vijaya times advertisements
Visit Channel

September 28, 2021

ಕಡಬ ಠಾಣೆ ಪೊಲೀಸ್‌ ಪೇದೆ ವಿರುದ್ದ ಅತ್ಯಾಚಾರ ಆರೋಪ

ಪ್ರಕರಣವೊಂದರ ಸಂಬಂಧ ಸಮನ್ಸ್ ನೀಡಲು ಆರು ತಿಂಗಳ ಹಿಂದೆ ಯುವತಿ ಮನೆಗೆ ಕಾನ್ಸ್ ಟೇಬಲ್ ಶಿವರಾಜ್ ಬಂದಿದ್ದ. ಪ್ರಕರಣ ಮುಗಿದಿದ್ದರೂ ಶಿವರಾಜ್ ಬೇರೆ ಬೇರೆ ನೆಪವೊಡ್ಡಿ ಮನೆಗೆ ಬರುತ್ತಿದ್ದ

ಪಂಜಾಬ್ ಅಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ

ಪ್ಟನ್ ಅಮರೀಂದರ್ ಸಿಂಗ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಸಿಧು ಪಿತೂರಿ ನಡೆಸಿದ್ದರು ಎಂಬ ಸುದ್ದಿ ಹಬ್ಬಿತ್ತು. ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಅಮರೀಂದರ್ ಅವರು ಸಿಧು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು

ಹೆಲ್‌ಮಂಡ್‌ನಲ್ಲಿ ಇನ್ನು ಮುಂದೆ ಗಡ್ಡ ತೆಗೆಯುವದು ಮತ್ತು ಆಕರ್ಷಕಗೊಳಿಸುವುದನ್ನು ನಿಷೇಧಗೊಳಿಸಿದ ತಾಲಿಬಾನ್ ಸರ್ಕಾರ

ಗಡ್ಡ, ಕ್ಷೌರ ಕುರಿತ ಆದೇಶ ಬಂದಿದೆ. ನಿಯಮ ಉಲ್ಲಂಘಿಸಿದವರನ್ನು ಕಟುಶಿಕ್ಷೆಗೆ ಗುರಿಪಡಿಸಲಾಗುವುದು, ದೂರು ಕೊಡುವಂತೆ ಇಲ್ಲ ಎಂದು ಕ್ಷೌರಿಕರನ್ನು ಉದ್ದೇಶಿಸಿ ನೀಡಿದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೆ ಶಿಕ್ಷೆಯ ಸ್ವರೂಪವನ್ನು ತಿಳಿಸಿಲ್ಲ.

ಸಿವಿಲ್ ಪೊಲೀಸ್ ಸಬ್ಇನ್ಸ್ಪೆಕ್ಟರ್ ಹುದ್ದೆಗೆ ಅ. 3ರಂದು ಲಿಖಿತ ಪರೀಕ್ಷೆ

ಬೆಂಗಳೂರು ನಗರದಲ್ಲಿನ 21 ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಪತ್ರಿಕೆ-1 ಮತ್ತು ಮಧ್ಯಾಹ್ನ 3 ಗಂಟೆಯಿಂದ ಮಧ್ಯಾಹ್ನ 4.30ರವರೆಗೆ ಪತ್ರಿಕೆ-2 ಲಿಖಿತ ಪರೀಕೆ ನಡೆಯಲಿದೆ.

ಸಿಂದಗಿ ಮತ್ತು ಹಾನಗಲ್ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ನಿಗದಿ

ಕರೊನಾ ಸಾಂಕ್ರಾಮಿಕ ಕಾಯಿಲೆ, ನೆರೆ ಹಾವಳಿ, ಅತೀವೃಷ್ಠಿ ಹೀಗೆ ಒಂದಲ್ಲಾ  ಒಂದು ಕಾರಣದಿಂದ ವಿಜಯಪುರ ಜಿಲ್ಲೆಯ ಸಿಂದಗಿ ಹಾಗೂ ಹಾವೇರಿ ಜಿಲ್ಲೆಯ ಹಾನಗಲ್ ವಿಧಾನ ಸಭೆ ಕ್ಷೇತ್ರಕ್ಕೆ ಚುನಾವಣೆ ಮುಂದೂಡಲ್ಪಟ್ಟಿತ್ತು  

ಮೂಡಿಗೆರೆ ಶಾಸಕರ ಮನೆಗೆ ಅಕ್ರಮ ಮರಳು ಸಾಗಾಟ ಆರೋಪ.

