Hyderabad: ಈ ಹಿಂದೆ ಇಡೀ ದೇಶಾದ್ಯಂತ ಭಾರೀ ಸದ್ದು ಮಾಡಿದ್ದ ರೋಹಿತ್ ವೆಮುಲಾ ಆತ್ಮಹತ್ಯೆ ಪ್ರಕರಣಕ್ಕೆ (Rohit Vemula Not Dalit Student) ಇದೀಗ ಭಾರೀ ಟ್ವೀಸ್ಟ್ ಸಿಕ್ಕಿದ್ದು,
ಆತ ದಲಿತ ವಿದ್ಯಾರ್ಥಿಯಾಗಿರಲಿಲ್ಲ. ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದನು. ಹೀಗಾಗಿ ತನ್ನ ಜಾತಿಯ ಗುರುತು ಬಹಿರಂಗವಾಗಬಹುದು ಎಂಬ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ
ಎಂದು ತೆಲಂಗಾಣ ಪೊಲೀಸರು ಹೈಕೋರ್ಟ್ಗೆ (High Court) ಪ್ರಕರಣದ ಅಂತಿಮ ವರದಿಯನ್ನು ಸಲ್ಲಿಸಿದ್ದಾರೆ.
ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ (Research at Central University of Hyderabad) ವಿದ್ಯಾರ್ಥಿಯಾಗಿದ್ದ ರೋಹಿತ್ ವೆಮುಲಾ ಅವರ ಆತ್ಮಹತ್ಯೆ ಪ್ರಕರಣ ದಲಿತರ
ಮೇಲಿನ ತಾರತಮ್ಯದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾರಣವಾಗಿತ್ತು. ಆದರೆ ತನಿಖೆಯಲ್ಲಿ ವೆಮುಲಾ ಕುಟುಂಬದ ಜಾತಿ ಪ್ರಮಾಣ ಪತ್ರ (Caste Certificate) ನಕಲಿಯಾಗಿದೆ. ಸಾಕ್ಷ್ಯಾಧಾರಗಳ
ಕೊರತೆಯಿಂದ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ ಎಂದು ಅಂತಿಮ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕೆಳ ನ್ಯಾಯಾಲಯದಲ್ಲಿ ಈ ವರದಿಯ ಕುರಿತು ಮೇಲ್ಮನವಿ ಸಲ್ಲಿಸುವಂತೆ ವೆಮುಲಾ ಕುಟುಂಬಸ್ಥರಿಗೆ
ಹೈಕೋರ್ಟ್ ಸೂಚಿಸಿದೆ.
ಇನ್ನು ರೋಹಿತ್ ವೆಮುಲಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಕಂದರಾಬಾದ್ನ ಮಾಜಿ ಸಂಸದ ಬಂಡಾರು ದತ್ತಾತ್ರೇಯ (Bandaru Dattatreya), MLC ಎನ್. ರಾಮಚಂದರ್ ರಾವ್,
ವಿಶ್ವವಿದ್ಯಾಲಯದ ಉಪಕುಲಪತಿ ಅಪ್ಪಾ ರಾವ್, ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ABVP ಮುಖಂಡರು ಸೇರಿದಂತೆ ಅನೇಕರನ್ನು ಪ್ರಕರಣದ ಆರೋಪಿಗಳನ್ನಾಗಿ ಮಾಡಲಾಗಿತ್ತು. ಆದರೆ ಇದೀಗ ಪೊಲೀಸರು
ಎಲ್ಲರನ್ನು ಆರೋಪದಿಂದ ಮುಕ್ತಗೊಳಿಸಿದ್ದಾರೆ. ವೆಮುಲಾ ಕುಟುಂಬಸ್ಥರು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ (Revanth Reddy) ಅವರನ್ನು ಭೇಟಿ ಮಾಡಲು ಮುಂದಾಗಿದ್ದಾರೆ. ಜಾತಿ ದೃಢೀಕರಣದ
ವಿಷಯದಲ್ಲಿ 15 ಸಾಕ್ಷಿಗಳ ಹೇಳಿಕೆಗಳನ್ನು ಪೊಲೀಸರು (Rohit Vemula Not Dalit Student) ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದ್ದಾರೆ.
2015ರಲ್ಲಿ ನಡೆದ ಪ್ರಕರಣ ಏನು? ಆರೋಪ ಏನು?
ರೋಹಿತ್ ವೆಮುಲಾ ಸೇರಿದಂತೆ ವಿವಿಯ ಐದು ವಿದ್ಯಾರ್ಥಿಗಳು ಪ್ರತಿಭಟನೆಯೊಂದರ ವೇಳೆ ಎಬಿವಿಪಿ ವಿದ್ಯಾರ್ಥಿ ನಾಯಕರ ಮೇಲೆ ಹಲ್ಲೆ ಮಾಡಿದ್ದರು. ಈ ಪ್ರಕರಣ ನಂತರ ವಿವಿ ರೋಹಿತ್ ಮತ್ತು ಇತರ ನಾಲ್ವರನ್ನು
ಅಮಾನತುಗೊಳಿಸಿ, ಹಾಸ್ಟೆಲ್ನಿಂದ ಹೊರಹಾಕಿತ್ತು. ಇದರಿಂದ ಮನನೊಂದು 2016ರ ಜನವರಿ 17 ರಂದು ರೋಹಿತ್ ವೆಮುಲಾ ತನ್ನ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನು. ರೋಹಿತ್ ವೆಮುಲಾ ಪಿಎಚ್ಡಿ
ಸಂಶೋಧನೆ ಮಾಡುತ್ತಿದ್ದಾಗ 25 ಸಾವಿರ ಫೆಲೋಶಿಪ್ ಪಡೆಯುತ್ತಿದ್ದರು. ನಿಗದಿತ ಸಮಯದಲ್ಲಿ ಸಂಶೋಧನಾ ಕಾರ್ಯ ಪೂರ್ಣಗೊಳ್ಳದ ಕಾರಣ ವೆಮುಲಾಗೆ ಬರುತ್ತಿದ್ದ ಫೆಲೋಶಿಪ್ (Fellowship)
ನಿಲ್ಲಿಸಲಾಗಿತ್ತು.
ಇದನ್ನು ಓದಿ: ಭ್ರಷ್ಟಚಾರಗಳಿಂದ ಪಕ್ಷ ಶ್ರೀಮಂತವಾಗಿದೆ ಆದರೆ ಬಡವರ ಪಾಡು ಹೇಳತೀರದಾಗಿದೆ : ಪ್ರಿಯಾಂಕಾ ಗಾಂಧಿ ಆರೋಪ