ರೊಮಾನಿಯ ಮೂಲಕ 470 ವಿದ್ಯಾರ್ಥಿಗಳನ್ನು ಏರ್ ಲಿಫ್ಟ್ ಮಾಡುತ್ತಿರುವ ಭಾರತ!

ಕಳೆದ ಎರಡು ದಿನಗಳಿಂದ ಉಕ್ರೇನ್-ರಷ್ಯಾ ಸಂಘರ್ಷದಿಂದ ಸಂಚಲನ ಸೃಷ್ಠಿಯಾಗಿದ್ದು, ರಷ್ಯಾ ಸೈನ್ಯವು ಉಕ್ರೇನ್ ರಾಜಧಾನಿ ಕೀವ್ ಅನ್ನು ಆಕ್ರಮಣ ಮಾಡಿದೆ. ಈ ಆತಂಕದ ನಡುವೆ ಉಕ್ರೇನ್ ವಿದೇಶಾಂಗ ಸಚಿವಾಲಯ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಧ್ಯಸ್ಥಿಕೆ ವಯಿಸಲು ಮನವಿ ಮಾಡಿಕೊಂಡಿದೆ.

ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರ ಕಛೇರಿ ಮತ್ತು ಭಾರತದ ವಿದೇಶಾಂಗ ಸಚಿವಾಲಯ ರಷ್ಯಾ ಮತ್ತು ಉಕ್ರೇನ್ ದೇಶಗಳಿಗೆ ಸುಮಾರು 15,000 ಭಾರತೀಯರು ವಿದ್ಯಾರ್ಥಿಗಳು/ಜನರು ಇರುವುದಾಗಿ ಸುರಕ್ಷತೆಗೆ ಮಾಹಿತಿ ನೀಡಿತ್ತು. ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರ ಕಛೇರಿಯೂ ಕೂಡ ಕಳೆದ ಹದಿನೈದು ದಿನಗಳಲ್ಲಿ 3 ಭಾರಿ ಯುದ್ದದ ಸೂಚನೆ ಮತ್ತು ಭಾರತಕ್ಕೆ ತೆರಳುವಂತೆ ಮಾಹಿತಿ ನೀಡಿರುತ್ತದೆ. ಆದರೂ ಕೂಡ ಸುಮಾರು 3000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಲ್ಲಿಯೇ ಸಿಲುಕಿ ಕೊಂಡಿರುವುದರಿಂದ ಅವರನ್ನು ಕರೆತರಲು ಭಾರತದ ಸರ್ಕಾರ ಪ್ರಯತ್ನಿಸುತ್ತಿದ್ದು.

ಶುಕ್ರವಾರ ಸಂಜೆಯಿಂದ ಭಾರತ ಕಾರ್ಯಚರಣೆ ಮಾಡುತ್ತಿದೆ. ಎಲ್ಲಾ ಕಡೆ ವಾಯು ಮಾರ್ಗ ನಿರ್ಬಂಧವಾಗಿದ್ದು ಸದ್ಯಕ್ಕೆ ರೋಮಾನಿಯ ದೇಶದವರೆಗೆ ಬಸ್ ಮೂಲಕ 470 ವಿದ್ಯಾರ್ಥಿಗಳನ್ನು ಹುಂಗೇರಿ, ಪೋಲ್ಯಾಂಡ್ ಮಾರ್ಗವಾಗಿ ಈ ವಿಶೇಷ ಬಸ್ ತಲುಪಿದ ನಂತರ ರೊಮೆನಿಯ ಹೋಗಲಿದೆ. ಅಲ್ಲಿಂದ ಎರಡು ಏರ್ ಇಂಡಿಯಾ ಚಾರ್ಟರ್ ವಿಮಾನ ವ್ಯವಸ್ಥೆ ಮಾಡಿದ್ದು ಮುಂಬೈ ವಿಮಾನ ನಿಲ್ದಾಣಕ್ಕೆ ತಲುಪಲಿದೆ. ಇನ್ನೂ ಕೆಲವು ಯುದ್ದ ನಡೆಯುತ್ತಿರುವ ಮತ್ತು ಉಕ್ರೇನ್-ರಷ್ಯಾ ಗಡಿಭಾಗದಲ್ಲಿರುವ ಭಾರತೀಯರಿಗೆ ವಿದ್ಯಾರ್ಥಿಗಳಿಗೆ ಭಾರತೀಯ ಅಧಿಕಾರಿಗಳ ಸಲಹೆಯನ್ನು ಮೀರಿ ಎಲ್ಲಿಯೂ ಹೋರಬರದಂತೆ ಸೂಚನೆ ನೀಡಿದ್ದು ಭಾರತದ ಅಧಿಕಾರಿಗಳು ಕರೆತರಲು ಪ್ರಯತ್ನಿಸುತ್ತಿದ್ದು ಸದಾ ಸಂಪರ್ಕದಲ್ಲಿದ್ದಾರೆ.

Exit mobile version