vijaya times advertisements
Visit Channel

March 15, 2021

ಗೀತಾ ಶಿವರಾಜ್ ಕುಮಾರ್ ಅವರು ಪಕ್ಷ ಸೇರುವ ಬಗ್ಗೆ ಕಾದು ನೋಡಿ: ಡಿಕೆಶಿ

ಸದಾಶಿವನಗರದ ತಮ್ಮ ನಿವಾಸದಲ್ಲಿ ಸೋಮವಾರ ನಟ ಶಿವರಾಜ್ ಕುಮಾರ್ ಅವರ ಜತೆ ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಶಿವರಾಜ್ ಕುಮಾರ್ ಅವರು ನಮ್ಮ ಆತ್ಮೀಯರು. ಅವರ ಕುಟುಂಬ ಇಡೀ ದೇಶ ಹಾಗೂ ರಾಜ್ಯದ ಆಸ್ತಿ.

ಅಪ್ರಬುದ್ಧ ಮಾನವ ಅಂಡಾಣುಗಳ ಸೃಷ್ಟಿಗೆ ಜೀವವಿಜ್ಞಾನಿ ಕ್ಲಾರ್ಕ್ ತಂಡ ಮಹತ್ತರ ಹೆಜ್ಜೆ

ಈಗ ಸೃಷ್ಟಿಯಾದ ಅಂಡಾಣುಗಳು ಫಲವತ್ತಾಗಿಲ್ಲ ಅಥವಾ ಮಗುವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಮತ್ತು ಮಾನವ ಸಂತಾನೋತ್ಪತ್ತಿಗೆ ಉಪಯುಕ್ತ ಮತ್ತು ಸುರಕ್ಷಿತವಾದ ಅಂಡಾಣುಗಳನ್ನು ಸೃಷ್ಟಿಸಲು ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಎರಡೆಲೆ ಚಿಹ್ನೆಯಲ್ಲಿ ಸ್ಪರ್ಧಿಸಲು ಕೇರಳ ಕಾಂಗ್ರೆಸ್ ಎಂ ಪಕ್ಷಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಪಿಜೆ ಜೋಸೆಫ್ ಪರ ವಾದಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್, 450 ಸದಸ್ಯರಿರುವ ರಾಜ್ಯ ಸಮಿತಿಯಲ್ಲಿ 255 ಸದಸ್ಯರ ಬೆಂಬಲ ನಮಗಿದೆ. ಇವರ ಬೆಂಬಲವನ್ನು ತೋರಿಸುವ ದಾಖಲೆಗಳನ್ನು ಪರಿಶೀಲಿಸದೆ ಚುನಾವಣಾ ಆಯೋಗ ಜೋಸ್.ಕೆ. ಮಾಣಿ ಅವರ ಪರವಾಗಿ ತೀರ್ಪು ನೀಡಿತ್ತು ಎಂದಿದ್ದಾರೆ.

ಗ್ರಾಹಕರೇ, ನಿಮ್ಮ ಹಕ್ಕುಗಳ ಬಗ್ಗೆ ಅರಿತುಕೊಳ್ಳುವುದು ತುಂಬಾ ಮುಖ್ಯ..

ಅಮೆರಿಕದ ಮಾಜಿ ಅಧ್ಯಕ್ಷ ಜಾನ್‌ ಎಫ್‌ ಕೆನಡಿ. 1962ರ ಮಾರ್ಚ್‌ 15ರಂದು ಅಮೆರಿಕ ಕಾಂಗ್ರೆಸ್‌ ಅನ್ನು ಉದ್ದೇಶಿಸಿ ಮಾತನಾಡುವಾಗ ಗ್ರಾಹಕ ಹಕ್ಕುಗಳು ಎಂದರೇನು ಎಂಬ ವ್ಯಾಖ್ಯಾನವನ್ನು ನೀಡಿದರು ಹಾಗೂ ಗ್ರಾಹಕರ ಹಕ್ಕುಗಳನ್ನೊಳಗೊಂಡ ವಿಧೇಯಕವನ್ನು ಮಂಡಿಸಿದರು. ಹಾಗಾಗಿ ಮಾರ್ಚ್‌ 15 ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.

“ನನ್ನ ನೋವಿಗಿಂತ ಜನರ ನೋವು ದೊಡ್ಡದು “ದೀದಿ ಮಮತಾ ಬ್ಯಾನರ್ಜಿ

ನಮ್ಮ ಸರ್ಕಾರ ಅತ್ಯುತ್ತಮ ಯೋಜನೆಗಳನ್ನ ಜಾರಿಗೆ ತಂದಿದೆ. ಪಶ್ಚಿಮ ಬಂಗಾಳದಲ್ಲಿ ನಾವು ನಡೆಸುತ್ತಿರುವ ಕಲ್ಯಾಣ ಯೋಜನೆಗಳ ಮೊತ್ತ, ಜಗತ್ತಿನ ಯಾವುದೇ ಸರ್ಕಾರ ನಮಗೆ ಸರಿಸಾಟಿಯಲ್ಲ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದರು.

