ಆಟ ನಿಲ್ಲಿಸಿದ ಫುಟ್ಬಾಲ್ ದಂತಕಥೆ ಮಾರಡೋನಾ

ಅರ್ಜೆಂಟಿನಾದ ಫುಟ್ಬಾಲ್ ದಂತಕತೆ ಡಿಯಾಗೋ ಮಾರಡೋನಾ (60) ಅವರು ಹೃದಯಾಘಾತದಿಂದ ಬುಧವಾರ ಸಾವಿಗೀಡಾಗಿದ್ದಾರೆ.

ಇಂದು ಮಧ್ಯಾಹ್ನದ ವೇಳೆಗೆ ಟಿಗ್ರೆಯಲ್ಲಿರುವ ಅವರ ಮನೆಯಲ್ಲಿ ಹೃದಯಾಘಾತದಿಂದ ಮರಡೋನಾ ಕುಸಿದು ಬಿದ್ದಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸಾ ವೈಫಲ್ಯದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಅರ್ಜೆಂಟಿನಾ ತಂಡ ಫುಟ್ಬಾಲ್ ವಲ್ಡ್ಕಪ್ ಗೆಲ್ಲಲು ಮರಡೋನಾ ಅವರು ಪ್ರಮುಖ ಕಾರಣಕರ್ತರಾಗಿದ್ದರು. ಮಿದುಳಿನಲ್ಲಿ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದಷ್ಟೇ ಮರಡೋನಾ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ, ದುರಾದೃಷ್ಟವಶಾತ್ ನಿನ್ನೆ ಅವರು ನಿಧನಹೊಂದಿದ್ದಾರೆ.

Exit mobile version