ಆಧಾರ್ ಮತ್ತು ರೇಷನ್ ಕಾರ್ಡ್ ಲಿಂಕ್ ಮಾಡುವ ಡೆಡ್​ಲೈನ್ ಇದೀಗ ಸೆಪ್ಟಂಬರ್ 30ಕ್ಕೆ ವಿಸ್ತರಣೆ; ಯಾರಿಗೆ ಇದು ಕಡ್ಡಾಯ? ಇಲ್ಲಿದೆ ಮಾಹಿತಿ

Bengaluru : ಜೂನ್ 30 ರ ಒಳಗೆ ರೇಷನ್ ಕಾರ್ಡ್​ಗೆ ಆಧಾರ್ ನಂಬರ್ ಲಿಂಕ್ ಮಾಡುವ ಕಾರ್ಯಕ್ಕೆ ಇದ್ದ ಡೆಡ್​ಲೈನ್ ಅನ್ನು ಇದೀಗ ಸೆಪ್ಟಂಬರ್(Aadhaar Ration link deadline) 30ಕ್ಕೆ ವಿಸ್ತರಿಸಲಾಗಿದೆ.

ಆಧಾರ್​ಗೆ ಎಲ್ಲಾ ಪಡಿತರ ಚೀಟಿದಾರರೂ ಲಿಂಕ್ ಮಾಡಬಹುದು.ಅಂತ್ಯೋದಯ ಅನ್ನ ಯೋಜನೆ(Antyodaya Anna Yojane) ಮತ್ತು ಆದ್ಯತಾ ಕುಟಂಬ ಪಡಿತರ (Priority Household Ration)

ಯೋಜನೆ ಬಡವರು ಮತ್ತು ನಿರ್ಗತಿಕರಿಗೆಂದು (Aadhaar Ration link deadline) ರೂಪಿಸಲಾಗಿದೆ.

ಆದ್ದರಿಂದ ತಮ್ಮ ರೇಷನ್ ಕಾರ್ಡನ್ನು(Ration Card) ಈ ಎರಡೂ ಯೋಜನೆಯ ಫಲಾನುಭವಿಗಳು ಆಧಾರ್​ಗೆ (Adhar Card) ಲಿಂಕ್ ಮಾಡುವುದು ಕಡ್ಡಾಯಪಡಿಸಲಾಗಿದೆ. ಆಧಾರ್ ನಂಬರ್​ಗೆ ಲಿಂಕ್

ಆಗದ ಪಡಿತರ ಚೀಟಿದಾರರಿಗೆ ಈ ಎರಡು ಯೋಜನೆಗಳು ಲಭ್ಯ ಇರುವುದಿಲ್ಲ.ಅಷ್ಟೇ ಅಲ್ಲದೆ ಈ ಯೋಜನೆಯ ದುರ್ಲಾಭ ಸ್ವಲ್ಪ ಸ್ಥಿತಿವಂತರೂ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿತ್ತು.

ಅನರ್ಹ ರೇಷನ್ ಕಾರ್ಡ್ ಅನ್ನು ನೀಗಿಸುವ ದೃಷ್ಟಿಯಿಂದ ಇದರಿಂದಾಗಿ ಆಧಾರ್​ಗೆ ಲಿಂಕ್ ಮಾಡಲಾಗುತ್ತಿದೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಮನೆ ಬಾಗಿಲಿಗೆ ಬಂದು ಹೆಚ್ಚುವರಿ ಶುಲ್ಕ ವನ್ನು ವಿಧಿಸದೆ ಪಾರ್ಸೆಲ್‌ ಬುಕ್ಕಿಂಗ್‌ ಮಾಡಿಕೊಳ್ಳಲಿದೆ ಭಾರತೀಯ ಅಂಚೆ!

ಕೇಂದ್ರ ಸರ್ಕಾರವು 2002ರಲ್ಲಿ ಬಡತನ ರೇಖೆಗಿಂತ ಕೆಳಗಿರುವ ಭೂರಹಿತ ಕೃಷಿಕಾರ್ಮಿಕರು,ಎಚ್​ಐವಿ(HIV) ಬಾಧಿತರ ಕುಟುಂಬ ಮತ್ತು ವಿಧವೆಯರು ಮುಂತಾದವರಿಗೆಂದು ಅಂತ್ಯೋದಯ ಯೋಜನೆ

ಜಾರಿಗೆ ತಂದಿತ್ತು. ಪ್ರತೀ ಕುಟುಂಬಕ್ಕೂ 35 ಕಿಲೋನಷ್ಟು ಆಹಾರ ಧಾನ್ಯಗಳನ್ನು ಇದರಲ್ಲಿ ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತದೆ. ಇನ್ನು ಬಿಪಿಎಲ್(BPL) ಕುಟುಂಬಗಳಿಗೆ ಆದ್ಯತಾ ಕುಟುಂಬ ಪಡಿತರ ಚೀಟಿ,

ಅಥವಾ ಪ್ರಯಾರಿಟಿ ರೇಷನ್ ಕಾರ್ಡ್ ಕೂಡ ನೀಡಲಾಗುತ್ತದೆ.