ಶಾಸಕ ಎಂ.ಪಿ ಕುಮಾರಸ್ವಾಮಿ ಅವರು ತಮ್ಮ ನೂತನ ಮನೆಯ ನಿರ್ಮಾಣ ಕಾರ್ಯಕ್ಕೆ ಅಕ್ರಮವಾಗಿ ಮರಳು ಬಳಸಿದ್ದಾರೆ ಎಂಬ ದೂರು ಸ್ಥಳೀಯರು ಮಾಡಿದ್ದು, ಹಾಗೂ ಈ ಕುರಿತು ವಿಡಿಯೋ ಕೂಡ ಸಂಗ್ರಹಿಸಿದ್ದಾರೆ.

ಜ್ಞಾನಪೀಠ ಪುರಸ್ಕೃತ‌ರು ಅಧ್ಯಯನ ಮಾಡಿದ ಶಾಲೆ ಅಭಿವೃದ್ಧಿ‌ಗೆ ಸರ್ಕಾರ ನಿರ್ಧಾರ.

16.88 ಕೋಟಿ ರೂ. ಗಳನ್ನು ಈ ಸಲುವಾಗಿ ಬಿಡುಗಡೆ ಮಾಡಲಾಗಿದೆ. ಹಾಗೆಯೇ ಈ ಶಾಲೆಗಳ ಸರ್ವತೋಮುಖ ಅಭಿವೃದ್ಧಿ ಹಿನ್ನೆಲೆಯಲ್ಲಿ ಕ್ರಿಯಾ ಯೋಜನೆಯನ್ನು ಸಹ ಸಿದ್ಧಪಡಿಸಲಾಗಿದೆ.

ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡ ಕುಸಿತ,ಇನ್ನೂ 194 ಕಟ್ಟಗಳು ಕುಸಿಯುವ ಭೀತಿಯಲ್ಲಿವೆ !

ಈ ಘಟನೆ ಡೈರಿ ಸರ್ಕಲ್ ಬಳಿ ಸಂಭವಿಸಿದ್ದು ಇದು ಕೆಎಂಎಫ್‌ ಕಚೇರಿ ಬಳಿಯ ಕ್ವಾಟರ್ಸ್ ಕಟ್ಟಡ ಇದಾಗಿದೆ. ಘಟನೆಯಲ್ಲಿ 5 ಮಂದಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ

ವಿದೇಶಿ ಪ್ರಜೆಗಳಿಂದ ಅಕ್ರಮ ಗಾಂಜಾ ವಶ

ಆರೋಪಿಗಳು ಡಾರ್ಕ್ ವೆಬ್ ಸೈಟ್ನಲ್ಲಿ ಹೈಡ್ರೋ ಗಾಂಜಾ ಬೀಜಗಳನ್ನ ತರಿಸಿಕೊಳ್ತಿದ್ದರು. ಈಗಲ್ಟನ್ ರೆಸಾರ್ಟ್ ವಿಲ್ಲಾದಲ್ಲಿ ಹೈಡ್ರೋ ಗಾಂಜಾ ಪ್ಲಾಂಟ್ಸ್ ಬೆಳೆಸಿದ್ರು. ಸೆಪ್ಟೆಂಬರ್ 26 ರಂದು ಡಿ.ಜೆ ಹಳ್ಳಿಯ ಕಾವೇರಿನಗರದಲ್ಲಿ ಸಿಸಿಬಿ ದಾಳಿ ನಡೆಸಿತ್ತು