Bengaluru: ಪ್ರತಿಷ್ಠಿತ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ & ಎಕನಾಮಿಕ್ ಚೇಂಜ್ (Institute for Social & Economic Change) ಸಂಸ್ಥೆಯಲ್ಲಿ (2023 Jobs in ISEC) ಖಾಲಿ ಇರುವ ಪ್ರೊಫೆಸರ್

ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತಿರು ಅರ್ಜಿ ಸಲ್ಲಿಕೆ ಮಾಡುವಂತೆ ಕೋರಲಾಗಿದೆ. ಆಫ್ಲೈನ್ ಅಥವಾ ಪೋಸ್ಟ್ ಮುಖಾಂತರ ಅರ್ಜಿ ಸಲ್ಲಿಕೆ (2023 Jobs in ISEC) ಮಾಡಲು ಅವಕಾಶ ನೀಡಲಾಗಿದೆ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ (Application Start Date): 18/07/2023
ಅರ್ಜಿ ಸಲ್ಲಿಸಲು ಕೊನೆಯ ದಿನ (Application End Date): ಆಗಸ್ಟ್ 10, 2023
ಹುದ್ದೆಯ ಕುರಿತ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ(Application Fees), ಆಯ್ಕೆ ಪ್ರಕ್ರಿಯೆ ಕುರಿತ ಎಲ್ಲದರ ಇಲ್ಲಿದೆ ಮಾಹಿತಿ. ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ &
ಎಕನಾಮಿಕ್ ಚೇಂಜ್ (Institute for Social & Economic Change) ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್(Posting) ನೀಡಲಾಗುತ್ತದೆ.
ಇದನ್ನು ಓದಿ: ಹಾಲು ಪೂರೈಕೆ ಡೇಟಾ ಪಡೆದು ಹೈನುಗಾರರಿಗೆ ಸಾಲ, ಆರ್‌ಬಿಐನಿಂದ ವಿನೂತನ ಕ್ರಮ
ವಿದ್ಯಾರ್ಹತೆ:
ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ & ಎಕನಾಮಿಕ್ ಚೇಂಜ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಸ್ನಾತಕೋತ್ತರ
ಪದವಿ, ಪಿಎಚ್.ಡಿ (Ph.D)ಪೂರ್ಣಗೊಳಿಸಿರಬೇಕು.
ವೇತನ:
ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ & ಎಕನಾಮಿಕ್ ಚೇಂಜ್ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 1,44,200 ಸಂಬಳ ನೀಡಲಾಗುತ್ತದೆ.
ವಯೋಮಿತಿ:
ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ & ಎಕನಾಮಿಕ್ ಚೇಂಜ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ (Candidate) ವಯಸ್ಸು ನಿಯಮಾನುಸಾರ ಇರಬೇಕು. ಮೀಸಲಾತಿ ಅನುಸಾರ
ಅಭ್ಯರ್ಥಿಗಳಿಗೆ ವಯೋಮಿತಿ (Age limit) ಸಡಿಲಿಕೆ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:
ಅರ್ಜಿ ಸಲ್ಲಿಕೆ ಮಾಡಿದ ಎಲ್ಲ ಅಭ್ಯರ್ಥಿಗಳಿಗೂ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ (Written Exam) ಆಯ್ಕೆಯಾದ ಅಭ್ಯರ್ಥಿಗಳಿಗೆ ತದನಂತರ ಸಂದರ್ಶನ ನಡೆಸಲಾಗುತ್ತದೆ.
ಅರ್ಜಿ ಸಲ್ಲಿಕೆ : ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿ ಕೊಡಬಹುದು ಅಥವಾ ಆನ್ಲೈನ್ನಲ್ಲಿರುವ ಲಭ್ಯವಿರುವ
ನಮೂನೆಯಲ್ಲಿಯೂ ಅರ್ಜಿ ಸಲ್ಲಿಕೆ ಮಾಡಬಹುದು.
ಆಪ್ಲೈನ್ ಅರ್ಜಿ ಸಲ್ಲಿಕೆ ಮಾಡುವವರು ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು.
ರಿಜಿಸ್ಟ್ರಾರ್, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆ (Institute for Social & Economic Change) ನಾಗರಭಾವಿ ಪಿಒ ಬೆಂಗಳೂರು – 560072