ರಾಜ್ಯಸಭೆಗೆ ಸೋನಿಯಾ ಗಾಂಧಿ, ಅಶ್ವಿನಿ ವೈಷ್ಣವ್ ನಡ್ಡಾ ಸೇರಿ 37 ಅಭ್ಯರ್ಥಿಗಳು ಅವಿರೋಧ ಆಯ್ಕೆ : ಇಲ್ಲಿದೆ ಪಟ್ಟಿ

New Delhi: ರಾಜ್ಯಸಭಾ ಚುನಾವಣೆಯ ಫಲಿತಾಂಶಕ್ಕೂ ಮುನ್ನವೇ ಸುಮಾರು 37 ಅಭ್ಯರ್ಥಿಗಳು ವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಕಾಂಗ್ರೆಸ್ನ (Congress) ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ರಾಜಸ್ಥಾನದಿಂದ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ್ದು, ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ (BJP) ಚುನ್ನಿಲಾಲ್ ಗರಸಿಯಾ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಇತ್ತೀಚೆಗೆ ಬಿಜೆಪಿ ಸೇರಿದ ಅಶೋಕ್ ಚೌಹಾಣ್ ಮತ್ತು ಮದನ್ ರಾಥೋಡ್ (Madan Rathod) ಅವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇನ್ನು ನಾಮಪತ್ರ ಹಿಂದಕ್ಕೆ ಪಡೆಯಲು ಫೆಬ್ರುವರಿ (February) 20 ಕೊನೆಯ ದಿನವಾಗಿತ್ತು. ಹೀಗಾಗಿ 10 ರಾಜ್ಯಗಳಲ್ಲಿ ಎದುರಾಳಿಗಳು ತಮ್ಮ ನಾಮಪತ್ರಗಳನ್ನು ವಾಪಸ್ ಪಡೆದಿದ್ದಾರೆ. ಇದರಿಂದ 37 ಅಭ್ಯರ್ಥಿಗಳ ಆಯ್ಕೆ ಸುಗಮವಾಗಿದೆ. ನಾಮಪತ್ರ ಹಿಂದಕ್ಕೆ ಪಡೆದ ನಂತರ ಬಿಜೆಪಿಯ 19 ಸದಸ್ಯರು ನೇರವಾಗಿ ರಾಜ್ಯಸಭೆ ಪ್ರವೇಶಿಸಲಿದ್ದಾರೆ. ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ತಲಾ ನಾಲ್ಕು ಮತ್ತು ಆಂಧ್ರಪ್ರದೇಶದ (Andrapradesh) ವೈಎಸ್ಆರ್ ಕಾಂಗ್ರೆಸ್ನ ಮೂವರು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. BJD ಹಾಗೂ RJD ತಲಾ ಎರಡು, NCP, ಶಿವಸೇನಾ ಮತ್ತು JDU ಪಕ್ಷದ ತಲಾ ಒಬ್ಬ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇನ್ನು ಗುಜರಾತ್ (Gujarat) ವಿಧಾನಸಭೆಯಿಂದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (J P Nadda), ವಜ್ರದ ವ್ಯಾಪಾರಿ ಗೋವಿಂದಭಾಯ್ ಢೋಲಾಕಿಯಾ, ಜಸ್ವಂತ್ಸಿನ್ಹಾ ಪಾರ್ಮರ್ ಮತ್ತು ಮಯಾಂಕ್ ನಾಯಕ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಹಾರಾಷ್ಟ್ರದಿಂದ ಅಶೋಕ್ ಚೌಹಾಣ್, ಮೇಧಾ ಕುಲಕರ್ಣಿ, ಅಜಿತ್ ಗೋಪಿಚಂದ್, ಸಿಎಂ ಏಕನಾಥ್ ಶಿಂಧೆ (Ekanath Shinde) ಬಣದ ಶಿವಸೇನೆಯ ಮಿಲಿಂದ್ ದಿಯೋರಾ, ಅಜಿತ್ ಪವಾರ್ ಬಣದ ಎನ್ಸಿಪಿಯಿಂದ ಪ್ರಫುಲ್ ಪಟೇಲ್ ಮತ್ತು ಕಾಂಗ್ರೆಸ್ನ ಚಂದ್ರಕಾಂತ್ ಹಂಡೋರೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸೋನಿಯಾ ಗಾಂಧಿ (Sonia Gandhi) ಅವರು ರಾಜ್ಯಸಭೆ ಪ್ರವೇಶಿಸುತ್ತಿರುವುದು ಇದೇ ಮೊದಲು. 77 ವರ್ಷದ ಸೋನಿಯಾ ಗಾಂಧಿ ಅವರು 5 ಬಾರಿ ಲೋಕಸಭೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 1999ರಲ್ಲಿ ಮೊದಲ ಬಾರಿಗೆ ಉತ್ತರಪ್ರದೇಶದ (Uttara Pradesh) ರಾಯ್ಬರೇಲಿ ಕ್ಷೇತ್ರದಿಂದ ಲೋಕಸಭೆ ಪ್ರವೇಶಿಸಿದ್ದರು.

Exit mobile version