Bangalore : ತೀವ್ರ ಕುತೂಹಲ ಕೆರಳಿಸಿದ್ದ ಪಂಚರಾಜ್ಯಗಳ (Five State) ವಿಧಾನಸಭಾ ಚುನಾವಣೆಗೆ (Assembly Elections) ಮತದಾನ ಮುಕ್ತಾಯವಾಗಿದ್ದು, ಎಕ್ಸಿಟ್ ಪೋಲ್ಗಳ(Exit Poll) ಫಲಿತಾಂಶ ಹೊರಬಿದ್ದಿದೆ. ಮಧ್ಯಪ್ರದೇಶ(Madhya Pradesh), ರಾಜಸ್ಥಾನ (Rajasthan), ಛತ್ತೀಸ್ಗಢ(Chhattisgarh), ತೆಲಂಗಾಣ(Telangana) ಹಾಗೂ ಮಿಜೋರಾಂ(Mizoram) ರಾಜ್ಯಗಳಲ್ಲಿ ಯಾರಿಗೆ ಅಧಿಕಾರದ ಸೂತ್ರ ಸಿಗಲಿದೆ ಎಂಬುದು ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.
ಎಕ್ಸಿಲ್ಪೋಲ್ಗಳ ಫಲಿತಾಂಶ :
ಮಧ್ಯಪ್ರದೇಶ : (Madhya Pradesh)
ಮಧ್ಯಪ್ರದೇಶದಲ್ಲಿ ಬಿಜೆಪಿ(BJP) ಮತ್ತೊಮ್ಮೆ ಅಧಿಕಾರಕ್ಕೇರಲಿದೆ ಎಂದು ರಿಪಬ್ಲಿಕ್ – ಮ್ಯಾಟ್ರಿಜ್, ಟುಡೇಸ್ ಚಾಣಾಕ್ಯ, ಇಂಡಿಯಾ ಟಿವಿ – ಸಿಎನ್ಎಕ್ಸ್ ಹಾಗೂ ಜನ್ ಕಿ ಬಾತ್ ಸಮೀಕ್ಷಾ ಹೇಳಿದರೆ, ಇಂಡಿಯಾ ಟುಡೇ – ಆಕ್ಸಿಸ್, ಪೋಲ್ ಸ್ಟ್ರಾಟ್ ಸಮೀಕ್ಷಾ ಕಾಂಗ್ರೆಸ್(Congress) ಅಧಿಕಾರದ ಸೂತ್ರ ಹಿಡಿಯಲಿದೆ ಎಂದಿವೆ. ಇನ್ನು ಜನ್ ಕಿ ಬಾತ್ ಸಂಸ್ಥೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ಸ್ಪರ್ದೆ ಇರಲಿದೆ ಎಂದು ಅಂದಾಜಿಸಿದೆ.
ರಾಜಸ್ಥಾನ : (Rajasthan),
ರಾಜಸ್ಥಾನದಲ್ಲಿ ಸಿಎನ್ಎನ್, ಪೋಲ್ ಸ್ಟಾರ್ಟ್, ಟೈಮ್ಸ್ ನೌ – ಇಟಿಜಿ, ಜನ್ ಕಿ ಬಾತ್, ನ್ಯೂಸ್ 18 ಮ್ಯಾಟ್ರಿಜ್ ಸಮೀಕ್ಷಾ ಸಂಸ್ಥೆಗಳು ಬಿಜೆಪಿಗೆ(BJP) ಅಧಿಕಾರ ಸಿಗಲಿದೆ ಎಂದು ಅಂದಾಜಿಸಿವೆ. ಆದರೆ, ನ್ಯೂಸ್ 24 ಚಾಣಕ್ಯ ಮಾತ್ರ ಕಾಂಗ್ರೆಸ್ ಮರಳಿ ಅಧಿಕಾರಕ್ಕೇರಲಿದೆ ಎಂದಿದೆ. ಇನ್ನು ಇಂಡಿಯಾ ಟುಡೇ ಆಕ್ಸಿಸ್ ಮೈ ಇಂಡಿಯಾ ಸಂಸ್ಥೆ ಅತಂತ್ರ ವಿಧಾನಸಭೆ ಭವಿಷ್ಯ ನುಡಿದಿವೆ.
ತೆಲಂಗಾಣ : (Telangana)
ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್(Congress) ಪಕ್ಷ ಗದ್ದುಗೆಗೆ ಏರಲಿದೆ ಎಂದು ಬಹುತೇಕ ಸಮೀಕ್ಷಾಗಳು ಅಂದಾಜಿಸಿವೆ. ಸಿಎನ್ಎನ್, ಜನ್ ಕಿ ಬಾತ್, ಟುಡೇಸ್ ಚಾಣಕ್ಯ, ನ್ಯೂಸ್ 24 ಚಾಣಕ್ಯ, ಟೈಮ್ಸ್ ನೌ – ಇಟಿಜಿ, ಇಂಡಿಯಾ ಟಿವಿ – ಸಿಎನ್ಎಕ್ಸ್ ಸಂಸ್ಥೆಗಳು ಕಾಂಗ್ರೆಸ್ ಪಕ್ಷಕ್ಕೇ ಅಧಿಕಾರ ಎನ್ನುತ್ತಿವೆ. ಇನ್ನು ಟಿವಿ9 – ಪೋಲ್ ಸ್ಟಾರ್ಟ್ ಸಂಸ್ಥೆ ಮಾತ್ರ ಕಾಂಗ್ರೆಸ್ – ಬಿಆರ್ಎಸ್ ನಡುವೆ ತೀವ್ರ ಸ್ಪರ್ಧೆ ಇರಲಿದೆ ಎಂದಿವೆ.
ಛತ್ತೀಸ್ಗಢ : (Chhattisgarh)
ಛತ್ತೀಸ್ಗಢ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಏರುವ ಸಾಧ್ಯತೆ ಹೆಚ್ಚು ಎಂದು ಅನೇಕ ಸಮೀಕ್ಷೆಗಳು ಹೇಳಿವೆ. ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಸಿಎಂ ಭೂಪೇಶ್ ಬಘೇಲ್ ಅವರ ವೈಯಕ್ತಿಕ ವರ್ಚಸ್ಸು ಗೆಲುವಿಗೆ ಕಾರಣ ಎನ್ನಲಾಗುತ್ತಿದೆ. ಆಕ್ಸಿಸ್ ಮೈ ಇಂಡಿಯಾ, ಸಿಎನ್ಎಕ್ಸ್, ಸಿ ವೋಟರ್, ಟುಡೇಸ್ ಚಾಣಕ್ಯ, ರಿಪಬ್ಲಿಕ್ ಮ್ಯಾಟ್ರಿಜ್, ಟಿವಿ9 ಪೋಲ್ ಸ್ಟಾರ್ಟ್, ನ್ಯೂಸ್ 18 ಮ್ಯಾಟ್ರಿಜ್, ಟೈಮ್ಸ್ ನೌ ಇಟಿಜಿ ಸಂಸ್ಥೆಗಳು ಕಾಂಗ್ರೆಸ್ ಮರಳಿ ಅಧಿಕಾರಕ್ಕೇರಲಿದೆ ಎಂದಿವೆ.
ಮಿಜೋರಾಂ : (Mizoram)
ಮಿಜೋರಾಂ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಆಡಳಿತಾರೂಢ ಎಂಎನ್ಎಫ್ ಹಾಗೂ ಪ್ರತಿಪಕ್ಷ ಝಡ್ಪಿಎಂ ನಡುವೆ ತೀವ್ರ ಪೈಪೋಟಿ ಇದೆ.