ಕೊರೋನಾದ ಅಟ್ಟಹಾಸ ದಿನದಿಂದ ದಿನ ಹೆಚ್ಚುತ್ತಲೇ ಇದೆ. ಕೇವಲ 24 ಗಂಟೆಯಲ್ಲಿ ದೇಶದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಸಾವಾಗಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ. ಮಂಗಳವಾರದಂದು 24 ಗಂಟೆಯಲ್ಲಿ 10,974 ಹೆಚ್ಚು ಕೊರೋನಾ ಸೋಂಕಿತರು ದೇಶದಲ್ಲಿ ಪತ್ತೆಯಾಗಿದ್ದಾರೆ.
ದೆಹಲಿಯಲ್ಲಿ ಒಂದೇ ದಿನ 437 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 1,837 ಕ್ಕೇ ಏರಿಕೆಯಾಗಿದೆ. ಇನ್ನು ಮಹಾರಾಷ್ಟ್ರಾದಲ್ಲಿ ಮಂಗಳವಾರದಂದು ಸಾವನ್ನಪ್ಪಿದ ಸಂಖ್ಯೆ 1,409. ಇದುವರೆಗೂ ಮಹಾರಾಷ್ಟ್ರಾದಲ್ಲಿ 5,537ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ.
ಇನ್ನು ರಾಜ್ಯದಲ್ಲಿ ಒಟ್ಟು 7,530ಮಂದಿಗೆ ಕೊರೋನಾ ಸೋಂಕಿತರು ಪತ್ತೆಯಾಗಿದ್ದು ಇದರಲ್ಲಿ 4,456 ಮಂದಿ ಗುಣಮುಖರಾಗಿದ್ದಾರೆ. ಈವರೆಗೂ ಕರ್ನಾಟಕದಲ್ಲಿ 90 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಮಂಗಳವಾರದಂದು 317 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿದೆ.
ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಬುಧವಾರದಂದು ಕೂಡ ರಾಜ್ಯದ ಮುಖ್ಯ ಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ. ಲಾಕ್ಡೌನ್ ಸಡಿಲಿಕೆ ಮಾಡುವ ಸಾಧ್ಯ ಇದೆ ಎನ್ನಲಾಗುತ್ತಿದೆ.