ಆಧಾರ್ ಮತ್ತು ರೇಷನ್ ಕಾರ್ಡ್ ಜೋಡಿಸುವುದು ಹೇಗೆ?

ಉಚಿತವಾಗಿ ನೀವು ಆಧಾರ್ ನಂಬರ್ ಲಿಂಕ್ ಸಮೀಪದ ಪಡಿತರ ಕಚೇರಿಗೆ ಹೋಗಿ ಮಾಡಬಹುದು. ಮತ್ತು ಸುಲಭವಾಗಿ ಆನ್​ಲೈನ್​ನಲ್ಲೂ (Online) ಈ ಕಾರ್ಯ ಮಾಡಬಹುದು. ಸಮೀಪದ ರೇಷನ್ ಅಂಗಡಿಯಲ್ಲಿ

ನೀವು ಇದನ್ನು ಮಾಡಿಸಬೇಕೆಂದಿದ್ದರೆ ನಿಮ್ಮ ರೇಷನ್ ಕಾರ್ಡ್​ನಲ್ಲಿ ಇರುವ ಎಲ್ಲಾ ಕುಟುಂಬ ಸದಸ್ಯರ ಆಧಾರ್ ಕಾರ್ಡ್​ನ ಝೆರಾಕ್ಸ್ ಪ್ರತಿ ತೆಗೆದುಕೊಂಡು ಹೋಗಬೇಕು.

ಯಾರ ಹೆಸರಲ್ಲಿ ರೇಷನ್ ಕಾರ್ಡ್ ಇರುತ್ತದೋ ಅವರ ಪಾಸ್​ಪೋರ್ಟ್ ಗಾತ್ರದ ಫೋಟೋ ತೆಗೆದುಕೊಂಡು ಹೋಗಬೇಕು. ಒಂದು ವೇಳೆ ಆಧಾರ್​ಗೆ ನಿಮ್ಮ ಬ್ಯಾಂಕ್ ಖಾತೆ ಲಿಂಕ್ ಆಗಿಲ್ಲದೇ ಇದ್ದರೆ ಬ್ಯಾಂಕ್ ಪಾಸ್​ಬುಕ್​ನ

ಒಂದು ಪ್ರತಿ ಹೊಂದಿರಬೇಕು. ಪಡಿತರ ಅಂಗಡಿಯಲ್ಲಿ ಈ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು. ಅಲ್ಲಿ ನಿಮ್ಮ ಫಿಂಗರ್ ಪ್ರಿಂಟ್ (Finger Print) ಅನ್ನು ಆಧಾರ್ ಬಯೋಮೆಟ್ರಿಕ್ ಮಾಹಿತಿ ದೃಢಪಡಿಸಲು ಪಡೆಯಲಾಗುತ್ತದೆ.

ಎಲ್ಲಾ ದಾಖಲೆಗಳ ಸಲ್ಲಿಕೆ ಆದ ನಂತರ ಆಧಾರ್ ಜೊತೆ ನೊಂದಾಯಿತವಾದ ನಿಮ್ಮ ಮೊಬೈಲ್ ನಂಬರ್​ಗೆ ಒಂದು ಧೃಡೀಕರಣ ಎಸ್ಸೆಮ್ಮೆಸ್ ಬರುತ್ತದೆ.

ಆನ್​ಲೈನ್​ನಲ್ಲಿ ಆಧಾರ್​ಗೆ ರೇಷನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?

ರೇಷನ್ ಕಾರ್ಡ್ ಅನ್ನು ಯುಐಡಿಎಐನ (UIDAIN) ವೆಬ್​ಸೈಟ್ ಮೂಲಕ ಲಿಂಕ್ ಮಾಡಬಹುದು. ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಜೋಡಣೆ ಯನ್ನು ರಾಜ್ಯ ಪಿಡಿಎಸ್ (PDS)ವೆಬ್​ಸೈಟ್ ಮೂಲಕವೂ ಮಾಡಬಹುದು.

ರಶ್ಮಿತಾ ಅನೀಶ್

Exit mobile version