ದೆಹಲಿಯಲ್ಲಿ ಲಘು ಭೂಕಂಪ: 3.7 ತೀವ್ರತೆ ದಾಖಲು

ನವದೆಹಲಿ, ಜು. 06: ಸೋಮವಾರ ರಾತ್ರಿ ಹರಿಯಾಣದ ಝಾಜ್ಜರ್ ನಲ್ಲಿ 3.7 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಇದರಿಂದ ದೆಹಲಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ ಎಂದು ರಾಷ್ಟ್ರೀಯ ಭೂಕಂಪ ವಿಜ್ಞಾನ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.

ರಿಕ್ಟರ್‌ ಮಾಪಕದಲ್ಲಿ 3.7 ರಷ್ಟು ತೀವ್ರತೆ ದಾಖಲಾಗಿದ್ದು, ರಾತ್ರಿ 10.36 ಕ್ಕೆ 5 ಕಿ.ಮೀ ಆಳದಲ್ಲಿ ಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ಎನ್‌ಸಿಎಸ್ ತಿಳಿಸಿದೆ. ದೆಹಲಿಯಲ್ಲಿ ಜೂನ್‌ 20 ರಂದು 2.1 ರಷ್ಟು ತೀವ್ರತೆಯ ಲಘು ಭೂಕಂಪ ಸಂಭವಿಸಿತ್ತು.

Exit mobile version