ಗಾಂಧಿ ಜಯಂತಿ: ರಾಷ್ಟ್ರಪಿತರಾದ ಬಾಪು ರವರ ಜನ್ಮದಿನದ ಕುರಿತಾದ ಮಾಹಿತಿ ಇಲ್ಲಿದೆ.

ಭಾರತ: ಭಾರತದ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧೀಜಿಯವರು (Mahatma Gandhiji) ಸತ್ಯ, ಅಹಿಂಸೆಯ ಮೂಲಕ ಜಗತ್ತಿನ ಮನವ ಗೆದ್ದ ಮಹಾತ್ಮರಿವರು. ದೇಶದೆಲ್ಲೆಡೆ ಅಕ್ಟೋಬರ್ (October) 2ರಂದು ಬಾಪು ಅವರ ಜನ್ಮದಿನವನ್ನು ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಹಂಚಿಕೊಳ್ಳುವಂತಹ ಶುಭಾಶಯದ ಸಂದೇಶಗಳು ಇಲ್ಲಿವೆ.

ಜಗತ್ತನ್ನು ಬೆಳಗಿದ ಮಹಾತ್ಮ ಗಾಂಧೀಜಿ ಅವರ ಜನ್ಮದಿನವನ್ನು ಈ ವರ್ಷ ನಾವು ಬಾಪು ಅವರ 154 ನೇ ಜಯಂತಿಯನ್ನು ಆಚರಿಸುತ್ತೇವೆ. ಗಾಂಧೀಜಿ ಅವರ ಚಿಂತನೆ, ಆದರ್ಶ, ಜೀವನ ಮೌಲ್ಯಗಳನ್ನು ಸ್ಮರಿಸುವ ಮತ್ತು ಅದರಂತೆ ನಡೆಯುವ ಪಣ ತೊಡುವ ದಿನವಾಗಿದ್ದು, ಗಾಂಧೀಜಿ ಅವರು ಭಾರತವನ್ನು ಬ್ರಿಟಿಷರ (British) ಆಳ್ವಿಕೆಯಿಂದ ಸ್ವಾತಂತ್ರ್ಯದ ಕಡೆಗೆ ಮುನ್ನಡೆಸಿದ ಸ್ವಾತಂತ್ರ್ಯ ಹೋರಾಟಗಾರ ಮಾತ್ರವಲ್ಲ, ಅವರು ಎಲ್ಲರ ಬದುಕಿನ ಬೆಳಕು, ಆದರ್ಶವೂ ಕೂಡ ಹೌದು.

ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾತ್ಮರಿವರು. ಸತ್ಯದ ದಾರಿಯಲ್ಲಿಸಾಗುವ ಮೂಲಕ ಬೆಳಕು ನೀಡಿದ ದೂರದೃಷ್ಟಿಯ ನಾಯಕ ಮಹಾತ್ಮ ಗಾಂಧೀಜಿ. ಮಹಾತ್ಮ ಗಾಂಧೀಜಿ ಅವರ ಚಿಂತನೆಗಳು ಎಂದೆಂದಿಗೂ ಅಮರ. ರಾಷ್ಟ್ರಪಿತ ಎಂದು ಎಲ್ಲರಿಂದಲೂ ಪ್ರೀತಿಯಿಂದ ಕರೆಸಿಕೊಳ್ಳುವ ಈ ಮಹಾನ್ ನಾಯಕರಿಗೆ ಭಾರತ ಸದಾ ಋಣಿ. ಗಾಂಧೀಜಿ ಅವರ ಜನ್ಮದಿನವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಎಲ್ಲರೊಂದಿಗೂ ಹಂಚಿಕೊಳ್ಳಬಹುದಾದ ಕೆಲ ಮಾಹಿತಿಗಳು

