Belagavi: ರೈತರನ್ನು ಪ್ರೋತ್ಸಾಹಿಸುವ ಹಿನ್ನಲೆಯಲ್ಲಿ ವಿವಿಧ ಜಿಲ್ಲಾ ಹಾಲು ಒಕ್ಕೂಟಗಳು (about interest free loan) ಹಸು, ಎಮ್ಮೆ ಖರೀದಿಗೆ ಬಡ್ಡಿರಹಿತ ಸಾಲ, ಸಬ್ಸಿಡಿಯನ್ನು
(Subsidy) ಘೋಷಣೆ ಮಾಡಿವೆ. ಇತ್ತೀಚೆಗೆ ಚರ್ಮಗಂಟು ರೋಗ, ಕಾಲುಬೇನೆ, ಕಾಲುಬಾಯಿ ಮುಂತಾದ ರೋಗಗಳು ಜಾನುವಾರುಗಳನ್ನು ಎಡೆಬಿಡದೇ ಕಾಡುತ್ತಿವೆ. ಹಸು-ಎಮ್ಮೆಗಳ
ಹಾಲು ಉತ್ಪಾದನೆ ಸಾಮರ್ಥ್ಯ ಕೂಡ ಇಂತಹ ರೋಗದಿಂದ ಗಣನೀಯ (about interest free loan) ಪ್ರಮಾಣದಲ್ಲಿ ಇಳಿಕೆಯಾಗಿದೆ.
ಅಲ್ಲದೆ ಹಾಲು ಉತ್ಪಾದನೆ ಮೇಲೆ ಅಧಿಕ ತಾಪಮಾನವು ಮತ್ತು ಮಳೆ,ಮೇವಿನ ಕೊರತೆ ಕೂಡ ದುಷ್ಪರಿಣಾಮ ಬೀರಿವೆ. ಹೈನುಗಾರರು (Dairy farmers) ಇದರಿಂದ ಕಂಗಾಲಾಗಿದ್ದಾರೆ.
ರಾಜ್ಯದ ವಿವಿಧ ಜಿಲ್ಲಾ ಹಾಲು ಒಕ್ಕೂಟಗಳು ಬಡ್ಡಿರಹಿತ ಸಾಲ, ಸಬ್ಸಿಡಿಗಳನ್ನು ಹೈನುಗಾರ ರೈತರನ್ನು ಪ್ರೋತ್ಸಾಹಿಸುವ ಹಿತದೃಷ್ಟಿಯಿಂದ ಘೋಷಣೆ ಮಾಡುತ್ತಿವೆ. ಹಸು, ಎಮ್ಮೆ ಖರೀದಿಗೆ
ರೈತರಿಗೆ ಉತ್ತೇಜನ ನೀಡುವ ಹಿನ್ನಲೆಯಲ್ಲಿ ವೈಯಕ್ತಿಕ ಸಾಲ (Personal loan) ಸೌಲಭ್ಯ ಘೋಷಣೆ ಮಾಡುತ್ತಿವೆ.

ಒಟ್ಟು 50,000 ವರೆಗೆ ಬಡ್ಡಿ ಇಲ್ಲದ ಸಾಲ
ಹಸುಗಳನ್ನು ಖರೀದಿಸಲು ರೈತರಿಗೆ ಬಡ್ಡಿ ರಹಿತವಾಗಿ ಹೈನೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ 50,000 ರೂ ಸಾಲ ನೀಡಲಾಗುವುದು ಎಂದು ಬೆಳಗಾವಿ (Belagavi) ಜಿಲ್ಲಾ ಸಹಕಾರಿ
ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ವಿವೇಕರಾವ್ ಪಾಟೀಲ(Viveka rao pateela) ತಿಳಿಸಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಮರೀಚಿಕೆ ಆಗುತ್ತಿರುವ ಮಳೆ : ಮೋಡ ಬಿತ್ತನೆ ಬೇಡವೆಂದ ಸಿಎಂ ಸಿದ್ದರಾಮಯ್ಯ
ಬೆಳಗಾವಿ ಜಿಲ್ಲೆಯಲ್ಲಿ ಅಪಾರ ಸಂಖ್ಯೆಯ ರಾಸುಗಳು ಚರ್ಮಗಂಟು ರೋಗದಿಂದ ಸತ್ತಿವೆ. ಸಾಕಷ್ಟು ಹಾಲಿನ ಉತ್ಪಾದನೆ ಕುಸಿದಿದೆ. ಇದನ್ನು ಸರಿದೂಗಿಸಲು ಮತ್ತು ಉತ್ತೇಜನ ನೀಡಲು
ರೈತರಿಗೆ ಉತ್ತಮ ತಳಿಯ ರಾಸುಗಳನ್ನು ಖರೀದಿಸಲು ಸಹಾಯ ನೀಡಲಾಗುತ್ತಿದೆ ಎಂದು ಬೆಳಗಾವಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದ್ದಾರೆ.

