ಕಳೆದ ಒಂದೇ ದಿನದಲ್ಲಿ ಕೊರೋನಾದಿಂದ 3, 417 ಮಂದಿ ಸಾವು

ನವದೆಹಲಿ, ಮೇ. 03: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3,68,147 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 1,99,25,604 ಕ್ಕೆ ತಲುಪಿದೆ. ಇನ್ನೂ ಇದೇ ವೇಳೆ 3, 417 ಮಂದಿ ಸಾವಿಗೀಡಾಗಿದ್ದು, ಮರಣ ಸಂಖ್ಯೆ 2,18,959ಕ್ಕೇರಿದೆ. ಒಟ್ಟು 16,29,3003 ಮಂದಿ ಚೇತರಿಸಿಕೊಂಡಿದ್ದಾರೆ. 15,71,98,207 ಮಂದಿಗೆ ಕೊವಿಡ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ದೆಹಲಿಯಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಆಕ್ಸಿಜನ್ ಸಿಗದೆ 12 ಮಂದಿ ಸಾವಿಗೀಡಾದ ಘಟನೆಯನ್ನು ಉಲ್ಲೇಖಿಸಿದ ಸುಪ್ರೀಂಕೋರ್ಟ್ 2021 ಮೇ 3 ಮಧ್ಯರಾತ್ರಿಗಿಂತ ಮುಂಚೆ ಆಕ್ಸಿಜನ್ ಕೊರತೆ ನೀಗಿಸುವ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಗೆ ಹೇಳಿದೆ. ಅದೇ ವೇಳೆ ಹೆಚ್ಚಿನ ಸಂಗ್ರಹ ಇರಿಸಿ ಮುಂದೆ ವೈದ್ಯಕೀಯ ಆಕ್ಸಿಜನ್​ಗೆ ಕೊರತೆಯುಂಟಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದೆ. ಕೊರೋನಾ ಎರಡನೇ ಅಲೆ ಅತೀ ತೀವ್ರವಾಗಿರುವುದರಿಂದ ಜನರ ಆರೋಗ್ಯದ ದೃಷ್ಟಿಯಲ್ಲಿ ಲಾಕ್​ಡೌನ್ ಹೇರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಹೇಳಿದೆ. ಪಂಜಾಬ್, ಒಡಿಶಾ ಮತ್ತು ಗೋವಾ ಸೇರಿದಂತೆ ಹಲವು ರಾಜ್ಯಗಳು ಕೊವಿಡ್ ನಿಯಂತ್ರಣಕ್ಕಾಗಿ ಲಾಕ್​ಡೌನ್ ಹೇರಿವೆ.

Exit mobile version