ಪ್ರತಿ ಜಿಲ್ಲೆಗೊಂದು ಸುಸಜ್ಜಿತ ಆಸ್ಪತ್ರೆ – ಶಿವರಾಂ ಹೆಬ್ಬಾರ್

ಬೆಂಗಳೂರು ಆ 28 : ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿಜಿಲ್ಲೆಗಳಲ್ಲೂ ಕರ್ನಾಟಕದ‌ಲ್ಲಿ ಕಾರ್ಮಿಕ ವಿಮಾ ನಿಗಮ ವತಿಯಿಂದ  (ಇಎಸ್‌ಐ)  ಸುಸಜ್ಜಿತ ಆಸ್ಪತ್ರೆ ಆರಂಭ ಮಾಡುವ ಪರಿಶೀಲನೆ ನಡೆಸಲಾಗತ್ತಿದೆ  ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು ಸದ್ಯ ರಾಜ್ಯದಲ್ಲಿ 180 ಇಎಸ್‌ಐ ಚಿಕಿತ್ಸಾ‌ಲಯಗಳಿವೆ‌. ಅವುಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ, ಮುಂದಿನ ವಾರ ನವದೆಹಲಿ‌ಗೆ ತೆರಳಿ ಹೊಸ ಇಎಸ್‌ಐ ಆಸ್ಪತ್ರೆಗಳ ನಿರ್ಮಾಣಕ್ಕೆ ನೆರವು ಕೋರಿ ಪ್ರಸ್ತಾಪ ಸಲ್ಲಿಸಲಾಗುವುದು ಎಂದರು

ಪ್ರಸ್ತುತ ಇರುವ ಇಎಸ್‌ಐ ಆಸ್ಪತ್ರೆಗಳಲ್ಲಿ ಉತ್ತಮ ಸೌಲಭ್ಯ‌ಗಳಿವೆ. ಆದರೂ ರೋಗಿಗಳನ್ನು ಎಂ ಪ್ಯಾನೆಲ್ ಪಟ್ಟಿಯಲ್ಲಿ ಇರುವ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ. ಇದರಿಂದ ಇಲಾಖೆಗೆ ಹೆಚ್ಚು ವೆಚ್ಚವಾಗುತ್ತದೆ. ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ‌ಯೂ ಆಸ್ಪತ್ರೆ ಆರಂಭಿಸುವ ನಿಟ್ಟಿನಲ್ಲಿ ಚರ್ಚಿಸಲಾಗುವುದು  ಎಂದು ಅವರು ತಿಳಿಸಿದರು.

Exit mobile version