ತಲಾ 5 ಲಕ್ಷ ಅನುದಾನ ಬಿಡುಗಡೆ
ತಲಾ 35 ಲಕ್ಷದಂತೆ 770 ಲಕ್ಷ ಹಣವನ್ನು ಜಿಲ್ಲೆಯ 14 ಹಾಲು ಒಕ್ಕೂಟಗಳಿಗೆ ಬಿಡುಗಡೆ ಮಾಡಲಾಗಿದೆ. ಇದರ ಸದುಪಯೋಗವನ್ನು ರೈತರು ಮಾಡಿಕೊಳ್ಳಬೇಕು. ಅಷ್ಟೇ ಅಲ್ಲದೆ ಹಂತ ಹಂತವಾಗಿ
ಒಕ್ಕೂಟಗಳಿಗೆ ನೀಡುತ್ತಿರುವ ಸಾಲದ ಮೊತ್ತವನ್ನು ಹೆಚ್ಚಿಸಲಾಗುವುದು ಎಂದೂ ಸಹ ಬೆಳಗಾವಿ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಅವರು ಹೇಳಿದ್ದಾರೆ.
ಇದನ್ನೂ ಓದಿ : ಅನಾರೋಗ್ಯ ಕಾರಣ ನೀಡಿ ಪತ್ನಿ ಹಾಗೂ ಮಕ್ಕಳಿಗೆ ಜೀವನಾಂಶ ನೀಡುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲಾಗದು : ಹೈಕೋರ್ಟ್ ಆದೇಶ
ಕಳೆದ ವರ್ಷ 7,000ಕ್ಕೂ ಹೆಚ್ಚು ಹೈನುರಾಸುಗಳು ಬೆಳಗಾವಿ ಜಿಲ್ಲೆಯಲ್ಲಿ ಚರ್ಮಗಂಟು ರೋಗದಿಂದ ಸತ್ತಿವೆ. ಮತ್ತು ಹಾಲು ನೀಡುವ ಸಾಮರ್ಥ್ಯವೂ ರೋಗ ವಾಸಿಯಾದ ರಾಸುಗಳಲ್ಲಿ ಕುಸಿದಿದೆ.
ಈ ಕಾರಣದಿಂದ ಹಲವರು ಕಲಬೆರಕೆ ಹಾಲನ್ನು ಉತ್ಪಾದನೆ ಮಾಡುತ್ತಿದ್ದಾರೆ. ಹಾಲು ಖರೀದಿಸುವ ಮುನ್ನ ಜನರು ಎಚ್ಚರಿಕೆ ವಹಿಸಬೇಕು

ಹಸು ಖರೀದಿಗೆ ಸಹಾಯಧನದ ಭರವಸೆ
ಇದೇ ರೀತಿ ಈಚೆಗೆ ದಾವಣಗೆರೆ (Davanagere) ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ (S.S Mallikarjuna) ಅವರು ಕೂಡ ದಾವಣಗೆರೆಯ ಬಾಪೂಜಿ ಬ್ಯಾಂಕ್ನ ಸಮುದಾಯ
ಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ರೈತರಿಗೆ ಒಕ್ಕೂಟದಿಂದ 340,000 ಸಹಾಯಧನ ನೀಡುವ ಭರವಸೆ ನೀಡಿದ್ದರು.
ರೈತರಿಗೆ ಹಸು ಖರೀದಿಸಲು 740,000 ಸಬ್ಸಿಡಿಯನ್ನು ಶಿವಮೊಗ್ಗ (Shimoga) ಹಾಲು ಒಕ್ಕೂಟದಿಂದ ಬೇರ್ಪಡಿಸಿ ದಾವಣಗೆರೆ-ಚಿತ್ರದುರ್ಗ ಹಾಲಿನ ಒಕ್ಕೂಟ ರಚನೆ ಮಾಡಿ, ನೀಡಲಾಗುವುದು ಎಂದು ಎಸ್.ಎಸ್. ಮಲ್ಲಿಕಾರ್ಜುನ ಅವರು ಭರವಸೆ ನೀಡಿದ್ದರು.
ರಶ್ಮಿತಾ ಅನೀಶ್