ಬಂಗಾಳಕೊಲ್ಲಿಯಲ್ಲಿ ಭೂಕಂಪನ: 5.1ರಷ್ಟು ತೀವ್ರತೆ ದಾಖಲು

ಚೆನ್ನೈ, ಆ. 24: ಬಂಗಾಳ ಕೊಲ್ಲಿಯ ಸಮುದ್ರದಾಳದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ ಕಂಪನದ ತೀವ್ರತೆ 5.1ರಷ್ಟು ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನ ಅಧ್ಯಯನ ಕೇಂದ್ರ ತಿಳಿಸಿದೆ.

ಚೆನ್ನೈನಿಂದ ಸುಮಾರು 300 ಕಿ.ಮೀ ದೂರದಲ್ಲಿ 10 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಪತ್ತೆಯಾಗಿದ್ದು, ಮಂಗಳವಾರ ಮಧ್ಯಾಹ್ನ 12.35ರ ಸುಮಾರಿಗೆ ಭೂಕಂಪ ಸಂಭವಿಸಿದೆ.

ಭೂಕಂಪದಿಂದ ಯಾವುದೇ ಹಾನಿಯಾದ ಬಗ್ಗೆ ತಕ್ಷಣದ ವರದಿಗಳು ಬಂದಿಲ್ಲ. ಆದರೆ ನಗರದ ಅಡ್ಯಾರ್‌ ಮತ್ತು ಸಮೀಪದ ತಿರುವಾನ್ಮಿಯೂರ್‌ಗಳಲ್ಲಿನ ನಿವಾಸಿಗಳಿಗೆ ಲಘು ಕಂಪನದ ಅನುಭವವಾಗಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.

Exit mobile version