ಎಂಸಿಡಿ ಚುನಾವಣೆಯಲ್ಲಿ ಕಸದ ವಿಚಾರವನ್ನು ಪ್ರಸ್ತಾಪಿಸದಂತೆ ಬಿಜೆಪಿ ತನ್ನ ಕಾರ್ಯಕರ್ತರಿಗೆ ಹೆದರಿಸಿದೆ : ಎಎಪಿ

New Delhi : ಭಾರತೀಯ ಜನತಾ ಪಕ್ಷವು (AAP Targets BJP) ಈಗ ಸೋಲಿನ ಭಯದಲ್ಲಿದೆ ಎಂದು ಆಮ್ ಆದ್ಮಿ ಪಕ್ಷವೂ ಅಪಹಾಸ್ಯ ಮಾಡಿದ್ದು, ಬಿಜೆಪಿ ಪಕ್ಷದ ವಿರುದ್ಧ ಆರೋಪಗಳ ಸುರಿಮಳೆ ಹರಿಸಿದೆ.

ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಚುನಾವಣೆಯ ಸಂದರ್ಭದಲ್ಲಿ ಯಾರೂ ಕಸದ ವಿಷಯವನ್ನು ಪ್ರಸ್ತಾಪಿಸಬಾರದು ಎಂದು ತಮ್ಮ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ್ದಾರೆ.

ಕಸದ ವಿಷಯವನ್ನು ಪ್ರಸ್ತಾಪ ಮಾಡಿದರೆ ನಿಮ್ಮನ್ನು ಪಕ್ಷದಿಂದ ಹೊರಹಾಕಲಾಗುವುದು ಎಂದು ಬಿಜೆಪಿ ತನ್ನ ಕಾರ್ಯಕರ್ತರಿಗೆ ಬೆದರಿಕೆ ಹಾಕಿದೆ ಎಂದು ಆಮ್ ಆದ್ಮಿ ಪಕ್ಷ ಬುಧವಾರ ಬಿಜೆಪಿ ವಿರುದ್ಧ ಆರೋಪಿಸಿದೆ.

ಎಎಪಿ ಶಾಸಕ ಮತ್ತು ಎಂಸಿಡಿ ಉಸ್ತುವಾರಿ ದುರ್ಗೇಶ್ ಪಾಠಕ್ ಮಾತನಾಡಿ, ‘ಎಂಸಿಡಿ ಚುನಾವಣೆಯ ಸಿದ್ಧತೆಯ ಭಾಗವಾಗಿ ಬಿಜೆಪಿ ನಿನ್ನೆ ಸಭೆ ನಡೆಸಿದೆ,

ಚರ್ಚೆಯ ಎಲ್ಲಾ ಮಾಹಿತಿಯನ್ನು ಅವರ ಪಕ್ಷದ ಹಿರಿಯ ಸದಸ್ಯರು ನನಗೆ ನೀಡಿದ್ದಾರೆ. ಕಾರ್ಯಕರ್ತರಿಗೆ ಈ ರೀತಿ ಸೂಚನೆ ನೀಡಲಾಗಿತ್ತು.

ಇದನ್ನೂ ಓದಿ : https://vijayatimes.com/ramya-tweet-to-sonia-gandhi/

ಆಮ್ ಆದ್ಮಿ ಪಕ್ಷವು ಕಸದ ಬಗ್ಗೆ ಚರ್ಚಿಸಿದರೂ ಕೂಡ ದೆಹಲಿಯ (AAP Targets BJP) ಜನತೆ ಕಸದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಆದ್ರೆ, ಬಿಜೆಪಿ ಈ ರೀತಿ ಮಾಡಿರುವುದು ಅವರಿಗೆ ತಿಳಿದಿಲ್ಲ !

ಎಂಸಿಡಿ ಚುನಾವಣೆಯ ವೇಳಾಪಟ್ಟಿಯನ್ನು ಈಗ ಯಾವಾಗ ಬೇಕಾದರೂ ಪ್ರಕಟಿಸಬಹುದು. ಬಿಜೆಪಿ ಸಭೆಯಲ್ಲಿ ದೆಹಲಿ ರಾಜ್ಯ ಘಟಕದ ಸುಮಾರು 150 ಹಿರಿಯ ನಾಯಕರು ಜಮಾಯಿಸಿದರು.

