343% ಹೆಚ್ಚು ಸಾಲ ಪಡೆದ ಕರ್ನಾಟಕ

ಬೆಂಗಳೂರು: ಕೊರೋನಾ ಬಿಕ್ಕಟ್ಟಿನಿಂದ ರಾಜ್ಯಗಳ ಆದಾಯಕ್ಕೆ ಭಾರೀ ಹೊಡೆತ ಬಿದ್ದಿದ್ದು ಭಾರತದ ಬಹುತೇಕ ರಾಜ್ಯಗಳು  ಮಾರುಕಟ್ಟೆಯಿಂದ ಪಡೆದ ಸಾಲದಲ್ಲಿ ಬಹಳಷ್ಟು ಏರಿಕೆಯಾಗಿದೆ. ಕರ್ನಾಟಕ ಮಹಾರಾಷ್ಟ್ರ ನಾಗಾಲ್ಯಾಂಡ್, ಹಾಗೂ ತಮಿಳುನಾಡು ರಾಜ್ಯಗಳು ಕಳೆದ ವರ್ಷ ಇದೇ ಸಮಯಕ್ಕೆ ಮಾಡಿದ್ದ ಸಾಲಕ್ಕಿಂತ  ಶೇ. 100 ಪ್ರಮಾಣದಲ್ಲಿ ಏರಿಕೆಯಾಗಿದೆ. ಮಧ್ಯಪ್ರದೇಶ, ಮೇಘಾಲಯ, ಗೋವಾ, ಅಸ್ಸಾಂ, ಉತ್ತರಾಖಂಡ್, ಆಂಧ್ರಪ್ರದೇಶ, ಒಡಿಶಾ ಹಾಗೂ ಛತ್ತೀಸ್ಗಢ ರಾಜ್ಯಗಳ ಸಾಲ ಪ್ರಮಾಣವೂ ಕಳೆದ ವರ್ಷಕ್ಕಿಂತ ಶೇ 50 ರಿಂದ 100 ಕ್ಕೆ ಹೆಚ್ಚಾಗಿದೆ.

ಸಿಕ್ಕಿಂ, ತೆಲಂಗಾಣ, ಜಮ್ಮು-ಕಾಶ್ಮೀರ, ಕೇರಳ, ರಾಜಸ್ಥಾನ,ಹರ್ಯಾಣ, ಗುಜರಾತ್, ಪಶ್ಚಿಮ ಬಂಗಾಳ, ಮತ್ತು ಮಿಜೋರಾಂ ರಾಜ್ಯಗಳ ಸಾಲ ಶೇ 25 ರಿಂದ 36 ರಷ್ಟು ಹೆಚ್ಚಾಗಿದೆ. ಆದರೆ ಆಶ್ಚರ್ಯ ಎಂದರೆ  ಅರುಣಾಚಲ ಪ್ರದೇಶ, ಬಿಹಾರ, ಜಾರ್ಖಂಡ್, ಹಿಮಾಚಲ ಪ್ರದೇಶ, ಪಂಜಾಬ್, ಮಣಿಪುರ್, ಉತ್ತರಪ್ರದೇಶ, ಹಾಗೂ ತ್ರಿಪುರ ರಾಜ್ಯಗಳು ಈ ಅವಧಿಯಲ್ಲಿ ಶೇ 25 ರಷ್ಟು ಕಡಿಮೆ ಸಾಲ ಪಡೆದಿವೆ. ಕಳೆದ ವರ್ಷಕ್ಕಿಂತ ಅತಿ ಹೆಚ್ಚು ಸಾಲ ಪಡೆದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ ಕರ್ನಾಟಕ.

Exit mobile version