ಬೀದಿ ನಾಯಿಗಳ ಹಾವಳಿ ; 7 ತಿಂಗಳ ಮಗು ಮೇಲೆ ದಾಳಿ ಮಾಡಿ ಕೊಂದ ಬೀದಿ ನಾಯಿಗಳು!

ಉತ್ತರಪ್ರದೇಶ : ಉತ್ತರಪ್ರದೇಶದ ನೋಯ್ಡಾದಲ್ಲಿ (7-month-old baby was attacked) ಸೋಮವಾರ ಸಂಜೆ ಕಾರ್ಮಿಕನೊಬ್ಬನ ಏಳು ತಿಂಗಳ ಮಗುವನ್ನು ಬೀದಿನಾಯಿಗಳು ಕೊಂದು ಹಾಕಿದೆ.

ನೋಯ್ಡಾ ಹೌಸಿಂಗ್ ಸೊಸೈಟಿಯಲ್ಲಿ (7-month-old baby was attacked)  ಈ ಘಟನೆ ನಡೆದಿದ್ದು,  ಬೀದಿ ನಾಯಿಗಳ ದಾಳಿ ವೇಳೆ ಮಗುವಿನ ಕರುಳನ್ನು ಹೊರ ತೆಗೆದಿದ್ದವು ಎನ್ನಲಾಗಿದೆ.

ತೀವ್ರವಾಗಿ ದಾಳಿಗೊಳಗಾಗಿದ್ದ ಮಗುವನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು.

ಅಂಬೆಗಾಲಿಡುತ್ತಿರುವ ಮಗುವನ್ನು ಐಸಿಯುಗೆ (ICU) ದಾಖಲಿಸಲಾಗಿತ್ತು. ನೋಯ್ಡಾದ ಯಥಾರ್ಥ್ ಆಸ್ಪತ್ರೆಯಲ್ಲಿ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಆದರೆ ಅದು ಯಶಸ್ವಿಯಾಗಲಿಲ್ಲ.

ರಾತ್ರಿಯಿಡೀ ಚಿಂತಾಜನಕ ಸ್ಥಿತಿಯಲ್ಲಿದ್ದ ಮಗು ಇಂದು ಬೆಳಗ್ಗೆ (ಮಂಗಳವಾರ) ಆಸ್ಪತ್ರೆಯಲ್ಲಿ ಮೃತಪಟ್ಟಿದೆ.

ಇದನ್ನೂ ಓದಿ : https://vijayatimes.com/bjp-slams-mamata-statement/

ಇನ್ನು ಸೆಕ್ಟರ್ 100 ರಲ್ಲಿರುವ ಲೋಟಸ್ ಬೌಲೆವಾರ್ಡ್ ಎಂಬ ನೋಯ್ಡಾ ಹೌಸಿಂಗ್ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ. ಈ ಘಟನೆಯಿಂದ ಸಿಟ್ಟಿಗೆದ್ದ ಸ್ಥಳೀಯ ನಿವಾಸಿಗಳು ಒಂದೆಡೆ ಸೇರಿ ನೋಯ್ಡಾ ಪ್ರಾಧಿಕಾರ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಸ್ಥಳೀಯ ನಿವಾಸಿಗಳೊಬ್ಬರ ಪ್ರಕಾರ,  ಇಲ್ಲಿಯ ನೆಲಮಾಳಿಗೆಯಲ್ಲಿ ಅನೇಕ ಬೀದಿ ನಾಯಿಗಳು ವಾಸಿಸುತ್ತಿವೆ. ಹೌಸಿಂಗ್ ಸೊಸೈಟಿಯಲ್ಲಿ ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದು, ಇದರಿಂದಾಗಿ ಕಾರ್ಮಿಕನು ತನ್ನ 7 ತಿಂಗಳ ಮಗುವಿನೊಂದಿಗೆ  ಇಲ್ಲಿಯೇ ಇದ್ದನು.

ಪ್ರತಿ 3-4 ತಿಂಗಳಿಗೊಮ್ಮೆ  ಈ ರೀತಿಯ ದಾಳಿಗಳು ಬೀದಿ ನಾಯಿಗಳಿಂದ ಸಂಭವಿಸುತ್ತದೆ. ನಾವು ಈ ಬಗ್ಗೆ ನೋಯ್ಡಾ ಪ್ರಾಧಿಕಾರ ಮತ್ತು ಎಒಎಗೆ ದೂರು ನೀಡಿದ್ದೇವೆ, ಆದರೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

ಇನೊಂದೆಡೆ ನೋಯ್ಡಾ ಪೊಲೀಸರು(Noida Police) ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

https://youtu.be/X0N-X9ugedA ಕಂಠೀರವ ಕಿರಿಕ್‌ ! ಕಂಠೀರವ ಸ್ಟೇಡಿಯಂ ಒಳಗೆ ಅಥ್ಲೀಟ್ಸ್‌ಗೆ ಅವಕಾಶ ಪ್ರವೇಶವಿಲ್ಲ. COVER STORY

ಘಟನೆಯ ನಂತರ, ಹೌಸಿಂಗ್ ಸೊಸೈಟಿಯ ಕಾರ್ಯದರ್ಶಿ ಮಾತನಾಡಿ, “ಹೌಸಿಂಗ್ ಸೊಸೈಟಿಯ ಅಧ್ಯಕ್ಷರು ನೋಯ್ಡಾ ಪ್ರಾಧಿಕಾರದೊಂದಿಗೆ ಮಾತನಾಡಿದ್ದಾರೆ.

ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ” ಎಂದು ತಿಳಿಸಿದ್ದಾರೆ.

Exit mobile version