ಕತಾರ್’ನಲ್ಲಿ ಭಾರತೀಯ ನೌಕಾಪಡೆಯ 8 ಯೋಧರಿಗೆ ಮರಣದಂಡನೆ: ಮಧ್ಯಪ್ರವೇಶಿಸದ ಮೋದಿ ವಿರುದ್ಧ ಖರ್ಗೆ ಕಿಡಿ

New Delhi: ಕತಾರ್’ನಲ್ಲಿ (8 Navy officers – Death Penalty) ಭಾರತೀಯ ನೌಕಾಪಡೆಯ ಎಂಟು ಅಧಿಕಾರಿಗಳು ಮರಣ ದಂಡನೆ ಶಿಕ್ಷೆಗೆ ಗುರಿಯಾಗಿದ್ದು, ಜೀವ ಉಳಿಸುವುದಕ್ಕಾಗಿ ಪ್ರಧಾನಿ

ನರೇಂದ್ರ ಮೋದಿ (Narendra Modi) ಮಧ್ಯಪ್ರವೇಶಿಸುತ್ತಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕಿಡಿಕಾರಿದ್ದಾರೆ.

ಕೇಂದ್ರ ಸರ್ಕಾರ ಈ ವಿಷಯದಲ್ಲಿ ಮೌನಕ್ಕೆ ಶರಣಾಗಿದ್ದು, ಇದು ಭಾರತ ವಿಶ್ವಗುರುವಾಗುತ್ತಿದೆ ಎಂದು ಕೊಚ್ಚಿಕೊಳ್ಳುತ್ತಿರುವ ಮೋದಿ ಸರ್ಕಾರದ ಬಣ್ಣವನ್ನು ಬಯಲು ಮಾಡಿದೆ’ ಎಂದು ಅವರು

ಟ್ವೀಟ್’ನಲ್ಲಿ ವಾಗ್ದಾಳಿ (8 Navy officers – Death Penalty) ನಡೆಸಿದ್ದಾರೆ.

ಕತಾರ್’ನಲ್ಲಿ ಆಗಸ್ಟ್ (August) 2022 ರಿಂದ ಏಕಾಂತ ಬಂಧನದಲ್ಲಿರುವ ಭಾರತೀಯ ನೌಕಾಪಡೆಯ 8 ನಿವೃತ್ತ ಯೋಧರು ಮರಣದಂಡನೆಯನ್ನು ಎದುರಿಸುತ್ತಿದ್ದು, ಆದರೂ ಭಾರತದೊಂದಿಗೆ

ಈ ವಿಷಯವನ್ನು ಇಲ್ಲಿಯವರೆಗೆ ಹಂಚಿಕೊಳ್ಳಲಾಗಿಲ್ಲ. ಮೋದಿ ಸರ್ಕಾರದ ದೀನ ಶರಣಾಗತಿಯು ಭಾರತವನ್ನು “ವಿಶ್ವಗುರು” ಮಾಡುವ ಅವರ ದೊಡ್ಡ ಹೇಳಿಕೆಗಳನ್ನು ಬಹಿರಂಗಪಡಿಸಿದೆ ಎಂದು

ಕೆಂಡಾಮಂಡಲವಾಗಿದ್ದಾರೆ.

ಕತಾರ್’ನಲ್ಲಿ ವಾಸಿಸುತ್ತಿರುವ ವಿದೇಶಿಯರಲ್ಲಿ ಭಾರತೀಯರ ಸಂಖ್ಯೆಯೇ ಅಧಿಕವಾಗಿದ್ದು, ಭಾರತ – ಕತಾರ್‌ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ 50 ವರ್ಷ ತುಂಬಿದೆ. ಮೋದಿ ಅವರು ಫಿಫಾ ವಿಶ್ವಕಪ್‌

(FIFA World cup) ವೇಳೆ ಕತಾರ್ ಅಧ್ಯಕ್ಷರಿಗೆ ಕರೆ ಮಾಡಿ ಶುಭ ಕೋರಿದ್ದರು. ಆದರೆ, ದೇಶದ ಅಮೂಲ್ಯ ಜೀವಗಳನ್ನು ಉಳಿಸಲು ಮಧ್ಯಪ್ರವೇಶಿಸುತ್ತಿಲ್ಲ. ಇದು ನಿಮ್ಮ ರಾಷ್ಟ್ರೀಯತೆಯೇ’ ಎಂದು

ಟ್ವೀಟ್’ನಲ್ಲಿ ಖರ್ಗೆ ಪ್ರಶ್ನಿಸಿದ್ದಾರೆ.

8 ಭಾರತೀಯರಿಗೆ ಗಲ್ಲು ಶಿಕ್ಷೆ ಏಕೆ?
ಕಳೆದ ಆಗಸ್ಟ್ 30 ರಿಂದ ಭಾರತೀಯ ನೌಕಾ ದಳದ 8 ನಿವೃತ್ತ ಅಧಿಕಾರಿಗಳು ಕತಾರ್ ದೇಶದ ಜೈಲಿನಲ್ಲಿ (Jail) ಇದ್ದಾರೆ. ಆದರೆ ಇವರು ಏಕೆ ಜೈಲಿನಲ್ಲಿ ಇದ್ದಾರೆ? ಇವರ ಮೇಲೆ ಇರುವ ಆರೋಪಗಳು

ಏನು ಅನ್ನೋದ್ರ ಬಗ್ಗೆ ಭಾರತ ಸರ್ಕಾರ ಈವರೆಗೂ ಏನನ್ನೂ ಹೇಳಿಲ್ಲ. ಜೊತೆಗೆ ಕತಾರ್ ನ್ಯಾಯಾಲಯ ಕೂಡಾ ತನ್ನ ತೀರ್ಪಿನಲ್ಲಿ ಈ ಕುರಿತು ವಿವರಿಸಿಲ್ಲ. ವಿದೇಶಾಂಗ ಇಲಾಖೆ ಪ್ರಕಟಣೆ ಪ್ರಕಾರ ಕತಾರ್‌ನ

ಅಲ್ ದಹ್ರಾ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 8 ಭಾರತೀಯರನ್ನು ಬಂಧಿಸಲಾಗಿತ್ತು.

ಇದೀಗ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದ್ದು, ಈ ತೀರ್ಪಿನಿಂದ ಆಘಾತವಾಗಿದೆ ಎಂದಷ್ಟೇ ಹೇಳಿದೆ. ಜೊತೆಯಲ್ಲೇ ಭಾರತೀಯ ಪ್ರಜೆಗಳ ರಕ್ಷಣೆಗೆ ಕಾನೂನಾತ್ಮಕವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳೋದಾಗಿ

ತಿಳಿಸಿದೆ. ಇವರೆಲ್ಲರೂ ಕತಾರ್‌ನ ಖಾಸಗಿ ಕಂಪನಿಯ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದಷ್ಟೇ ವಿದೇಶಾಂಗ ಇಲಾಖೆ ಹೇಳಿದೆ.

ಇದನ್ನು ಓದಿ: ರಾಜ್ಯೋತ್ಸವ ಪ್ರಶಸ್ತಿ : ಎಲ್ಲಾ ಜಾತಿ, ಧರ್ಮ, ಲಿಂಗಗಳಿಗೂ ಪ್ರಾತಿನಿಧ್ಯ ನೀಡಿ – ಸಿಎಂ ಸಿದ್ದರಾಮಯ್ಯ ಸೂಚನೆ

Exit mobile version