ಕಳೆದ 24ಗಂಟೆಗಳಲ್ಲಿ 25,166 ಕೊರೊನಾ ಕೇಸ್: 154 ದಿನಗಳಲ್ಲೇ ಕನಿಷ್ಠ ಪ್ರಕರಣಗಳು

ನವದೆಹಲಿ, ಆ. 17: ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 25,166 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಇದು ಕಳೆದ 154 ದಿನಗಳಲ್ಲೇ ಕನಿಷ್ಠ ಪ್ರಕರಣಗಳಾಗಿವೆ. ಇದೇ ಅವಧಿಯಲ್ಲಿ 36,830 ಮಂದಿ ಗುಣಮುಖರಾಗಿದ್ದು, 437 ಜನ ಸಾವಿಗೀಡಾಗಿದ್ದಾರೆ.

ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 146 ದಿನಗಳ ಕನಿಷ್ಠ, 3,69,846 ತಲುಪಿದೆ ಹಾಗೂ ಚೇತರಿಕೆ ಪ್ರಮಾಣ ಶೇ 97.51ರಷ್ಟಿದೆ.

ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆ 3.22 ಕೋಟಿಗೆ ಏರಿಕೆಯಾಗಿದ್ದು, ಈ ಪೈಕಿ 3.14 ಕೋಟಿಗೂ ಹೆಚ್ಚು ಜನರು ಗುಣಮುಖರಾಗಿದ್ದಾರೆ. ಕೋವಿಡ್‌ ಕಾರಣಗಳಿಂದಾಗಿ ಈವರೆಗೂ 4,32,079 ಮಂದಿ ಮೃತಪಟ್ಟಿರುವುದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಟಣೆಯಿಂದ ತಿಳಿದು ಬಂದಿದೆ.

ದೇಶದಾದ್ಯಂತ 55.47 ಕೋಟಿಗೂ ಅಧಿಕ ಡೋಸ್‌ ಕೋವಿಡ್‌–19 ಲಸಿಕೆ ಹಾಕಲಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 56.81 ಕೋಟಿಗೂ ಹೆಚ್ಚು ಡೋಸ್‌ ಲಸಿಕೆ ಹಂಚಿಕೆಯಾಗಿದ್ದು, ಅವುಗಳಲ್ಲಿ 2.25 ಕೋಟಿಗೂ ಅಧಿಕ ಡೋಸ್‌ ಲಸಿಕೆ ಬಳಕೆಯಾಗದೆ ಉಳಿದಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Exit mobile version