ಮುಕೇಶ್ ಅಂಬಾನಿ ಮನೆ ಮುಂದೆ ಸ್ಪೋಟಕ ಪತ್ತೆ ಪ್ರಕರಣ ; ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಸಸ್ಪೆಂಡ್

ಫೆಬ್ರವರಿ 25ರಂದು ದಕ್ಷಿಣ ಮುಂಬೈನ ಕಾರ್ಮಿಚೇಲ್ ರಸ್ತೆಯಲ್ಲಿರುವ ಅಂಬಾನಿ ಮನೆ ಬಳಿ ಸ್ಫೋಟಕ ತುಂಬಿರುವ ಕಾರೊಂದು ಪತ್ತೆಯಾಗಿತ್ತು. ಈ ಕಾರಿನೊಳಗೆ ಜಿಲೆಟಿನ್ ಕಡ್ಡಿಗಳನ್ನು ತುಂಬಿಸಿಡಲಾಗಿತ್ತು.

ಸಿಡಿ ಧಾರಾವಾಹಿ ಹಿಂದಿನ ಮಹಾನಾಯಕನನ್ನು ನೋಡಲು ಕಾಯುತ್ತಿದ್ದೇನೆ: ಎಚ್‌ಡಿಕೆ ವ್ಯಂಗ್ಯ

ರಾಮನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಇದು ಯಾವುದೋ ಧಾರಾವಾಹಿಯಂತೆ ಇದೆ. ಅಂತಿಮವಾಗಿ ಯಾರಿಗೆ ಸುತ್ತಿಕೊಳ್ಳುತ್ತದೋ ನೋಡಬೇಕು. ಆ ಮಹಾನಾಯಕನ ಬಗ್ಗೆ ತಿಳಿದುಕೊಳ್ಳಲು ನಾನು ಸಹ ಕುತೂಹಲದಿಂದ ಕಾಯುತ್ತಿದ್ದೇನೆ ಎಂದು ತಿಳಿಸಿದರು.

ಬನಾರಸ್‌ ವಿವಿಗೆ ಸಂದರ್ಶಕ ಉಪನ್ಯಾಸಕಿಯಾಗಿ ರಿಲಯನ್ಸ್ ಫೌಂಡೆಶನ್ನ ಅಧ್ಯಕ್ಷೆ ನೀತಾ ಅಂಬಾನಿ

ಬನಾರಸ್ ನ ಹಿಂದೂ ವಿಶ್ವವಿದ್ಯಾಲಯದ ಮಹಿಳಾ ಅಭಿವೃದ್ಧಿ ಅಧ್ಯಯನ ಕೇಂದ್ರವು ನೀತಾ ಅಂಬಾನಿಯವರನ್ನು ವಿಶ್ವವಿದ್ಯಾಲಯದ ಹಾಗೂ ಕೇಂದ್ರದ ಭಾಗವಾಗುವಂತೆ ಕೇಳಿಕೊಂಡಿದೆ. ಸದ್ಯ, ಈ ಪ್ರಸ್ತಾಪವನ್ನು ನೀತಾ ಅಂಬಾನಿಯವರ ಕಚೇರಿ ಸ್ವೀಕರಿಸಿದ್ದು, ನೀತಾ ಅಂಬಾನಿಯವರು ಇದಕ್ಕೆ ಒಪ್ಪಿದ್ದಾರೋ, ಇಲ್ಲವೋ ಎಂಬ ವಿಚಾರದ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ತಿಳಿದು ಬಂದಿಲ್ಲ.

ಸಫಾರಿಗೆ ಹೋದ ಪ್ರವಾಸಿಗರ ವಾಹನವನ್ನು ಹಿಂದೆ, ಮುಂದೆ ಅಟ್ಟಾಡಿಸಿದ ಕಾಡಾನೆ

ಭತ್ತದಗದ್ದೆ ಕೆರೆ ಎಂಬ ರಸ್ತೆಯಲ್ಲಿ ಸಫಾರಿ ಜೀಪ್ ಕಂಡ ಆನೆಯೊಂದು ದಾಳಿ ಮಾಡಲು ಅಟ್ಟಾಡಿಸಿಕೊಂಡು ಬಂದಿದೆ. ಇದೇ ವೇಳೆ, ಮುಂದಿನಿಂದಲೂ ಬಂದ ಮತ್ತೊಂದು ಸಲಗ ಅಡ್ಡಹಾಕಿ ಪ್ರವಾಸಿಗರನ್ನು ಬೆಚ್ಚಿ ಬೀಳಿಸಿದೆ.

ಕೊರೊನಾ ಲಸಿಕೆ ಹಂಚುತ್ತಿರುವ ಬಾರತದ ನಡೆಗೆ ವಿಶ್ವದಾದ್ಯಂತ ಶ್ಲಾಘನೆ

ವಿಂಡೀಸ್ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗರಾದ ಸರ್ ಐಸಾಕ್ ವಿವಿಯನ್ ಅಲೆಕ್ಸಾಂಡರ್ ರಿಚರ್ಡ್ಸ್, ರಿಚ್ಚಿ ರಿಚರ್ಡ್ಸ್​ನ್, ಜಿಮ್ಮಿ ಆಯಡಮ್ಸ್ ಮತ್ತು ರಾಮ್​ನರೇಶ್ ಸರವಣ್ ಅವರುಗಳು ಕೆರಿಬಿಯನ್ ರಾಷ್ಟ್ರಗಳಿಗೆ ಕೊರೊನಾ ಲಸಿಕೆ ನೀಡಿರುವ ಭಾರತಕ್ಕೆ ಮನಃಪೂರ್ವಕ ಧನ್ಯವಾದ ಅರ್ಪಿಸಿದ್ದಾರೆ.