ವಿಶೇಷ ಅಂಕಣ : ನನ್ನ ನೆಲೆಯ ಮೂಲ ಯಾವುದು?

ಬರಹಗಾರ್ತಿ ಮುನ್ನುಡಿ ಯಾಪಲಪರವಿ ಅವರು ಹೆಣ್ಣಿನ ಕುರಿತು (A Question Of Every Women) ಬರೆದಿರುವ ಲೇಖನ ಇಂದಿನ ವಿಶೇಷ ಅಂಕಣವಾಗಿದೆ. ‘ನನ್ನ ನೆಲೆಯ ಮೂಲ ಯಾವುದು’? ಎಂಬ ಶೀರ್ಷಿಕೆಯಡಿ ಬರೆದಿರುವ ಈ ಲೇಖನವನ್ನು ಸಂಪೂರ್ಣವಾಗಿ ಓದಿ, ನಿಮ್ಮ ಅನಿಸಿಕೆ, ಅಭಿಪ್ರಾಯ ಕಮೆಂಟ್‍ನಲ್ಲಿ ತಿಳಿಸಿ.

ಹೆಣ್ಣು ಪ್ರತಿಯೊಂದು ಹಂತದಲ್ಲೂ ಒಂದೊಂದು ಕಷ್ಟಗಳನ್ನು ಎದುರಿಸುತ್ತಾಳೆ, ಆದರೆ ತುಂಬಾ ನೋವಾಗುವ ಸಂದರ್ಭ ಯಾವುದು ಗೊತ್ತೇ? ಮದುವೆಯ ನಂತರ ತನ್ನದೇ ಮನೆಯಲ್ಲಿ ಅತಿಥಿಯಾಗಿ ಉಳಿಯುವುದು. ನಮ್ಮ ಮನೆಯ ಮೇಲಿನ ಹಕ್ಕು ಎಲ್ಲೋ ಮಾಯವಾದಂತಾಗುತ್ತದೆ.

ಹುಟ್ಟಿನಿಂದ ಬೆಳೆಯುವವರೆಗೂ ‘ನೀನು ಬೇರೆಯವರ ಮನೆ ಬೆಳಗುವ ದೀಪವಾಗಿ ಹೋಗುವವಳು’ ಎಂದು ಅವ್ವ ಹೇಳಿ ಬೆಳೆಸುತ್ತಾಳೆ. ಅಲ್ಲಿ ಹೋದ ಮೇಲೆ ‘ನೀನು ಬೇರೆ ಮನೆಯಿಂದ ಬಂದವಳು’ ಎಂದು ಅತ್ತೆ ಹೇಳುತ್ತಾಳೆ. ಇದೆಲ್ಲಾ ಕೇಳಿದಾಗ ಮನಸ್ಸಿಗೆ ಕಾಡುವ ಪ್ರಶ್ನೆ ‘ನನ್ನ ಮನೆ ಯಾವುದು?’

ಇದನ್ನೂ ಓದಿ : https://vijayatimes.com/goat-swallowed-by-python/

ಉತ್ತರ ಗಂಡನ ಮನೆ ಆದಲ್ಲಿ ‘ಅವನು ಇಲ್ಲವಾದರೆ?’ ಆಗಲೂ (A Question Of Every Women) ಅದೂ ನನ್ನ ಮನೆಯೇ? ಇಂತಹ ನೂರಾರು ಪ್ರಶ್ನೆಗಳು ಕಾಡುತ್ತಲೇ ಇರುತ್ತವೆ.

ನನ್ನ ಮಗಳು ಒಳ್ಳೆಯ ಮನೆ ಸೇರಲಿ ಎಂಬ ಆಸೆ ಹೊತ್ತಿರುವ ಎಷ್ಟೋ ತಂದೆಯರು ತನ್ನ ಮಗಳು ಆರ್ಥಿಕವಾಗಿಯೂ ಸ್ವತಂತ್ರವಾಗಿ ಖುಷಿಯಾಗಿರಲಿ ಎಂದು ಬಯಸುವುದು ತುಂಬಾ ವಿರಳ.


ಏಕೆಂದರೆ ಯಾವ ತಂದೆಯು ತನ್ನ ಮಗಳು ಕಷ್ಟ ಪಡುವುದನ್ನು ನೋಡಲು ಬಯಸುವುದಿಲ್ಲ. ಆದರೆ ಇಂದಿನ ದಿನಗಳಲ್ಲಿ ದುಡಿಮೆ ಮತ್ತು ಆರ್ಥಿಕ ಸ್ವಾತಂತ್ರ್ಯ ಅನಿವಾರ್ಯವಾಗಿದೆ.

