ಬೆಂಗಳೂರು: ರಾಜ್ಯದಲ್ಲಿ ಜೈಲಿನಲ್ಲಿ ಹಲವಾರು ರೀತಿಯಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ (about Parappana Agrahara prisoners) ಇನ್ನೂ ಕೂಡ ಬ್ರೇಕ್ ಬಿದ್ದಿಲ್ಲ. ಇತೀಚೆಗೆ ಅಂತೂ ಪೋಲೀಸರೇ ಇವರಿಗೆ ಸಾಥ್
ನೀಡುತ್ತಿದ್ದಾರೆ. ಹೌದು ಮಾದಕ ವಸ್ತು ಹಾಗೂ ಮೊಬೈಲ್ ಸಾಗಿಸಲು ಪರಪ್ಪನ ಅಗ್ರಹಾರದಲ್ಲಿ(Parappana Agrahara) ಪೊಲೀಸರೇ ಬೆಂಬಲ ನೀಡುತ್ತಿದ್ದಾರೆ. ಪೋಲೀಸರು ಕೈದಿಗಳಾದ ರಾಮ್ ಭವನ್ರನ್ನ
(Ram Bhavan) ಮತ್ತು ಗಿರೀಶ್ ನನ್ನು(Gireesh) ಕೋರ್ಟ್ಗೆ ಕರೆದುಕೊಂಡು ಹೋಗಿದ್ದರು. ಬಳಿಕ ಕೋರ್ಟ್ನಿಂದ ಮರಳಿ ಜೈಲಿಗೆ ವಾಪಸ್ ಬಂದ ನಂತರ ಜೈಲಿನ ಸಿಬ್ಬಂದಿಯವರು
ಆರೋಪಿಗಳನ್ನ ತಪಾಸಣೆ ಮಾಡಿದ್ದಾರೆ ಎಂಟು ಮೊಬೈಲ್ ಹಾಗೂ 57 ಗ್ರಾಂ ಬ್ರೌನ್ ಶುಗರ್(Brown Sugar) ಈ ವೇಳೆ ಜಪ್ತಿ ಮಾಡಲಾಗಿದೆ.

ತೊಡೆ ಭಾಗದಲ್ಲಿ ಬಚ್ಚಿಟ್ಟಿದ್ದ ಬ್ರೌನ್ ಶುಗರ್ ಹಾಗೂ ಮೊಬೈಲ್ ಬೆಳಕಿಗೆ
ಮೊಬೈಲ್(Mobile) ಮತ್ತು ಮಾದಕ ವಸ್ತುವನ್ನ ತೊಡೆ ಭಾಗದಲ್ಲಿ ಕಪ್ಪು ಬಣ್ಣದ ಟೇಪ್ನಿಂದ ಸುತ್ತಿಕೊಂಡು ಬಚ್ಚಿಟ್ಟಿದ್ದು ಜೈಲಿನಿಂದ ಬಂದ ಖೈದಿಗಳನ್ನ ತಪಾಸಣೆ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.ಎಸ್ಕಾರ್ಟ್
ನೀಡಿದ್ದ ಪೊಲೀಸರ ಕಳ್ಳಾಟ ಪೋಲೀಸರು ರಾಮ್ ಭವಾನ್ನ್ನು ಮತ್ತು ಗಿರೀಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಬಯಲಾಗಿದೆ. ಆರೋಪಿ ಗಿರೀಶ್ ಕೋರ್ಟ್ ಗೆ (Court) ಹೋಗಿ ವಾಪಸ್ ಬರುವಾಗ
ಸ್ನೇಹಿತರನ್ನು ಸಂಪರ್ಕ ಮಾಡಿದ್ದ. ಜೊತೆಗಿದ್ದ ಪೊಲೀಸ್ ಸಿಬ್ಬಂದಿಗಳು ಇದಕ್ಕೆ ಸಾಥ್ (about Parappana Agrahara prisoners) ನೀಡಿದ್ದರು.
