Paris : 303 ಮಂದಿ ಭಾರತೀಯನ್ನು ಹೊತ್ತು ಕೇಂದ್ರ ಅಮೆರಿಕದ ನಿಕರಾಗುವಾಗೆ ತೆರಳುತ್ತಿದ್ದ ವಿಮಾನವೊಂದನ್ನು ಫ್ರಾನ್ಸ್ನ ಅಧಿಕಾರಿಗಳು ಮಾನವ ಕಳ್ಳಸಾಗಣೆ ಶಂಕೆಯ ಮೇಲೆ ವ್ಯಾಟ್ರಿ ವಿಮಾನ ನಿಲ್ದಾಣದಲ್ಲಿ(Air Port) ಲ್ಯಾಂಡ್ ಮಾಡಿಸಿದ್ದಾರೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.
ಪ್ಯಾರಿಸ್ (Paris) ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿಯ ಪ್ರಕಾರ, 303 ಭಾರತೀಯ ಪ್ರಯಾಣಿಕರನ್ನು ಹೊತ್ತ ವಿಮಾನವು ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಟೇಕಾಫ್ ಆಗಿತ್ತು. ಮಾನವ ಕಳ್ಳಸಾಗಣಿಕೆ ಶಂಕೆಯ ಮೇರೆಗೆ 303 ಭಾರತೀಯರನ್ನು ಹೊತ್ತು ನಿಕರಾಗುವಾಕ್ಕೆ ತೆರಳುತ್ತಿದ್ದ ವಿಮಾನವನ್ನು ಫ್ರಾನ್ಸ್ ತಡೆದಿದೆ.
ವಿಮಾನದಲ್ಲಿರುವವರು ಭಾರತೀಯ( Indians) ಮೂಲದವರಾಗಿದ್ದು, ಕೇಂದ್ರ ಅಮೆರಿಕಕ್ಕೆ ತೆರಳಿ ಅಲ್ಲಿಂದ ಯುನೈಟೆಡ್ ಸ್ಟೇಟ್ಸ್ ಅಥವಾ ಕೆನಡಾಗೆ ಅಕ್ರಮವಾಗಿ ನುಸುಳಲು ತೆರಳುತ್ತಿರುವ ಶಂಕೆ ವ್ಯಕ್ತವಾಗಿದೆ. ಗುರುವಾರ ರಾತ್ರಿ ವಿಮಾನವನ್ನು ವಶಕ್ಕೆ ಪಡೆಯಲಾಗಿದೆ. ಅದರಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಗುರುವಾರ ರಾತ್ರಿಯಿಡೀ ಪ್ರಯಾಣಿಕರು ವಿಮಾನದೊಳಗಡೆಯೇ ಇದ್ದರು. ಶುಕ್ರವಾರ ಅವರನ್ನು ವಿಮಾನ ನಿಲ್ದಾಣದ ಮುಖ್ಯ ಸಭಾಂಗಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮರ್ನೆ ಪ್ರಾದೇಶಿಕ ಆಡಳಿತದ ಅಧಿಕಾರಿ ತಿಳಿಸಿದ್ದಾರೆ.
ರೊಮೇನಿಯಾದ (Romania) ಸಣ್ಣ ವಿಮಾನಯಾನ ಕಂಪನಿ ಲೆಜೆಂಡ್ ಏರ್ಲೈನ್ಸ್ಗೆ ಸೇರಿದ ಎ340 ವಿಮಾನ ಯನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಯಿಂದ ಸೆಂಟ್ರಲ್ ಅಮೆರಿಕಾದ ನಿಕರಾಗುವಾ ದೇಶಕ್ಕೆ ತೆರಳುತ್ತಿತ್ತು. ಇದನ್ನು ಪ್ಯಾರಿಸ್ನ ಪೂರ್ವದ ವ್ಯಾಟ್ರಿ ವಿಮಾನ ನಿಲ್ದಾಣದಲ್ಲಿ ಇಂಧನ ತುಂಬಲು ನಿಲ್ಲಿಸಿದ್ದಾಗ ಭದ್ರತಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ವಿಶೇಷ ಫ್ರೆಂಚ್ ಸಂಘಟಿತ ಅಪರಾಧ ಘಟಕದ ತನಿಖಾಧಿಕಾರಿಗಳು, ಗಡಿ ಪೊಲೀಸ್ ಮತ್ತು ವಾಯುಯಾನ ಅಧಿಕಾರಿಗಳು ಪ್ರಯಾಣಿಕರು ಮತ್ತು ವಿಮಾನದ ಕುರಿತು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಮಾಹಿತಿ ನೀಡಿರುವ ಫ್ರಾನ್ಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ನಾವು ಭಾರತೀಯರ ಸಹಾಯಕ್ಕೆ ಧಾವಿಸಿದ್ದೇವೆ. ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದೇವೆ. ಪ್ರಯಾಣಿಕರ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ.
ಫ್ರಾನ್ಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಕೂಡ ತನಿಖೆಯನ್ನು ಪ್ರಾರಂಭಿಸಿದ್ದು, ವಿಮಾನದಲ್ಲಿರುವ ಭಾರತೀಯರ ನೆರವಿಗೆ ಮುಂದಾಗಿದೆ. ಯುಎಇಯಿಂದ ನಿಕರಾಗುವಾಗೆ ತೆರಳುವ ವಿಮಾನದಲ್ಲಿ 303 ಜನರು, ಹೆಚ್ಚಿನಂಶ ಭಾರತೀಯ ಮೂಲದವರು ಇರುವುದಾಗಿ ಫ್ರಾನ್ಸ್ನ ಅಧಿಕಾರಿಗಳು ನಮಗೆ ಮಾಹಿತಿ ನೀಡಿದ್ದಾರೆ. ಮಾನವ ಕಳ್ಳಸಾಗಣೆಯ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಮ್ಮ ತಂಡ ಅಲ್ಲಿಗೆ ತಲುಪಿದೆ ಎಂದು ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿದೆ.
ಭವ್ಯಶ್ರೀ ಆರ್ ಜೆ