‘ಕನ್ಯಾ ಭಾಗ್ಯ ಕೊಡಿ’ ಸಿದ್ದರಾಮಯ್ಯರಿಗೆ ರೈತರಿಂದ ವಿನೂತನ ಕೋರಿಕೆ ! ಯಾಕೆ?

Haveri : (ಜುಲೈ 19): ರೈತ (about farmers marriage request) ರಾಷ್ಟ್ರದ ಬೆನ್ನೆಲುಬು. ಆದರೆ ಈ ರೈತರಿಗೆ ಮದುವೆಯಾಗಲು ಯಾರೂ ಹೆಣ್ಣು ಕೊಡ್ತಿಲ್ಲ. ರೈತರಿಗೆ ಮದುವೆ ಮಾಡಲು

ಹೆಣ್ಣು ಕೊಡಲು ಒಪ್ಪದಕ್ಕೆ ಬೇಸತ್ತ ಹಾವೇರಿ (Haveri) ಜಿಲ್ಲೆಯ ಯುವಕರು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ನೆರವು ಕೋರಿದ್ದಾರೆ.

ಗೃಹಿಣಿಯರಿಗೆ 2,000 ಆರ್ಥಿಕ ನೆರವು ನೀಡುವಂತೆ ಕನ್ಯಾ ಭಾಗ್ಯ(Kanya Bhagya) ಯೋಜನೆ ಕೂಡ ಜಾರಿಗೊಳಿಸುವಂತೆ ಬ್ಯಾಡಗಿ ತಾಲೂಕಿನ ಅವಿವಾಹಿತ ಯುವ ರೈತರು ಪತ್ರದಲ್ಲಿ ಮನವಿ

ಮಾಡಿದ್ದಾರೆ. ಹೆಚ್ಚುವರಿಯಾಗಿ, ರೈತರನ್ನು ಮದುವೆಯಾದವರಿಗೂ ಸಹ ಹಣಕಾಸಿನ ನೆರವು ನೀಡುವ ಕಾರ್ಯಕ್ರಮ (about farmers marriage request) ಘೋಷಣೆ ಮಾಡುವಂತೆ ಒತ್ತಾಯಿಸಿದ್ದಾರೆ.

ರೈತರಿಗೆ 5 ರಿಂದ 6 ಎಕರೆವರೆಗಿನ ಜಮೀನು ಇದ್ದರೂ ಕೂಡ ಹೆಣ್ಣು ಕೊಡಲು ಹಿಂಜರಿಯುತ್ತಿದ್ದಾರೆ. ವ್ಯವಸಾಯದಲ್ಲಿ ತೊಡಗಿರುವ ಹಲವಾರು ವ್ಯಕ್ತಿಗಳು ಮದುವೆಯಾಗಲು ಹೆಣ್ಣು ಸಿಗದೆ ಬೇಸತ್ತು ಹೋಗಿದ್ದಾರೆ

ಇನ್ನು ಕೆಲವರು ನೊಂದು ಆತ್ಮಹತ್ಯೆ (Sucide) ಸಹ ಮಾಡಿಕೊಂಡಿದ್ದಾರೆ. ಇನ್ನು ಕೆಲವು ಪೋಷಕರು ಕೇವಲ 5 ಸಾವಿರ ರೂಪಾಯಿಗಳನ್ನು ಸಂಬಳ ಪಡೆಯುವ ವ್ಯಕ್ತಿಗೆ ಮದುವೆಯಾಗಲು ಹೆಣ್ಣು ಕೊಡುತ್ತಿದ್ದಾರೆ.

ಇದನ್ನೂ ಓದಿ : 8ನೇ ತರಗತಿಯಿಂದ ಕನ್ನಡ ಪಾಠ ಬೇಡ : ಪ್ರಾಂಶುಪಾಲರ ಬಳಿ ಕೆಲ ಪೋಷಕರ ಆಗ್ರಹ!

