vijaya times advertisements
Visit Channel

April 21, 2021

ಕೋವಿಡ್‌: ಒಂದೇ ಇಂಜೆಕ್ಷನ್‌ಗೆ ಮೂರು ಬೆಲೆ, ಸೀರಂ ಸ್ಪಷ್ಟನೆ

ಕೇಂದ್ರ ಸರ್ಕಾರವು ಪ್ರತಿ ಡೋಸೆಜ್‌ಗೆ 150 ರೂ. ನೀಡುತ್ತಿದ್ದರೆ, ರಾಜ್ಯ ಸರ್ಕಾರಗಳು 400 ರೂ. ನೀಡುತ್ತಿವೆ. ಖಾಸಗಿ ಆಸ್ಪತ್ರೆಗಳು 600 ರೂ. ನೀಡಿ ಖರೀದಿಸುತ್ತಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

೧೫ ದಿನಗಳ ಸಾರಿಗೆ ನೌಕರರ ಮುಷ್ಕರ ಅಂತ್ಯ: ತಾತ್ಕಾಲಿಕ ನಿರ್ಧಾರ ಎಂದ ಕೋಡಿಹಳ್ಳಿ ಚಂದ್ರಶೇಖರ್

ಸಾರಿಗೆ ಸಿಬ್ಬಂದಿ ಮುಷ್ಕರದಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸಿದೆ. ನ್ಯಾಯಮೂರ್ತಿಗಳ ಹೇಳಿಕೆಯನ್ನು ನಾವು ಗೌರವಿಸುತ್ತೇವೆ. ಹೀಗಾಗಿ ಹೈಕೋರ್ಟ್ ಆದೇಶದಂತೆ ಕರ್ತವ್ಯಕ್ಕೆ ಹಾಜರಾಗುತ್ತೇವೆ ಎಂದಿದ್ದಾರೆ.

ಮನಕಲಕುವ ಸಂದೇಶ ಪೋಸ್ಟ್​ ಮಾಡಿ, ಕೊನೆಯುಸಿರೆಳೆದ ವೈದ್ಯೆ ಡಾ.ಮನೀಷಾ ಜಾಧವ್

51 ವರ್ಷದ ಮನಿಶಾ ಜಾಧವ್ ಎಂಬ ವೈದ್ಯೆ ಶನಿವಾರ ತನ್ನ ಫೇಸ್​ಬುಕ್​ನಲ್ಲಿ ಸಾವಿನ ಸಾಧ್ಯತೆಯನ್ನು ಸ್ಪಷ್ಟವಾಗಿ ತಿಳಿಸಿ ಪೋಸ್ಟ್ ಹಾಕಿದ್ದರು. ಇದು ನನ್ನ ಕೊನೆಯ ಗುಡ್ ಮಾರ್ನಿಂಗ್ ಆಗಿರಬಹುದು. ಈ ವೇದಿಕೆಯಲ್ಲಿ ಮತ್ತೆ ನಾನು ನಿಮಗೆ ಸಿಗದೇ ಹೋಗಬಹುದು.

ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಗೆ ಕೊರೋನಾ ದೃಢ

ಕೊರೊನಾ ಸೋಂಕಿನ ತೀವ್ರತೆ ಹೆಚ್ಚುತ್ತಿರುವ ಬೆನ್ನಲ್ಲೇ ರಮೇಶ್ ಪೋಖ್ರಿಯಾಲ್ ಅವರು, ವಿವಿಧ ಕಾಲೇಜು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ವಿದ್ಯಾರ್ಥಿಗಳೊಂದಿಗೆ ವರ್ಚ್ಯುವಲ್​ ಸಂವಾದ ನಡೆಸಿದ್ದಾರೆ. ಅಲ್ಲದೆ, ಇತ್ತೀಚೆಗಷ್ಟೇ ಶಿಕ್ಷಣ ಸಚಿವಾಲಯದ ಉನ್ನತ ಅಧಿಕಾರಿಗಳು, ಸಿಬಿಎಸ್​ಇ, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸಹ ಉನ್ನತ ಮಟ್ಟದ ಸಭೆ ನಡೆಸಿದ್ದರು.

ಆಕ್ಸಿಜನ್ ಸೋರಿಕೆಯಿಂದ 22 ಮಂದಿ ಸಾವು: ಮಹಾರಾಷ್ಟ್ರದ ನಾಸಿಕ್ ನಲ್ಲಿ ಘಟನೆ

ನಾಸಿಕ್ʼನಲ್ಲಿರುವ ಡಾ. ಜಾಕಿರ್ ಹುಸೇನ್ ಎನ್ ಎಂಸಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ಸೋರಿಕೆಯಾಗಿದ್ದು, ಈ ಘಟನೆಯಲ್ಲಿ 22 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆಸ್ಪತ್ರೆಯ ಹೊರಗೆ ಆಮ್ಲಜನಕ ಟ್ಯಾಂಕ್ ಸೋರಿಕೆಯಾದ ಕಾರಣ ಆ ಪ್ರದೇಶದಾದ್ಯಂತ ಅನಿಲ ಸ್ಫೋಟಗೊಂಡಿದೆ.

