ಅಭಿನಂದನ್ ವರ್ಧಮಾನ್‌ಗೆ ವೀರ ಚಕ್ರ ಪ್ರಧಾನ

ನವದೆಹಲಿ ನ 23 : ಫೆಬ್ರವರಿ 27, 2019 ರಂದು ಪಾಕಿಸ್ತಾನದ F-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‌ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವೀರ ಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದರು

2019 ರಲ್ಲಿ ಇದೆ ವರ್ಷ ಪುಲ್ವಾಮಾ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ವೈಮಾನಿಕ ಸಂಘರ್ಷಗಳ ಮಧ್ಯೆ, ಪಾಕ್ ವಿಮಾನವನ್ನು ಅಟ್ಟಿಸಿಕೊಂಡು ಹೋಗುವ ಭರದಲ್ಲಿ, ಇನ್ನೊಂದು ಪಾಕ್ ಫೈಟರ್ ಜೆಟ್ ದಾಳಿಗೊಳಗಾದ ವರ್ಧಮಾನ್ ಅವರ ವಿಮಾನ, ಪಾಕ್ ಆಕ್ರಮಿತ ಕಾಶ್ಮೀರದ ಭೂಭಾಗದಲ್ಲಿ ಪತನವಾಯಿತು ಮತ್ತು ಪಾಕ್ ಸೈನಿಕರಿಂದ ಬಂಧಿಸಲ್ಪಟ್ಟರು. ಭಾರತದ ಒತ್ತಡ, ಪ್ರತಿದಾಳಿಯ ಭಯ ಮತ್ತು ಅಂತರರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನ, ಸೆರೆ ಹಿಡಿದಿದ್ದ ವರ್ಧಮಾನ್ ಅವರನ್ನು ಮಾರ್ಚ್ ೧ ೨೦೧೯ರಂದು ಭಾರತಕ್ಕೆ ಹಸ್ತಾಂತರಿಸಿತು.

Exit mobile version