೧. ಮಹಾತ್ಮ ಗಾಂಧಿ ಒಬ್ಬ ಮಹಾನ್ ಸ್ವಾತಂತ್ರ್ಯ ಹೋರಾಟಗಾರ.
೨. ನಮ್ಮ ದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸಿದ ಮಹಾನ್ ವ್ಯಕ್ತಿ.
೩. ಅವರನ್ನು ಭಾರತದ ಪಿತಾಮಹ ಎಂದೂ ಕರೆಯುತ್ತಾರೆ.
೪. ಅಸಹಕಾರ, ನಾಗರಿಕ ಅಸಹಕಾರ ಮತ್ತು ಭಾರತವನ್ನು ತೊರೆಯುವಂತಹ ಅನೇಕ ಚಳುವಳಿಗಳನ್ನು ಬ್ರಿಟಿಷರ ವಿರುದ್ಧ ಮಾಡಿದರು.
೫. 30 ಜನವರಿ 1948 ರಂದು, ನಾಥೂರಾಮ್ ಗೋಡ್ಸೆ (Nathuram Godse) ಮಹಾತ್ಮಾ ಗಾಂಧಿಯನ್ನು ಹೊಡೆದು ಸಾಯಿಸಿದರು.

ಸಂದೇಶಗಳು:
೧. ಗಾಂಧಿ ಜಯಂತಿಯ ಪ್ರಯುಕ್ತ ಶಾಂತಿ, ಸತ್ಯ ಮತ್ತು ಅಹಿಂಸೆಯ ಸಂದೇಶವನ್ನು ಸ್ಮರಿಸೋಣ.
೨. ಪ್ರೀತಿ ಮತ್ತು ಕ್ಷಮೆ ಎಲ್ಲರನ್ನು ಗೆಲ್ಲುತ್ತದೆ ಎಂಬುದನ್ನು ನಮಗೆ ಕಲಿಸಿದ ಮಹಾನ್ ವ್ಯಕ್ತಿ
೩. ಸತ್ಯ ಮತ್ತು ಅಹಿಂಸೆಯ ತತ್ವಗಳಿಂದ ನಮ್ಮನ್ನು ಸ್ವಾತಂತ್ರ್ಯದತ್ತ ಕೊಂಡೊಯ್ದ ಇವರನ್ನು ಸ್ಮರಿಸುತ್ತಾ ಸಾಗೋಣ.
೪. ಇವರ ಆದರ್ಶಗಳು ಹೆಚ್ಚು ನ್ಯಾಯಯುತ ಮತ್ತು ಶಾಂತಿಯುತವಾಗಿದ್ದು,ಎಲ್ಲರಿಗು ಸ್ಫೂರ್ತಿ ನೀಡಲಿ.
೫. ಇವರನ್ನು ಗೌರವಿಸುವುದು ನಮ್ಮ ಜಾಛಬ್ದಾರಿಯಾಗಿದ್ದು, ಸ್ಮರಣೆಯೊಂದಿಗೆ ಬದುಕನ್ನು ಕಟ್ಟಿಕೊಳ್ಳೋಣ.

ಜೀವನ ಚರಿತ್ರೆ
ಗಾಂಧೀಜಿ ಅವರು ಅಕ್ಟೋಬರ್ 2, 1869 ರಲ್ಲಿ ಭಾರತದಲ್ಲಿರುವ ಗುಜರಾತ್ ರಾಜ್ಯದ ಪೋರಬಂದರ್ ನಲ್ಲಿ (Porbandar) ಜನಿಸಿದರು. ಇವರ ತಂದೆ ಕರಮಚಂದ್ ಗಾಂಧಿ, ತಾಯಿ ಪುತಲೀಬಾಯಿ(Putalibai). ಇವರ ಪೂರ್ಣ ಹೆಸರು ಮೋಹನದಾಸ್ ಕರಮ‍ಚಂದ್ ಗಾಂಧಿ(Mohandas Karamchand Gandhi) .13ನೇಯ ವಯಸ್ಸಿನಲ್ಲಿ ಗಾಂಧೀಜಿ ಕಸ್ತೂರಿ ಬಾ ಅವರನ್ನು ವಿವಾಹವಾದರು. ನಂತರ ಇವರಿಗೆ ನಾಲ್ಕು ಮಕ್ಕಳು ಜನಿಸಿದರ. ಗಾಂಧೀಜಿಯನ್ನು ಬಾಪು ಎಂದೂ ಕರೆಯುತ್ತಾರೆ. 30 ಜನವರಿ 1948 ರಂದು ನಾಥೂರಾಮ್ ಗೋಡ್ಸೆಯವರು ಮಹಾತ್ಮಾ ಗಾಂಧಿಯನ್ನು ಗುಂಡಿಕ್ಕಿ ಸಾಯಿಸಿದರು.

ಭವ್ಯಶ್ರೀ ಆರ್.ಜೆ

Exit mobile version