Bengaluru: ಅಪ್ರಾಪ್ತೆ ಬಾಲಕಿ ಲೈಂಗಿಕ ಕಿರುಕುಳ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳ ಮುಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (B S Yediyurappa) ಇಂದು ಹಾಜರಾಗಿದ್ದಾರೆ.
![POCSO Case](https://sp-ao.shortpixel.ai/client/to_webp,q_glossy,ret_img,w_1024,h_600/https://vijayatimes.com/wp-content/uploads/2024/06/Assualt-6-1024x600.jpg)
ಪ್ರಕರಣದ ತನಿಖೆ ನಡೆಸುತ್ತಿದ್ದ ಡಿವೈಎಸ್ಪಿ ಪೃಥ್ವಿ (DYSP Prithvi) ಬದಲಿಗೆ ತನಿಖಾಧಿಕಾರಿಯಾಗಿ ನೇಮಕಗೊಂಡಿರುವ ಡಿವೈಎಸ್ಪಿ ಪುನೀತ್ ಮುಂದೆ ಬಿಎಸ್ ವೈ ಹಾಜರಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಏನಿದು ಪ್ರಕರಣ
- ಫೆಬ್ರವರಿ 2: ನ್ಯಾಯ ಕೇಳಿಕೊಂಡು ಬಿ.ಎಸ್ ವೈ ಮನೆಗೆ ಹೋಗಿದ್ದ ಸಂತ್ರಸ್ತೆ ಹಾಗು ತಾಯಿ
- ಮಾರ್ಚ್ 14: ಬಿ ಎಸ್ ವೈ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ಪೋಕ್ಸೊ ಪ್ರಕರಣದ (POCSO Case) ಅಡಿಯಲ್ಲಿ ಎಫ್ ಐ ಆರ್ ದಾಖಲು
- ಮಾರ್ಚ್ 14: ಎಸಿಎಂಎಂ (ACMM) 25ನೇ ನ್ಯಾಯಾಧೀಶರ ಮುಂದೆ ಸಂತ್ರಸ್ತೆಯ ಸಿಆರ್ ಪಿಸಿ 164 ಹೇಳಿಕೆ ದಾಖಲು
- ಮಾರ್ಚ್ 14: ಪ್ರಕರಣವನ್ನ ಸಿಐಡಿಗೆ (CID) ಹಸ್ತಾಂತರ ಮಾಡಲಾಗಿತ್ತು.
- ಎಪ್ರಿಲ್ 12: ವಿಚಾರಣೆಗೆ ಹಾಜರಾಗುವಂತೆ ಬಿಎಸ್ ಯಡಿಯೂರಪ್ಪಗೆ ನೋಟಿಸ್ ನೀಡಿದ್ದ ಸಿಐಡಿ
- ಏಪ್ರಿಲ್ 12: ವಿಚಾರಣೆಗೆ ಹಾಜರಾಗಿ ಧ್ವನಿ ಸ್ಯಾಂಪಲ್ ನೀಡಿದ್ದ ಬಿ.ಎಸ್.ವೈ
- ತಾಯಿ ಸಾವಿನ ಬಳಿಕ ಸಂತ್ರಸ್ತೆ ಮತ್ತೊಬ್ಬನಿಂದ ಹೈ ಕೋರ್ಟ್ (High Court) ಗೆ ರಿಟ್ ಅರ್ಜಿ
- ಹೈಕೋರ್ಟ್ ಗೆ ಅರ್ಜಿ ಬೆನ್ನಲ್ಲೇ ಜೂನ್ 12 ರಂದು ಬಿಎಸ್ವೈಗೆ ನೋಟಿಸ್
- ವಿಚಾರಣೆಗೆ ಹಾಜರಾಗದ ಹಿನ್ನೆಲೆ ಜೂನ್ 12 ರಂದು ಅರೆಸ್ಟ್ ವಾರೆಂಟ್ (Arrest Warrant) ಕೋರಿ ಸಿಐಡಿಯಿಂದ ಅರ್ಜಿ
ಕಳೆದ ವಾರ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ (Notice) ನೀಡಲಾಗಿತ್ತು. ದೆಹಲಿಯಲ್ಲಿ ಇರುವುದಾಗಿ ಹೇಳಿ ಇಂದು ಹಾಜರಾಗುವುದಾಗಿ ಬಿಎಸ್ ವೈ ತಿಳಿಸಿದ್ದರು. ಇದಕ್ಕೆ ಪ್ರತಿಯಾಗಿ ಎರಡನೇ ಬಾರಿ ನೊಟೀಸ್ ನೀಡಿತ್ತು. ನ್ಯಾಯಾಲಯದಿಂದ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಮತ್ತೊಂದೆಡೆ ಪ್ರಕರಣ ರದ್ದು ಕೋರಿ ಯಡಿಯೂರಪ್ಪ ಹೈಕೋರ್ಟ್ ಮೊರೆ ಹೋಗಿದ್ದರು. ಕಳೆದ ಶುಕ್ರವಾರ ಅರ್ಜಿ ವಿಚಾರಣೆ ನಡೆಸಿ ಬಂಧಿಸದಂತೆ ಹೇಳಿ ಯಡಿಯೂರಪ್ಪ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು. ಬಿಎಸ್ ವೈ ವಿಚಾರಣೆಗೆ ಹಾಜರಾಗಿದ್ದಾರೆ.