ಸಭೆಯ ಅಜೆಂಡಾ ಎಂಸಿಡಿ ಚುನಾವಣೆಗೆ ತಯಾರಿ ನಡೆಸುವುದಾಗಿತ್ತು. ಸಭೆಯ ನಂತರ, ಈ ಜನರು ಹೊರಬಂದ ತಕ್ಷಣ, ಪ್ರಚಂಡ ಗದ್ದಲ ಮತ್ತು ಹೊಡೆದಾಟಗಳು ನಡೆಯಿತು,

ನಾಯಕರು ಪರಸ್ಪರ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದರು, ಬಿಜೆಪಿ ಇಂಥ ಅನೇಕ ತಂತ್ರಗಳನ್ನು ರೂಪಿಸಲು ಪ್ರಯತ್ನಿಸುತ್ತಿದೆ.

ಬಿಜೆಪಿ ಆಂತರಿಕ ಸುತ್ತೋಲೆ ಹೊರಡಿಸಿದ್ದು, ದೆಹಲಿಯಾದ್ಯಂತ ಮೂರು ಬೃಹತ್ ಕಸದ ಹೂಳನ್ನು ಸೃಷ್ಟಿಸಿದೆ. ಕಸದ ಪರಿಸ್ಥಿತಿಯ ಬಗ್ಗೆ ದೆಹಲಿಯ ಜನರು ಹೆಚ್ಚು ಆಕ್ರೋಶ ವ್ಯಕ್ತಪಡಿಸುತ್ತಾರೆಂದು ಬಿಜೆಪಿಗೆ ತಿಳಿದಿದೆ.

ಹೀಗಾಗಿ ಅವರ ನಾಯಕತ್ವವು ಒಂದು ಮಾರ್ಗವನ್ನು ಕಂಡುಹಿಡಿದು ಸಭೆಯಲ್ಲಿದ್ದ ಎಲ್ಲರಿಗೂ ಸೂಚನೆ ನೀಡಿದೆ.

ಚುನಾವಣೆಯವರೆಗೂ ಯಾರೂ ಕಸದ ಬಗ್ಗೆ ಹೇಳುವಂತಿಲ್ಲ ಎಂದು ಹೇಳಿದೆ ಎಂದು ಪಾಠಕ್ ಆರೋಪಿಸಿದ್ದಾರೆ. ಬಿಜೆಪಿಯ ಹಿರಿಯ ಸದಸ್ಯರೊಬ್ಬರು ನನಗೆ ಕರೆ ಮಾಡಿ,

ಚುನಾವಣಾ ಸಮಯದಲ್ಲಿ ಯಾರಾದರೂ ಕಸದ ಹೆಸರನ್ನೂ ಹೇಳಿದರೆ ಅವರನ್ನು ಪಕ್ಷದಿಂದ ಹೊರಹಾಕಲಾಗುವುದು ಎಂದು ಸೂಚನೆ ನೀಡಿರುವುದರ ಬಗ್ಗೆ ನನಗೆ ಮಾಹಿತಿ ನೀಡಿದರು.

https://fb.watch/gpTr7Vraee/

ಕಳೆದ 15 ವರ್ಷಗಳಿಂದ ಬಿಜೆಪಿ ಯಾವುದೇ ಕೆಲಸ ಮಾಡಿಲ್ಲ, ಬಿಜೆಪಿ ದೆಹಲಿಯನ್ನು ಲೂಟಿ ಮಾಡಿದೆ, ದೆಹಲಿಯ ಜನರು ಕಸದಿಂದ ತುಂಬಾ ತೊಂದರೆಗೀಡಾಗಿದ್ದಾರೆ ಎಂಬುದರ ಬಗ್ಗೆ ಅವರಿಗೆ ಕಿಂಚಿತ್ತು ಅರಿವಿಲ್ಲ ಎಂಬುದು ಸಮೀಕ್ಷೆಯ ವರದಿಯಿಂದಲೇ ತಿಳಿಯುತ್ತದೆ.
Exit mobile version