ಕೆಲವೊಂದೆಡೆ ನಮ್ಮ ಆಧಾರ್ ಕಾರ್ಡ ಪಡೆದು ಅದರ ಮುಖಾಂತರ ಬೇರೆಯವರು ಸಿಮ್ ಪಡೆದುಕೊಳ್ಳುತ್ತಾರೆ. ನಂತರ ಸಿಮ್ ಪಡೆದ ಯಾವುದೇ ವ್ಯೆಕ್ತಿ ಏನೇ ಅನಾಹುತ ಮಾಡಿದರೂ ಕೂಡ ಅದಕ್ಕೆ ಪರೋಕ್ಷವಾಗಿ ಆಧಾರ್ ಕಾರ್ಡ್ ನೀಡಿದ ವ್ಯೆಕ್ತಿಯೇ ಕಾರಣರಾಗುತ್ತಾರೆ.
ಆದರೆ ಈಗ ಡಿಪಾರ್ಟಮೆಂಟ್ ಆಫ್ ಟಿಲಿಕಾಂ ( DOT) ಅಭಿವೃದ್ದಿ ಪಡಿಸಿರುವ ತಂತ್ರಜ್ಞಾನದಿಂದ ನಮ್ಮ ಆಧಾರ್ ಕಾರ್ಡ್ ಬಳಸಿ ಎಷ್ಟು ಸಿಮ್ ಪಡೆಯಲಾಗಿದೆ ಎಂಬುವುದನ್ನು ನಾವು ಈ ಆಪ್ನ ಮೂಲಕ ಪಡೆದು ಕೊಳ್ಳಬಹುದು.
ಭಾರತೀಯ ದೂರವಾಣಿ ಇಲಾಖೆ ಪ್ರಸ್ತುತ ಪಡಿಸಿರುವ ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್ಮೆಂಟ್ ಮತ್ತು ಕನ್ಸ್ಯೂಮರ್ ಪ್ರೊಟೆಕ್ಷನ್ (TAFCOP) tafcop.dgtelecom.gov.in ಈ ಲಿಂಕ್ ಅನ್ನು ಕ್ಲಿಕ್ ಮಾಡಿದ್ದಲ್ಲಿ, ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ಗಳನ್ನು ಕೊಡಲಾಗಿದೆ ಎಂಬುದನ್ನು ಇಲ್ಲಿ ನೀವು ಸುಲಭವಾಗಿ ಕಂಡುಹಿಡಿಯಬಹುದು.
tafcop.dgtelecom.gov.inನಲ್ಲಿ ಈ ಆಪ್ನ ಮೂಲಕ ಎಷ್ಟು ಸಿಮ್ ಪಡೆಯಲಾಗಿದೆ ಎಂದು ತಿಳಿಯಲು
- tafcop.dgtelecom.gov.in ಪೋರ್ಟಲ್ಗೆ ಭೇಟಿ ನೀಡಬೇಕು.
- ನಿಮ್ಮ ಮೊಬೈಲ್ ಸಂಖ್ಯೆಯನ್ನು ಅಲ್ಲಿ ನಮೂದಿಸಿ.
- ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ಪೋರ್ಟಲ್ನಲ್ಲಿ ನಮೂದಿಸಬೇಕು.
- ನಂತರ ನಿಮ್ಮ ಆಧಾರ್ ಕಾರ್ಡ ಬಳಸಿ ಎಷ್ಟು ನಂಬರ್ಗಳನ್ನು ಪಡೆಯಲಾಗಿದೆ ಎಂಬ ಪಟ್ಟಿಯನ್ನು ನೋಡಬಹುದು.