ಆದರೆ ನಮಗೆ ಅನುಕೂಲಕರವಾದ ಮಳೆಯಾದರೆ, ನಾವು ಕೂಡ ಲಕ್ಷಾಂತರ ರೂಪಾಯಿಗಳಲ್ಲಿ ಉತ್ತಮ ಆದಾಯವನ್ನು ಗಳಿಸುತ್ತೇವೆ. ಆದರೆ ಇತೀಚೆಗೆ ಹವಾಮಾನ ವೈಪರೀತ್ಯದಿಂದ ಆಗುವ ನಷ್ಟದ

ಅರಿವು ರೈತರಿಗಿರುವ ಕಾರಣ, ಅವರು ತಮ್ಮ ಹೆಣ್ಣು ಮಕ್ಕಳನ್ನು ಸಹ ರೈತರಿಗೆ ಮದುವೆ ಮಾಡಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಯುವ ರೈತರನ್ನು ಮದುವೆಯಾಗುವ ಯುವತಿಯರಿಗೆ ಕನಿಷ್ಠ 2

ಲಕ್ಷದ ಪ್ರೋತ್ಸಾಹ ಧನವನ್ನು ಘೋಷಿಸಿ ಎಂದು ಅಧಿಕಾರಿಗಳಿಗೆ ಮನವಿ (about farmers marriage request) ಮಾಡಿದ್ದಾರೆ.

ರೈತರನ್ನು ವಿವಾಹವಾದ ವಿದ್ಯಾವಂತ ಯುವತಿಯರಿಗೆ ಸರ್ಕಾರಿ ಹುದ್ದೆಗಳಲ್ಲಿ(Government Posts) ಮೀಸಲಾತಿ ನೀಡಲು ಮತ್ತು ಈ ನಿರ್ದಿಷ್ಟ ಗುಂಪಿಗೆ ಸರ್ಕಾರಿ ಉದ್ಯೋಗಾವಕಾಶಗಳನ್ನು ವಿಸ್ತರಿಸಲು ಶಿಫಾರಸು ಮಾಡಿ ಎಂದು ಕೊರಿಕೊಂಡಿದ್ದಾರೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ‌ ಮದುವೆ ಆಗದ ಯುವ ರೈತರು, ರೈತರನ್ನು ಮದುವೆ ಆದವರಿಗೂ ಸಹ ಇನ್ನು ಮುಂದೆ ಮನೆಯೊಡತಿಗೆ 2 ಸಾವಿರ ರೂ. ಕೊಡುವ ಮಾದರಿಯಲ್ಲಿ ಹಣ ಕೊಡಬೇಕು. ಇಂತಹ ಕಾರ್ಯಕ್ರಗಳನ್ನೊಳಗೊಂಡ ಕನ್ಯಾ ಭಾಗ್ಯ ಯೋಜನೆ ಜಾರಿಗೆ ತರಬೇಕೆಂದು ಪತ್ರದ ಮೂಲಕ ಆಗ್ರಹಿಸಿದ್ದಾರೆ.

ಇನ್ನು ಗದಗ(Gadaga) ಜಿಲ್ಲೆಯ ಮುತ್ತು ಹೂಗಾರ ಎನ್ನುವ ಯುವಕನೊಬ್ಬ, ಇತ್ತೀಚೆಗೆಷ್ಟೇ ಕನ್ಯೆ ಹುಡುಕಿ ಹುಡುಕಿ ಸುಸ್ತಾದ ಕೊನೆಗೆ ತಾಲೂಕಿನ ಡಂಬಳ (dambal) ಗ್ರಾಮ ಪಂಚಾಯತಿ ಪಿಡಿಒಗೆ(PDO) ತನಗೊಂದು ಕನ್ಯೆಯನ್ನು ಹುಡುಕಿಕೊಡಿ ಎಂದು ಪತ್ರ ಬರೆಯುವ ಮೂಲಕ ಕರ್ನಾಟಕ ಸರ್ಕಾರಕ್ಕೆ(Karnataka Government) ಒತ್ತಾಯಿಸಿದ್ದನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ

ರಶ್ಮಿತಾ ಅನೀಶ್

Exit mobile version