40 ಕೆಎಎಸ್ ಅಧಿಕಾರಿಗಳ ವಿರುದ್ಧ ಅಕ್ರಮ, ದುರ್ನಡತೆ ಆರೋಪ ; ಅಧಿಕಾರಿಗಳ ವಿರುದ್ಧ ಇಲಾಖೆ ವಿಚಾರಣೆಗೆ ಪ್ರಸ್ತಾವ!

‘ದ ಫೈಲ್’ ಪತ್ರಿಕೆ ನೀಡಿರುವ ಮಾಹಿತಿಯ ಅನುಸಾರ, ಸಚಿವ ಶ್ರೀರಾಮುಲು ಅವರು ಆರೋಪಿಯಾಗಿರುವ ಲೋಕಾಯುಕ್ತ ಪ್ರಕರಣದಲ್ಲಿ ಇಲಾಖೆಗೆ ವಿಚಾರಣೆ ನಡೆಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಆಡಳಿತ ಇಲಾಖೆಗಳು ಪ್ರಸ್ತಾವವನ್ನು ಸಲ್ಲಿಸಿರುವುದು ಇದೀಗ ಬಟ ಬಯಲಾಗಿದೆ.

ಇದೇ ವರ್ಷದ ಫೆಬ್ರವರಿ ತಿಂಗಳ 15ನೇ ತಾರೀಖಿನಂದು ನಡೆಸಲಾದ ವಿಧಸನಸಭೆ ಅಧಿವೇಶನದಲ್ಲಿ ಕೃಷ್ಣಬೈರೇಗೌಡ ಅವರು ಕೇಳಿದ್ದ ಪ್ರಶ್ನೆಗೆ ಉತ್ತರ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು, ಇಲಾಖೆ ವಿಚಾರಣೆಗೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಒಟ್ಟಾರೆ 40 ಕೆಎಎಸ್ ಅಧಿಕಾರಿಗಳ ವಿರುದ್ಧ ಪ್ರಸ್ತಾವನೆ ಬಂದಿವೆ ಎಂದು ಪಟ್ಟಿಯನ್ನು ಬಿಡುಗಡೆಗೊಳಿಸಿದರು. ಈ ಪಟ್ಟಿಯು ‘ದ ಫೈಲ್’ ಪತ್ರಿಕೆಗೆ ದೊರೆತಿದೆ.

ಸದ್ಯ ಲಭ್ಯವಾಗಿರುವ ಪಟ್ಟಿಯಲ್ಲಿ ಇಲಾಖೆ ವಿಚಾರಣೆಗೆ ಗುರಿಯಾಗಿರುವ 40 ಕೆಎಎಸ್ ಅಧಿಕಾರಿಗಳ ಹೆಸರು, ಮಾಹಿತಿಗಳು ಸಂಕ್ಷಿಪ್ತವಾಗಿ ದೊರೆತಿದೆ. ಅದರ ಪಟ್ಟಿ ಹೀಗಿದೆ. ಈ ಪಟ್ಟಿಯೊಳಗೆ ಸೇರ್ಪಡೆಯಾಗಿರುವ ಹೆಸರಿನ ವ್ಯಕ್ತಿಗಳ ಕುರಿತು ಈಗಾಗಲೇ ಜಾರಿಯಾಗಿರುವ ಶಿಸ್ತುಕ್ರಮದ ಬೆನ್ನಲ್ಲೇ ಕೆಲ ಪ್ರಕರಣಗಳಲ್ಲಿ ಅಧಿಕಾರಿ, ನೌಕರರು ಸಂಬಂಧಿಸಿದ ನ್ಯಾಯಲಯದಿಂದ ತಡೆಯಾಜ್ಞೆಯನ್ನು ಪಡೆದುಕೊಂಡಿದ್ದಾರೆ. ಈ ಕಾರಣದಿಂದಲೇ ನ್ಯಾಯಲಯಗಳಲ್ಲಿ ಹಾಗೂ ಅಧಿಕಾರಿಗಳ ಪ್ರತಿ ರಕ್ಷಣಾ ಹೇಳಿಕೆ ಸಲ್ಲಿಕೆ ಸೇರಿದಂತೆ ವಿಚಾರಣೆ ವರದಿ ಸಲ್ಲಿಕೆಯ ನಂತರ ಆಡಳಿತ ಇಲಾಖೆಯ ಸ್ಪಷ್ಟೀಕರಣ, ಅಭಿಪ್ರಾಯ ಕೋರಿರುವ ಕೆಲವು ಪ್ರಕರಣಗಳಲ್ಲಿ ಆಡಳಿತ ಇಲಾಖೆಯು ಸಂಬಂಧಿಸಿದ ಕ್ಷೇತ್ರ ಮತ್ತು ಇಲಾಖೆಗಳಿಂದ ಮಾಹಿತಿ, ಅನಿಸಿಕೆಗಳನ್ನು ಕಲೆಹಾಕುವಲ್ಲಿ ಸಮಯ ವ್ಯರ್ಥ ಮಾಡಲಾಗುತ್ತಿದೆ.

ವರದಿ ನೀಡಬೇಕಾದ ಕೆಲ ಪ್ರಕರಣಗಳಲ್ಲಿ ಆಡಳಿತಾತ್ಮಕವಾಗಿ ಪತ್ರ ವ್ಯವಹಾರ ನಡೆಯುತ್ತಿರುವ ಕಾರಣ ಕಾಲಮಿತಿ ಅನ್ವಯ ಕ್ರಮ ಕೈಗೊಳ್ಳಲು ಸಾಧ್ಯವಾಗಿರುವುದಿಲ್ಲ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿದೆ.ಒಟ್ಟಾರೆ ವಿವಿಧ ರೀತಿಯಲ್ಲಿ ನಡೆದಿರುವ ಅಕ್ರಮ, ದುರ್ನಡತೆ ಆರೋಪದಡಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಹಾಲಿ ಪ್ರಧಾನ ಕಾರ್ಯದರ್ಶಿಯಾದ ಮಂಜುನಾಥ್ ಪ್ರಸಾದ್, ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಂ ತದನಂತರ 8 ಮಂದಿ ಐಎಎಸ್, ಹೇಮಂತ್ ನಿಂಬಾಳ್ಕರ್ ಸೇರಿದಂತೆ 5 ಮಂದಿ ಐಪಿಎಸ್, 9 ಮಂದಿ ಐಎಫ್ಎಸ್ ಅಧಿಕಾರಿಗಳ ವಿರುದ್ಧವೂ ಇಲಾಖೆ ವಿಚಾರಣೆ ನಡೆಸುವ ಪ್ರಸ್ತಾವವೂ ಹೊರಬಿದ್ದಿದೆ.

Source Credits : The File

Exit mobile version