25 ರ ಗಡಿ ದಾಟಿದ ಮೇಲೂ ಮಗಳು ಮನೆಯಲ್ಲಿರುವುದು ಹೆಣ್ಣು ಹೆತ್ತವರಿಗೆ ಭಯಾನಕ ಯೋಚನೆಯಾಗುವುದು ವಿಪರ್ಯಾಸ.


ಲಕ್ಷಾಂತರ ದುಡ್ಡು ಯಾರದೋ ಜೋಳಿಗೆಗೆ ವರದಕ್ಷಿಣೆ ರೂಪದಲ್ಲಿ ನೀಡಿ ‘ನನ್ನ ಮಗಳು ಚೆನ್ನಾಗಿದ್ದರೆ ಸಾಕು’ ಎಂದು ಬೇಡುವ ಒಬ್ಬ ತಂದೆ ಅದೇ ದುಡ್ಡನ್ನು ಅವಳ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹಾಕಿ ನನ್ನ ಮಗಳು ಯಾರ ಹಂಗಿಲ್ಲದೆ ಅವಳ ಜೀವನ ಅವಳು ರೂಪಿಸಿಕೊಳ್ಳಲಿ ಎನ್ನುವುದು ಏಕೆ ಸಾಧ್ಯವಾಗುವುದಿಲ್ಲ?

https://youtu.be/T_ePA5EF1Go

ನನ್ನ ಮಗಳಿಗೆ ಒಳ್ಳೆಯ ಗಂಡ, ಒಳ್ಳೆಯ ಅತ್ತೆ-ಮಾವ ಸಿಕ್ಕು ಆರಾಮಾಗಿ ಇದ್ದರೆ ಸಾಕು ಎಂದು ಬೇಡಿಕೊಳ್ಳುವವರು ನನ್ನ ಮಗಳ ಸಾಧನೆ ಎತ್ತರಕ್ಕೆ ಏರಿ‌ ಒಳ್ಳೆಯ ಹೆಸರು ಮಾಡುವ ಶಕ್ತಿ ಅವಳಿಗೆ ನೀಡು ಎಂದು ದೇವರಿಗೆ ಬೇಡುವುದು ಕಡಿಮೆಯೇ.
“ಒಳ್ಳೆಯ ಮನೆತನ‌ ಅವಳ ಉಜ್ವಲ ಭವಿಷ್ಯಕ್ಕಿಂತ ದೊಡ್ಡದೇ!”

ಇದನ್ನೂ ಓದಿ : https://vijayatimes.com/jaggesh-appreciates-kantara/

“ಮೊದಲು ನಿನ್ನ ಕಾಲು ಮೇಲು ನಿಲ್ಲುವುದನ್ನು ಕಲಿ ಮಗಳೇ” ಎಂದು ಹೇಳಿ ಬೆಳೆಸುವುದು ಅಹಂಕಾರ ತುಂಬುವುದಲ್ಲ ಸ್ವಾಭಿಮಾನವನ್ನು ಹೆಚ್ಚಿಸುವುದು ಎಂದು ಎಲ್ಲರೂ ಅರಿಯಬೇಕಾಗಿದೆ.

ಇದಕ್ಕೆಲ್ಲಾ ನಮ್ಮ ತಂದೆ-ತಾಯಿಂದರ ವಿಚಾರಗಳ ತಪ್ಪಲ್ಲ, ಒಬ್ಬ ಮಗಳು ತನ್ನ ಆತ್ಮವಿಶ್ವಾಸವನ್ನು ತನ್ನ ತಂದೆಗೆ ತೋರಿಸುವಲ್ಲಿ ಸೋತಾಗ ಅವರ ವಿಚಾರ ಎಲ್ಲರಂತೆ ಆಗುವುದು ಸಹಜವೇ!

ಎಲ್ಲಿಯವರೆಗೆ ನಾವು ರಿಸ್ಕ್ ತೆಗೆದುಕೊಳ್ಳದೇ safe zone ಅಲ್ಲಿ ಇರಲು ಬಯಸುತ್ತೇವೋ ಅಲ್ಲಿಯವರೆಗೂ ನಾವು ಬೆಳೆಯಲು ಸಾಧ್ಯವೇ‌ ಇಲ್ಲ. ಆಲೋಚನಾ ಕ್ರಮ ಬದಲಿಸಿಕೊಳ್ಳೋಣ, ಪಾಲಕರ ವಿಚಾರ ಧಾರೆಯನ್ನಲ್ಲ.

ಎಲ್ಲದಕ್ಕೂ ಸಮಾಜ,ತಂದೆ-ತಾಯಿ ಕಾರಣವಾಗಿರುವುದಿಲ್ಲ ನಮ್ಮ ವಿಶ್ವಾಸದಲ್ಲಿ ಸ್ವಲ್ಪ ಕೊರತೆಯಾದರೂ ಸೋಲುವುದು ನಿಶ್ಚಿತ..

Exit mobile version