ಕಳೆದ 24 ಗಂಟೆಯಲ್ಲಿ 38,667 ಕೋವಿಡ್ ಪ್ರಕರಣ ದಾಖಲು

ನವದೆಹಲಿ, ಆ. 14: ದೇಶದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 38,667 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 35,743 ಸೋಂಕಿತರು ಗುಣಮುಖರಾಗಿದ್ದು, 478 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಈವರೆಗೆ ಸೋಂಕಿತರಾದವರ ಸಂಖ್ಯೆ 3,21,56,493 ತಲುಪಿದ್ದು, ಸಾವಿನ ಸಂಖ್ಯೆ 4,30,732ಕ್ಕೆ ಏರಿಕೆಯಾಗಿದೆ.

ಸದ್ಯ ದೇಶದಲ್ಲಿ 3,87,673 ಸಕ್ರಿಯ ಪ್ರಕರಣಗಳಿದ್ದು, ಇದು ಒಟ್ಟು ಪ್ರಕರಣಗಳ ಶೇ 1.21ರಷ್ಟಾಗಿದೆ. ಚೇತರಿಕೆ ಪ್ರಮಾಣ ಶೇ 97.45ರಷ್ಟಿದೆ.

Exit mobile version