7 ನೇ ವೇತನ ಆಯೋಗ : ಸರ್ಕಾರಿ ನೌಕರರಿಗೆ 4% DA ಹೆಚ್ಚಳಕ್ಕೆ ಅನುಮೋದನೆ

New Delhi : ಕೇಂದ್ರ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ 7ನೇ ವೇತನ ಆಯೋಗದ ಶಿಪಾರಸ್ಸುಗಳನ್ನು ಜಾರಿಗೆ ತರಲು ಮುಂದಾಗಿದೆ. ಕೇಂದ್ರ ಸರ್ಕಾರದ ನೌಕರರು ಮತ್ತು ಪಿಂಚಣಿದಾರರಿಗೆ ಶೇಕಡಾ 4 ರಷ್ಟು ತುಟ್ಟಿಭತ್ಯೆ (ಡಿಎ) ಮತ್ತು ಡಿಯರ್ನೆಸ್ ರಿಲೀಫ್ (ಡಿಆರ್) ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನೇತೃತ್ವದಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಶೇಕಡಾ 4ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ. ಈ ನಿರ್ಧಾರದಿಂದ ಕೇಂದ್ರ ಸರ್ಕಾರಿ ನೌಕರರ ಡಿಎ ಈಗಿರುವ ಶೇಕಡಾ 42ರಿಂದ ಶೇಕಡಾ 46ಕ್ಕೆ ಏರಿಕೆಯಾಗಲಿದೆ. ತುಟ್ಟಿ ಭತ್ಯೆ ಮತ್ತು ತುಟ್ಟಿಭತ್ಯೆಯ ಹೆಚ್ಚುವರಿ ಕಂತಿನ ಬಿಡುಗಡೆಯು ಜುಲೈ 01, 2023 ರಿಂದ ಅನ್ವಯವಾಗಲಿದೆ . ಇನ್ನು ಶೇಕಡಾ 4ರಷ್ಟು ಡಿಎ ಮತ್ತು ಡಿಆರ್ ಹೆಚ್ಚಳದಿಂದ ಕೇಂದ್ರ ಸರ್ಕಾರಕ್ಕೆ ವಾರ್ಷಿಕವಾಗಿ 12,857 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ತಿಳಿಸಿದ್ದಾರೆ.

ಸರ್ಕಾರಿ ನೌಕರರಿಗೆ ಬಂಫರ್ :
ಕೇಂದ್ರ ಸರ್ಕಾರದ ಈ ಬಹುನಿರೀಕ್ಷಿತ ನಿರ್ಧಾರವು 48.67 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 67.95 ಲಕ್ಷ ಪಿಂಚಣಿದಾರರ ನೆರವಾಗಲಿದೆ. ಏಕೆಂದರೆ ಕೇಂದ್ರ ಸರ್ಕಾರಿ ನೌಕರರು ಜುಲೈ ಮತ್ತು ಅಕ್ಟೋಬರ್ ನಡುವಿನ ಅವಧಿಯ ಬಾಕಿಯ ಜೊತೆಗೆ ನವೆಂಬರ್ (November) ತಿಂಗಳಿನಿಂದ ವರ್ಧಿತ ವೇತನವನ್ನು ಪಡೆಯುತ್ತಾರೆ.

ಡಿಎ ಮತ್ತು ಡಿಆರ್ ಎಂದರೇನು?
ಸರ್ಕಾರಿ ಉದ್ಯೋಗಿಗಳಿಗೆ ಜೀವನ ವೆಚ್ಚದ ಹೊಂದಾಣಿಕೆ ಭತ್ಯೆಯಾಗಿ ಡಿಎ ನೀಡಲಾಗುತ್ತದೆ. ಅದೇ ರೀತಿ, ಡಿಯರ್ನೆಸ್ ರಿಲೀಫ್ (Dearness Relief) ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ನೀಡಲಾಗುತ್ತದೆ. ಹೆಚ್ಚುತ್ತಿರುವ ಜೀವನ ವೆಚ್ಚವನ್ನು ನಿರ್ವಹಿಸುವ ಈ ಭತ್ಯೆಗಳನ್ನು ನೀಡಲಾಗುತ್ತದೆ.

ಕೇಂಧ್ರ ಸರ್ಕಾರವು ಪ್ರತಿ ಆರು ತಿಂಗಳಿಗೊಮ್ಮೆ ಡಿಎ ಮತ್ತು ಡಿಆರ್ ದರಗಳನ್ನು ಪರಿಷ್ಕರಿಸುತ್ತದೆ. ದೇಶದಲ್ಲಿ ಅಸ್ತಿತ್ವದಲ್ಲಿರುವ ಹಣದುಬ್ಬರದ ಆಧಾರದ ಮೇಲೆ ಕೇಂದ್ರ ಸರ್ಕಾರ ನೇಮಿಸುವ ಆರ್ಥಿಕ ತಜ್ಞರ ಸಮಿತಿ ನೀಡುವ ಶಿಪಾರಸ್ಸಿನ ಆಧಾರದ ಮೇಲೆ ಕೇಂದ್ರ ಸರ್ಕಾರ ಡಿಎ ಮತ್ತು ಡಿಆರ್ಗಳನ್ನು ಪರಿಷ್ಕರಣೆ ಮಾಡುತ್ತದೆ.

Exit mobile version