯಕ್ರಮ ಶಾಲಾ ಶಿಕ್ಷಣಕ್ಕಾಗಿ ಹೊಸ ರಾಷ್ಟ್ರೀಯ ಪಠ್ಯಕ್ರಮ ಕುರಿತು ಈಗಾಗಲೇ ಕೆಲಸ ಪ್ರಾರಂಭವಾಗಿದೆ ಎಂದು ಎಂಎಚ್‍ಆರ್‍ಡಿ ನೀಡಿರುವ ಮಾಹಿತಿ ನೀಡಿದೆ. ಎನ್‍ಸಿಇಆರ್‍ಟಿ ಪಠ್ಯಪುಸ್ತಕಗಳ ಆಧಾರದ ಮೇಲೆ ಹೊಸ ಪಠ್ಯಕ್ರಮದಲ್ಲಿ ಬದಲಾವಣೆ. ತಜ್ಞರು ಶಾಲಾ ಶಿಕ್ಷಣದ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗುತ್ತದೆ. ಜತೆಗೆ ಈ ಎಲ್ಲದರ ಮಧ್ಯಂತರ ವರದಿ 2020 ಡಿಸೆಂಬರ್‍ವಳಗೆ ನಿರೀಕ್ಷಿಸಬಹುದಾಗಿದೆ. ಇನ್ನು ಬದಲಾವಣೆ ಮಾಡುವ ವಿಷಯಕ್ಕೆ ಬಂದರೆ ಪ್ರಮುಖ ಪಠ್ಯ ವಸ್ತು ತೆಗೆದು ಹಾಕುವುದಿಲ್ಲ, ಬದಲಾಗಿ ಜ್ಞಾನವನ್ನು ಹೆಚ್ಚಿಸುವ ವಸ್ತು, ಜೀವನ ಕೌಶಲಗಳು, ಸೃಜನಶೀಲ ಚಿಂತನೆ, ಭಾರತೀಯ ನೀತಿಗಳು ಮತ್ತು ನಾಗರಿಕತೆ, ಕಲೆ ಇತ್ಯಾದಿ ವಿಷಯಗಳನ್ನು ಸೇರಿಸಲಾಗುವುದು.
ವಿದ್ಯಾ ಉಪಕ್ರಮಗಳ ಅಡಿಯಲ್ಲಿ 1 ರಿಂದ 12ನೇ ತರಗತಿವರೆಗೆ ಸ್ವಯಂ ಪ್ರಭಾ ಚಾನೆಲ್‍ಗಳಿಗೆ ವಿಷಯವನ್ನು ಅಭಿವೃದ್ಧಿ ಪಡಿಸಲು ಎನ್‍ಸಿಇಆರ್‍ಟಿಗೆ ಸೂಚನೆ ನೀಡಲಾಗಿದೆ. ಆಗಸ್ಟ್ 2020ರೊಳಗೆ ಎಲ್ಲಾ ಚಾನೆಲ್‍ಗಳು ಪ್ರಾರಂಭವಾಗಲಿವೆ ಎಂದು ಸೂಚನೆಯಲ್ಲಿ ತಿಳಿಸಿದೆ.
ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿಯ ರಾಷ್ಟ್ರೀಯ ಮಂಡಳಿಯ (ಎನ್‍ಸಿಇಆರ್‍ಟಿ) ಸಲಹೆಗಳು
1. ಅಕ್ಟೋಬರ್ 2020ವರೆಗೆ 1 ರಿಂದ 5ನೇ ತರಗತಿಗಳಿಗೆ ಮತ್ತು 6 ರಿಂದ 12ನೇ ತರಗತಿವರೆಗ ಕಲಿಕೆಯ ಫಲಿತಾಂಶವನನು ವಿವರಿಸುವ ಇನ್ಫೋಗ್ರಾಫಿಕ್ಸ್, ಪೋಸ್ಟರ್, ಪ್ರಸ್ತುತಿಗಳನ್ನು ಸಿದ್ಧಪಡಿಸಬೇಕು.
2. ಒಂದರಿಂದ ಐದನೇ ತರಗತಿಗಳ ಶಿಕ್ಷಕರಿಗೆ ಆನ್‍ಲೈನ್ ಶಿಕ್ಷಕರ ತರಬೇತಿ ಕೋರ್ಸ್‍ಅನ್ನು ಡಿಸೆಂಬರ್ 2020ರೊಳಗೆ ಪೂರ್ಣಗೊಳಿಸಬೇಕು.
3. 6 ರಿಂದ 12ನೇ ತರಗತಿಗಳ ಶಿಕ್ಷಕರಿಗೆ ತರಬೇತಿ ಕೋರ್ಸ್‍ಅನ್ನು ಹಂತ ಹಂತವಾಗಿ ಜೂನ್ 2021ರೊಳಗೆ ಪೂರ್ಣಗೊಳಿಸಬೇಕು.
4. ಒಂದರಿಂದ ಐದನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಯಾವುದೇ ರೀತಿಯ ಆನ್‍ಲೈನ್ ಸೌಲಭ್ಯವನ್ನು ಹೊಂದಿರದ ಮಕ್ಕಳಿಗೆ ಪರ್ಯಾಯ ಶೈಕ್ಷಣಿಕ ಸಾಮಗ್ರಿಗಳನ್ನು ಡಿಸೆಂಬರ್ 2020ರೊಳಗೆ ತಯಾರಿಸಬೇಕು.
5. ಅಂತೆಯೇ 6 ರಿಂದ 12ನೇ ತರಗತಿಗಳಿಗೆ , ಜೂನ್ 2021 ರೊಳಗೆ ಈ ವಸ್ತುಗಳನ್ನು ಹಂತ ಹಂತವಾಗಿ ತಯಾರಿಸಬೇಕು. ಪ್ರತಿ ತರಗತಿಗೆ, ಪ್ರತಿ ಹಂತದ ಕಲಿಕೆಯ ಉತ್ಪಾದನೆಯನ್ನು ನಿರ್ಣಯಿಸಲು ಉಳಿದ ತರಗತಿಗಳಿಗೆ ಒಂದರಿಂದ ಐದನೇ ತರಗತಿ ಮತ್ತು ಮಾರ್ಚ್ 2021ರ ತರಗತಿಗಳಿಗೆ 2020ರ ನವೆಂಬರ್‍ನಲ್ಲಿ ಎರಡು ಹಂತದ ಪ್ರಾವೀಣ್ಯತೆಯ ಬಗ್ಗೆ ಕನಿಷ್ಠ 10 ಪ್ರಶ್ನೆಗಳನ್ನು ರಚಿಸಬೇಕು.
6. ಎನ್‍ಎಎಸ್, 2017ರ ಆಧಾರದ ಮೇಲೆ ಡಿಸೆಂಬರ್ 2020ರ ವೇಳೆಗೆ, ಒಂದರಿಂದ ಐದನೇ ತರಗತಿಗಳ ವಸ್ತುಗಳನ್ನು ಸಿದ್ಧಪಡಿಸಬೇಕು. ಇತರ ವರ್ಗಗಳಿಗೆ ಮಾರ್ಚ್ 2021ರೊಳಗೆ ಎಲ್ಲ ವಸ್ತುಗಳನ್ನು ತಯಾರಿಸಬೇಕಾಗಿದೆ.

Exit mobile version