ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ 60ಕ್ಕೂ ಅಧಿಕ ಕಡೆ ACB ದಾಳಿ

ಬೆಂಗಳೂರು ನ 24 : ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಶಾಕ್‌ (ACB RAID) ಕೊಟ್ಟಿದೆ. ಬೆಂಗಳೂರು, ಬೆಳಗಾವಿ, ಕಲಬುರಗಿ, ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯ 60ಕ್ಕೂ ಅಧಿಕ ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಖಲೆಗಳ ಪರಿಶೀಲನಾ ಕಾರ್ಯ ಮುಂದುವರಿದಿದೆ.

ಮಂಗಳೂರು ಸ್ಮಾರ್ಟ್‌ ಸಿಟಿ ಯೋಜನೆಯ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಕೆ.ಎಸ್.ಲಿಂಗೇಗೌಡ, ಮಂಡ್ಯ ಎಚ್.ಎಲ್.ಬಿಸಿ ಎಕ್ಸಿಕ್ಯೂಟಿವ್‌ ಇಂಜಿಯರ್‌ ಶ್ರೀನಿವಾಸ ಕೆ., ದೊಡ್ಡಬಳ್ಳಾಪುರ ರೆವಿನ್ಯೂ ಇನ್ಸ್‌ಪೆಕ್ಟರ್‌ ಲಕ್ಷ್ಮೀ ಕಾಂತಯ್ಯ, ಬೆಂಗಳೂರು ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್‌ ಮ್ಯಾನೇಜರ್‌ ವಾಸುದೇವ್‌, ನಂದಿನಿ ಡೈರಿ ಬೆಂಗಳೂರಿನ ಜನರಲ್‌ ಮ್ಯಾನೇಜರ್‌ ಬಿ.ಕೃಷ್ಣಾ ರೆಡ್ಡಿ, ಗದಗ ಅಗ್ರಿಕಲ್ಚರ್ ಡಿಪಾರ್ಟ್‌ಮೆಂಟ್ ಜಾಯಿಂಟ್ ಡೈರೆಕ್ಟರ್ ಟಿ.ಎಸ್.ರುದ್ರೇಶಪ್ಪ, ಬೈಲಹೊಂಗಲ ಕೋ ಆಪರೇಟಿವ್ ಡೆವಲಪ್ಮೆಂಟ್ ಆಫೀಸರ್ ಸವದತ್ತಿ ಡೆಪ್ಯೂಟೇಷನ್ ಎ.ಕೆ.‌ಮಸ್ತಿ, ಗೋಕಾಕ್‌ ಸೀನಿಯರ್ ಮೋಟಾರ್ ಇನ್ಸ್’ಪೆಕ್ಟರ್ ಸದಾಶಿವ ಮರಲಿಂಗಣ್ಣನವರ್, ಬೆಳಗಾಂ ಹೆಸ್ಕಾಂ ಗ್ರೂಪ್ ಸಿ ನಾತಾಜೀ ಹೀರಾಜಿ ಪಾಟೀಲ್, ಬಳ್ಳಾರಿ ರಿಟೈರ್ಡ್ ಸಬ್ ರಿಜಿಸ್ಟರ್‌ ಕೆ.ಎಸ್.ಶಿವಾನಂದ್, ಯಲಹಂಕ ಸರ್ಕಾರಿ ಆಸ್ಪತ್ರೆಯ ಫಿಜಿಯೋಥೆರಪಿಸ್ಟ್‌ ರಾಜಶೇಖರ್‌ ಬೆಂಗಳೂರು ಎಫ್.ಡಿ.ಸಿ ಬಿಬಿಎಂಪಿ ರೋಡ್ಸ್ & ಇನ್ಸ್ಫಾಸ್ಟ್ರಕ್ಚರ್ ಮಾಯಣ್ಣ.ಎಂ, ಬೆಂಗಳೂರು ಸಕಾಲ ಅಡ್ಮಿನಿಸ್ಟೇಷನ್ ಆಫಿಸರ್ ಎಲ್.ಸಿ.ನಾಗರಾಜ್, ಯಶವಂತಪುರ ಬಿಬಿಎಂಪಿ ಡಿ ಗ್ರೂಪ್ ಸಿಬ್ಬಂದಿ ಜಿ.ವಿ.ಗಿರಿ, ಜೇವರ್ಗಿ ಲೋಕೋಪಯೋಗಿ ಇಲಾಖೆ ಜಾಯಿಂಟ್ ಎಂಜಿನಿಯರ್ ಎಸ್.ಎಂ.ಬಿರಾದಾರ್ ಅವರ ಮನೆಗಳ ಮೇಲೆ ದಾಳಿ ನಡೆದಿದೆ.

ಎಸಿಪಿ ಎಸ್ ಪಿ ಬಿ.ಸ್. ನೇಮಗೌಡ ನೇತೃತ್ವದಲ್ಲಿ ಬೆಳಗಾವಿ ನಗರದಲ್ಲಿ ಹೆಸ್ಕಾಂ ಡಿಪಾರ್ಟ್ ಮೆಂಟ್ ನ ಲೈನ್ ಮ್ಯಾಕನಿಕ್ ನಾತಾಜಿ ಪಾಟೀಲ್ ಕಚೇರಿ, ಮನೆ ಸೇರಿ 3 ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಟ್ಟು ೧೫ ಮಂದಿ ಅಧಿಕಾರಿಗಳ ಮೇಲೆ ನಿರಂತರವಾಗಿ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಈ ದಾಳಿಯನ್ನು ನಡೆಸಲಾಗಿದೆ. ೮ ಮಂದಿ ಎಸಿಬಿ, ೧೦೦ ಎಸ್‌ಪಿ, ೩೦೦ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಬೆಳ್ಳಂಬೆಳಗ್ಗೆಯೇ ಈ ದಾಳಿಯನ್ನು ನಡೆಸಲಾಗಿದ್ದು, ಇನ್ನಷ್ಟು ಕಡೆಗಳಲ್ಲಿ ಈ ದಾಳಿ ಮುಂದುವರಿಯುವ ಸಾಧ್ಯತೆಯಿದೆ.

Exit mobile version