ಕೈದಿಗಳ ಜೊತೆ ಶಾಮೀಲಾಗಿದ್ದ ಪೋಲೀಸ್ ಸಿಬ್ಬಂದಿ
ಪೊಲೀಸ್ ಸಿಬ್ಬಂದಿ ಉಮೇಶ್ (Umesh) ಎಂಬಾತ ಪೋಕ್ಸೋ ಕೇಸ್ನಲ್ಲಿ(POXO Case) ಜೈಲು ಪಾಲಾಗಿದ್ದ ರಾಮ್ ಭವನ್ನ್ನ ಮತ್ತು ಕೊಲೆ ಹಾಗೂ ಇನ್ನಿತರ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಗಿರೀಶ್ ನನ್ನು ಕೋರ್ಟ್ಗೆ
ಕರೆದುಕೊಂಡು ವಾಪಾಸ್ ಬರುವಾಗ ಕೈದಿಗಳ ಜೊತೆ ಶಾಮೀಲಾಗಿದ್ದ.ಕೈದಿ ಗಿರೀಶ್ಗೆ ಆತನ ಸ್ನೇಹಿತರು ಮೊಬೈಲ್ ಹಾಗೂ ಮಾದಕ ವಸ್ತುಗಳನ್ನ ಕೋರ್ಟ್ ಬಳಿ ಕೊಟ್ಟರು ಹಾಗೂ ಮತ್ತೋರ್ವ ಖೈದಿ
ರಾಮ್ ಭವನ್ಗೆ ಆತನ ಪ್ರೇಯಸಿ ಮೊಬೈಲ್ ಅನ್ನು ನೀಡಿದ್ದಳು. ಇನ್ನು ಈ ಕುರಿತು ತನಿಖೆ ಮುಂದುವರೆಸಿ ಪ್ರಕರಣ ದಾಖಲು ಮಾಡಿಕೊಂಡಿರುವ ಪರಪ್ಪನ ಅಗ್ರಹಾರ ಪೊಲೀಸರು, ಕೈದಿಗಳಿಗೆ ಕೋರ್ಟ್ಗೆ
ಹಾಜರಾಗಿದ್ದಾಗ ಮೊಬೈಲ್, ಮಾದಕ ವಸ್ತು ನೀಡಿದ್ದವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಹೊಸ ಡ್ರಗ್ ರಾಕೆಟ್ ಬೆಂಗಳೂರು ನಗರದಲ್ಲಿ ಪತ್ತೆ ಪ್ರಕರಣ; ಪ್ರಮುಖ ಆರೋಪಿ ಅರೆಸ್ಟ್
ಹೊಸ ಡ್ರಗ್ ರಾಕೆಟ್ ಮಹಾನಗರದಲ್ಲಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿ ಗುಲಾಂ ಸಿಂಗ್ನ್ನು (Gulam Singh) ಬಂಧಿಸಿದ್ದಾರೆ. ಮಾದಕವಸ್ತುವನ್ನು ನೆನಸಿಟ್ಟು,ಆರೋಪಿ ನೀರು ಸರಬರಾಜು
ಮಾಡುತ್ತಿದ್ದ . ಮಾದಕವಸ್ತು ಒಪಿಎಂ, ಪಪ್ಪಿ ಎಂಬ ಹೊಸ ಮಾದರಿ ಡ್ರಗ್ಸ್ ಅನ್ನು ರಾಜಸ್ಥಾನದಿಂದ ತರಿಸುತ್ತಿದ್ದ. ಒಪಿಎಂ, ಪಪ್ಪಿ ಎರಡನ್ನೂ ಬಳಿಕ ಮಿಕ್ಸರ್ನಲ್ಲಿ ಪುಡಿ ಮಾಡಿ, ಪೌಡರ್ನ್ನು ಪುನಃ
ನೀರಿಗೆ ಹಾಕಿ ನೆನಸಿಡುತ್ತಿದ್ದ. 100 ಲೀಟರ್ ನೀರಿಗೆ 1 ಲೀಟರ್ ಡ್ರಗ್ಸ್ ನೀರು ಬೆರೆಸಿ, ನೀರಿನ ರೂಪದಲ್ಲೇ ಆಯ್ದ ಪಾರ್ಟಿಗಳಲ್ಲಿ ಸರಬರಾಜು ಮಾಡುತ್ತಿದ್ದ ಆರೋಪಿಯನ್ನ ಇದೀಗ ಬಂಧಿಸಿದ್ದು,
ಆರೋಪಿ ಬಳಿಯಿದ್ದ 55 ಕೆಜಿ ಡ್ರಗ್ಸ್ನ್ನು ಜಪ್ತಿ ಮಾಡಿದ್ದಾರೆ.
ರಶ್ಮಿತಾ ಅನೀಶ್