ಹಾಲು ಪೂರೈಕೆ ಡೇಟಾ ಪಡೆದು ಹೈನುಗಾರರಿಗೆ ಸಾಲ ಕೊಡುವ ಸೌಲಭ್ಯ ಸದ್ಯಕ್ಕೆ ಗುಜರಾತ್‌ನಲ್ಲಿ ಲಭ್ಯವಿದೆ. ಅಮುಲ್‌ಗೆ ಹಾಲು ಪೂರೈಕೆ ಮಾಡುವ 3 (RBI Credit to dairy farmers) ಕೋಟಿ

ಹೈನುಗಾರರ ಡೇಟಾಗಳು ಬ್ಯಾಂಕ್‌ಗಳಿಗೆ ಲಭ್ಯವಾಗಲಿದ್ದು, ಇದರ ಆಧಾರದ ಮೇಲೆ ಸಾಲ ನೀಡಲಿವೆ. ಮುಂಬರುವ ದಿನಗಳಲ್ಲಿ ಈ ಸೌಲಭ್ಯ ಕರ್ನಾಟಕಕ್ಕೂ ವಿಸ್ತರಣೆಯಾಗುವ ಸಾಧ್ಯತೆ ಇದ್ದು,
ಕೆಎಂಎಫ್‌ಗೆ ಹಾಲು ಪೂರೈಕೆ ಮಾಡುವ ಹೈನುಗಾರರಿಗೆ ಸಾಲ ಪಡೆಯುವುದು (RBI Credit to dairy farmers) ಸುಲಭವಾಗಲಿದೆ.
ಪ್ರಮುಖ ಕಾರಣವಾದ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್‌ನ ಅಲಭ್ಯತೆಯಿಂದ ಬ್ಯಾಂಕುಗಳು ಕೃಷಿಕರಿಗೆ , ಹೈನುಗಾರರಿಗೆ ಸೇರಿದಂತೆ ಅಸಂಘಟಿತ ವಲಯಗಳ ಜನರಿಗೆ ಸಾಮಾನ್ಯವಾಗಿ
ಸಾಲ ನೀಡಲು ಹಿಂದೇಟು ಹಾಕುತ್ತವೆ. ಈ ಕಾರಣದಿಂದ ಸಾಲ ಪಡೆಯುವುದೇ ದುರ್ಲಭವಾಗಿರುತ್ತದೆ. ಆರ್‌ಬಿಐ ಇದಕ್ಕೀಗ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್‌ನ ‘ರಿಸರ್ವ್ ಬ್ಯಾಂಕ್ ಇನ್ನೋವೇಶನ್ ಹಬ್’ ಇದಕ್ಕಾಗಿ ಹೊಸ ವ್ಯವಸ್ಥೆಯೊಂದನ್ನು ಮಾಡುತ್ತಿದೆ. ಇದು ರಾಜ್ಯ ಸರ್ಕಾರದಲ್ಲಿ ಲಭ್ಯವಿರುವ ಭೂ ದಾಖಲೆಗಳನ್ನು
ಹಾಗೂ ಹೈನುಗಾರರು ಮತ್ತು ರೈತರ ಪಾವತಿಯ ಸಾಮರ್ಥ್ಯವನ್ನು ಕಂಡುಕೊಳ್ಳಲು ಅಮುಲ್‌ಗೆ ಮಾರಾಟ ಮಾಡಿದ ಹಾಲಿನ ದತ್ತಾಂಶವನ್ನು ಸಂಗ್ರಹಿಸುತ್ತದೆ. ಇದೆಲ್ಲವನ್ನು ಆಧಾರವಾಗಿಟ್ಟುಕೊಂಡು
ಆಯಾ ರೈತರ ಸಾಲ ಮರುಪಾವತಿ ಸಾಮರ್ಥ್ಯವನ್ನು ಅಳೆದು ಬ್ಯಾಂಕ್ ಸಾಲ ನೀಡುತ್ತದೆ.
ಇದುವರೆಗೆ ಸಿದ್ಧವಾಗಿರುವ ‘ಫ್ರಿಕ್ಶನ್‌ಲೆಸ್ ಕ್ರೆಡಿಟ್’ ಉಪಕ್ರಮವನ್ನು ಶಿಕ್ಷಣ ಸಾಲಗಳಿಗೆ (ಡಿಜಿ ಲಾಕರ್ ಬಳಸಿ) ಕೃಷಿ ಮತ್ತು ಡೈರಿ ಸಾಲಗಳಿಗೆ, ಎಂಎಸ್‌ಎಂಇಗಳಿಗೆ (ಉದ್ಯಮ್ ನೋಂದಣಿ
ಮತ್ತು ಜಿಎಸ್ ಹಾಗೂ ತೆರಿಗೆ ದಾಖಲೆಗಳನ್ನು ಆಧರಿಸಿ) ಮತ್ತು ವಾಹನ ಮತ್ತು ವೈಯಕ್ತಿಕ ಸಾಲಗಳಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ.