ಕೊರೊನಾ ಹಿನ್ನೆಲೆ: ಮತ್ತೆ ಕೆ-ಸೆಟ್ ಪರೀಕ್ಷೆ ಮುಂದೂಡಿದ ಮೈಸೂರು ವಿಶ್ವವಿದ್ಯಾನಿಲಯ

ಕೆ-ಸೆಟ್ ಪರೀಕ್ಷೆ ಏಪ್ರಿಲ್ 25 ರಂದು ನಿಗದಿಯಾಗಿತ್ತು. ಆದರೆ, ಕೊರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಈ ಹಿಂದೆ ಏ.11 ರಂದು ಪರೀಕ್ಷೆ ನಿಗದಿ ಪಡಿಸಲಾಗಿತ್ತು.

ಒಂದು ವರ್ಷದೊಳಗಿನ ಮಗುವಿಗೆ ಈ ಆಹಾರಗಳನ್ನು ನೀಡಬೇಡಿ..

ಒಂದು ವರ್ಷದೊಳಗಿನ ಶಿಶುಗಳಿಗೆ ಯಾವುದೇ ರೀತಿಯ ಜೇನುತುಪ್ಪವನ್ನು ನೀಡಬಾರದು (ಹಸಿ, ಬೇಯಿಸಿದ ). ಜೇನುತುಪ್ಪವು ಮಗುವಿಗೆ ಕೆಟ್ಟದಾಗಿದೆ ಏಕೆಂದರೆ ಇದು ಕ್ಲೋಸ್ಟ್ರಿಡಿಯಮ್ ಬೊಟುಲಿನಮ್ ಅನ್ನು ಹೊಂದಿದೆ. ಇದು ಬೊಟುಲಿನಮ್ ಬೀಜಕಗಳನ್ನು ಉತ್ಪಾದಿಸುತ್ತದೆ.

ಜನರಲ್ಲಿ ವಿಶ್ವಾಸ ಮೂಡಿಸದೆ, ಕಠಿಣ ಕ್ರಮಗಳನ್ನು ಕೈಗೊಂಡರೆ ಏನು ಪ್ರಯೋಜನ: ಎಚ್ಡಿಕೆ ಪ್ರಶ್ನೆ

ಜನರಿಗೆ ಕೇವಲ ಮಾರ್ಗಸೂಚಿಗಳನ್ನು ಮಾತ್ರ ಸೂಚಿಸಲಾಯಿತು. ಸೋಂಕಿನಿಂದ ದೂರ ಇರುವ ಸಲಹೆ ನೀಡಲಾಯಿತು. ಆದರೆ, ಈಗಾಗಲೇ ಅಸ್ಪತ್ರೆಗಳಲ್ಲಿರುವವರ ರಕ್ಷಣೆಗಾಗಿ ಏನು ಮಾಡಲಾಗಿದೆ, ಏನೇನು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಸಭೆಯ ನಂತರ ಸರ್ಕಾರ ಹೇಳಿಲ್ಲ ಏಕೆ? ಸೋಂಕಿತರ ಪರಿಸ್ಥಿತಿಯನ್ನು ಸರ್ಕಾರ ಅರಿತಿಲ್ಲ ಏಕೆ?

ಕಳೆದ ೨೪ ಗಂಟೆಯಲ್ಲಿ ಮೂರು ಲಕ್ಷ ಗಡಿ ತಲುಪಿದ ಕೊರೋನಾ ಸೋಂಕಿತರು

ಈ ಮೂಲಕ ಒಟ್ಟು ಕೊರೋನಾ ರೋಗಿಗಳ ಸಂಖ್ಯೆ 1,56,16,130ಕ್ಕೇರಿದೆ. ಕಳೆದ 24 ಗಂಟೆಗಳಲ್ಲಿ 24 1,67,457 ಮಂದಿ ಚೇತರಿಸಿಕೊಂಡಿದ್ದು ಈವರೆಗೆ 1,32,76,039 ಮಂದಿ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ ಕೊವಿಡ್​ನಿಂದ ಮೃತಪಟ್ಟವರ ಸಂಖ್ಯೆ 1,82,553 ಆಗಿದ್ದು ,ದೇಶದಲ್ಲಿ 21,57,538 ಸಕ್ರಿಯ ಪ್ರಕರಣಗಳಿವೆ. 13,01,19,310 ಮಂದಿ ಲಸಿಕೆ ಪಡೆದಿದ್ದಾರೆ.

ರೆಮ್​ಡೆಸಿವಿರ್​ ಮೇಲಿನ ಆಮದು ಸುಂಕ ಮನ್ನಾ ಮಾಡಿದ ಕೇಂದ್ರ ಸರ್ಕಾರ

ರೆಮ್​ಡೆಸಿವಿರ್​ ಔಷಧಿಯ ತುರ್ತು ಅಗತ್ಯತೆಯನ್ನು ಪರಿಗಣಿಸಿ, ಔಷಧೀಯ ಇಲಾಖೆಯ ಶಿಫಾರಸಿನ ಮೇರೆಗೆ ರೆಮ್​ಡೆಸಿವಿರ್ ಮೇಲಿನ ಕಸ್ಟಮ್ಸ್​ ಸುಂಕವನ್ನು, ಕಂದಾಯ ಇಲಾಖೆ ಮನ್ನಾ ಮಾಡಿದೆ. ಹೀಗೆ ಮಾಡುವುದರಿಂದ ದೇಶೀಯವಾಗಿ ರೆಮ್​ಡೆಸಿವಿರ್ ಇಂಜಕ್ಷನ್​ ಉತ್ಪಾದನೆ ಹೆಚ್ಚುತ್ತದೆ.