Mysore: ರಸ್ತೆ ಬದಿಯಲ್ಲಿ ವ್ಯಾಪಾರ (Roadside vendors) ಮಾಡುವವರೂ ಕೂಡ ಇನ್ಮುಂದೆ ತೆರಿಗೆ ಪಾವತಿಸಲೇ ಬೇಕು (Tax must be paid) .ಬಾಡಿಗೆಯಿಲ್ಲದೆ, ಎಲ್ಲೆಂದರಲ್ಲಿ ರಸ್ತೆಬದಿ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಸ್ಥರಿಗೆ ಮೈಸೂರು ಮಹಾನಗರ ಪಾಲಿಕೆ (Mysore Metropolitan Corporation) ಬಿಸಿ ಮುಟ್ಟಿಸಿದೆ.ರಸ್ತೆ ಬದಿ ವ್ಯಾಪಾರಿಗಳ ಆದಾಯದ ಮೇಲೆ ನಿಗಾ ಇರಿಸಲು ಮುಂದಾಗಿರುವ ಮೈಸೂರು ಮಹಾ ನಗರ ಪಾಲಿಕೆ, ರಸ್ತೆಬದಿ ವ್ಯಾಪಾರವನ್ನೂ ಸಕ್ರಮಗೊಳಿಸುವ ಮೂಲಕ ಮತ್ತೊಂದು ಆದಾಯದ ಮೂಲವನ್ನು ಕಂಡುಕೊಂಡಿದೆ.
ಕೆಲ ದಿನಗಳಿಂದ ಸಣ್ಣಪುಟ್ಟ ವ್ಯಾಪಾರಿಗಳು (Tradersa) ತಮ್ಮ ವ್ಯಾಪಾರಕ್ಕೆ ಯಾವುದೇ ತೊಂದರೆಯಾಗದಿರಲೆಂದು ಕೆಲ ಪೊಲೀಸರು (Police) ಸೇರಿದಂತೆ ಪ್ರಭಾವಿಗಳಿಗೆ ಮಾಮೂಲಿ ನೀಡುವ ಮೂಲಕ ರಸ್ತೆಬದಿ ವ್ಯಾಪಾರ ಮಾಡುತ್ತಿದ್ದರು. ಇದಕ್ಕೆ ಸಂಬಂಧಿಸಿದ ಹಲವಾರು ವಿಡಿಯೋಗಳು ಈಗಾಗಲೇ ಕಾಣ ಸಿಗುತ್ತಿದೆ.ಬಡ ವ್ಯಾಪಾರಿಗಳ (poor merchants) ಮೇಲೆ ಪೊಲೀಸರು ಸೇರಿದಂತೆ ಪ್ರಭಾವಿಗಳು ದಬ್ಬಾಳಿಕೆ ನಡೆಸಿ ಹಣವನ್ನು ಪಡೆಯುತ್ತಿದ್ದರು ಆದರೆ, ಈಗ ಎಲ್ಲ ವ್ಯಾಪಾರಿಗಳು ಪಾಲಿಕೆಗೆ ತೆರಿಗೆ ಪಾವತಿಸುವ ಮೂಲಕ ಪರವಾನಗಿ ಪಡೆದು ಅಧಿಕೃತವಾಗಿ ವ್ಯಾಪಾರ ಮಾಡಬಹುದಾಗಿದೆ.
ಈಗಾಗಲೇ ಪಾಲಿಕೆಯಿಂದ ಜಿಪಿಎಸ್ (GPS) ಆಧಾರದ ಮೇಲೆ ಜಿಯೋ ಫ್ಲೆನ್ಸಿಂಗ್ (Jio flencing) ಮತ್ತು ಜಿಯೋ ಟ್ಯಾಗಿಂಗ್ ಮೂಲಕ ಬೀದಿಬದಿ ವ್ಯಾಪಾರಿಗಳನ್ನು ಸಮೀಕ್ಷೆ ಮಾಡಿ ಗುರುತಿಸಲಾಗಿದೆ. ಮೈಸೂರು ನಗರದಲ್ಲಿ 10 ಸಾವಿರಕ್ಕೂ (10 thousand) ಹೆಚ್ಚು ವ್ಯಾಪಾರಸ್ಥರಿದ್ದು, ಅದರಲ್ಲಿ ಎರಡು ಬಾರಿ ನಡೆದ ಸಮೀಕ್ಷೆಯಲ್ಲಿ3416 ವ್ಯಾಪಾರಿಗಳನ್ನು ಗುರುತಿಸಿ ಅವರಿಗೆ ಗುರುತಿನ ಚೀಟಿ ನೀಡಲಾಗಿದೆ. ಗುರುತಿನ ಚೀಟಿ ಪಡೆದ ರಸ್ತೆಬದಿ ವ್ಯಾಪಾರಿಗಳೊಂದಿಗೆ ಇತರೆ ವ್ಯಾಪಾರಿಗಳು ಸಹ ಪಾಲಿಕೆಯ ವಲಯ ಕಚೇರಿಗಳಿಗೆ ಭೇಟಿ ನೀಡಿ ಗುರುತಿನ ಚೀಟಿ ಪಡೆದು, ವ್ಯಾಪಾರ ಪರವಾನಗಿ ಪಡೆಯಲು ಅವಕಾಶ ಒದಗಿಸಲಾಗಿದೆ.ಮೈಸೂರು ನಗರದ (Mysore city) ವಲಯ ಕಚೇರಿಗಳಲ್ಲಿ ಮಾಸಿಕ 100ರಿಂದ 1000 ರೂ. ವರೆಗೆ ಶುಲ್ಕ ವಸೂಲಿ ಮಾಡಲು ನಿರ್ಧರಿಸಲಾಗಿದೆ.