10 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಸಾಲವನ್ನು ಮಂಜೂರು ಮಾಡಬಹುದೆಂದು ಪ್ರಾಕ್ಟಿಕಲ್ ಎಕ್ಸಾಮ್ ವೇಳೆ ತಿಳಿದು ಬಂದಿದೆ. ಕೃಷಿ ಸಾಲಗಳನ್ನು ಪ್ರಕ್ರಿಯೆಗೊಳಿಸಲು ಆರ್‌ಬಿಐನದ್ದೇ ಸಮೀಕ್ಷೆಯ
ಪ್ರಕಾರ ಸದ್ಯ ಎರಡರಿಂದ ನಾಲ್ಕು ವಾರಗಳು ಬೇಕಾಗುತ್ತಿವೆ. ಅಷ್ಟೇ ಅಲ್ಲ ಸಾಲದ ಮೊತ್ತ ಸುಮಾರು ಶೇ. 6ರಷ್ಟು ಇದಕ್ಕೇ ವೆಚ್ಚವಾಗುತ್ತಿದೆ. ಹೊಸ ವ್ಯವಸ್ಥೆಯು ಇದನ್ನು ಹೊಡೆದು ಹಾಕಲಿದೆ.

ಇನ್ನು ಸಾಲ ನೀಡಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲು ಬ್ಯಾಂಕ್‌ಗಳು ನಾನಾ ಮೂಲಗಳಿಂದ ಡೇಟಾಗಳನ್ನು ಪಡೆಯಲು ಅನುಕೂಲಕರವಾಗಿದೆ. “ಇದು ಸಾಲ ನೀಡಲು ಇರುವ
ಒಎನ್‌ಡಿಸಿ ವ್ಯವಸ್ಥೆಗೆ ಸಮನಾಗಿರುತ್ತದೆ. ಎಂದು ಆರ್‌ಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಎಲ್ಲಾ ಪ್ರಕ್ರಿಯೆಯು ಅಪ್ಲಿಕೇಶನ್ ಆಧಾರಿತವಾಗಿದ್ದು, ಇದನ್ನು ಬ್ಯಾಂಕಿನ ಅಧಿಕಾರಿಗಳು ಅಥವಾ ಸಾಲಗಾರರು ಬಳಸಬಹುದಾಗಿದೆ. ಬ್ಯಾಂಕಿನ ಅಧಿಕಾರಿಗಳಿಗೆ ಕೈಯಲ್ಲಿ ಹಿಡಿಯುವ ಸಾಧನಗಳನ್ನು
ನೀಡಲಾಗುತ್ತದೆ. ಇವರು ಸಾಲಗಾರರ ರುಜುವಾತುಗಳನ್ನು ಪರಿಶೀಲಿಸಲು, ಸಾಲದ ಒಪ್ಪಿಗೆ ಮತ್ತು ವಿತರಣೆಗೂ ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಲಿದ್ದಾರೆ.
ಇದನ್ನು ಓದಿ: ಮೋದಿ ಸೋಲಿಸಲು ರಚನೆಯಾಗಿರೋ I.N.D.I.A ಮುಂದಿರೋ ಐದು ಸವಾಲುಗಳು
ಯೋಜನೆಯು ಪ್ರಾರಂಭವಾದಾಗ ಬ್ಯಾಂಕ್‌ಗಳ ವ್ಯವಸ್ಥೆಯನ್ನು ಬದಲಾಯಿಸುವುದೂ ಪ್ರಮುಖ ಸವಾಲುಗಳಲ್ಲಿ ಒಂದಾಗಿತ್ತು . ಬ್ಯಾಂಕ್‌ನ ಸಾಲದ ಮೂಲ ವ್ಯವಸ್ಥೆಯಲ್ಲಿ ಕಮ್ಯುನಿಕೇಟ್ ಗೆ
ಅವಕಾಶವಿರಲಿಲ್ಲ. ಬ್ಯಾಂಕ್‌ಗಳು ಭೂ ದಾಖಲೆ ವಿವರಗಳು, ಕೆವೈಸಿ, ಕ್ರೆಡಿಟ್ ಸ್ಕೋರ್ ಅಥವಾ ಇತರ ವಿವರಗಳನ್ನು ಪಡೆಯಬಹುದಾಗಿದ್ದರು ಇದು ಕಂಬೈನ್ಡ್ ಆಗಿರಲಿಲ್ಲ.ಇದೆ ರೀತಿ ಪ್ರತಿ ಬ್ಯಾಂಕ್ಗಳು
ರಾಜ್ಯಗಳೊಂದಿಗೆ ಪ್ರತ್ಯೇಕ ಒಪ್ಪಂದವನ್ನು ಮಾಡಿಕೊಳ್ಳಬೇಕಾಗಿತ್ತು. ಇದು ಕೆಲಸವನ್ನು ಮತ್ತಷ್ಟು ಕಠಿಣಗೊಳಿಸುತ್ತಿತ್ತು,” ಎಂದು ಮತ್ತೋರ್ವ ಆರ್‌ಬಿಐ ಅಧಿಕಾರಿ ಇದರ ವಿವರಗಳನ್ನು ಹಂಚಿಕೊಂಡಿದ್ದಾರೆ.
- ಭವ್ಯಶ್ರೀ ಆರ್.ಜೆ